• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯಕ್ಕೆ ಕೊರೊನಾ ಭೀತಿ: ಗಡಿ ಜಿಲ್ಲೆ ಕೋಲಾರದಲ್ಲಿ ಕಟ್ಟೆಚ್ಚರ

By ಕೋಲಾರ ಪ್ರತಿನಿಧಿ
|

ಕೋಲಾರ, ಮಾರ್ಚ್ 03: ಇಷ್ಟು ದಿನ ಚೀನಾವನ್ನು ಅಲ್ಲೋಲ ಕಲ್ಲೋಲ ಮಾಡಿದ್ದ ಡೆಡ್ಲಿ ಕೊರೋನಾ ವೈರಸ್ ಈಗ ರಾಜ್ಯಕ್ಕೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಕೋಲಾರದಲ್ಲೂ ಹೈಅಲರ್ಟ್ ಘೋಷಿಸಲಾಗಿದೆ.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಐದು ಬೆಡ್ ಗಳ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, ಅದಕ್ಕೆ ಪ್ರತ್ಯೇಕ ಸಿಬ್ಬಂದಿ ಹಾಗೂ ಪ್ರತ್ಯೇಕ ಔಷದಿ ಸೇರಿದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಪ್ರತಿ ತಾಲ್ಲೂಕು ಕೇಂದ್ರಗಳಲ್ಲೂ ಮೂರು ಬೆಡ್ ಗಳ ವಾರ್ಡ್ ತೆರೆಯಲಾಗಿದೆ.

ಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ, ಎಷ್ಟು ಸಾವು?

ಇನ್ನು ಕೋಲಾರವು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಂದ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳನ್ನು ಕೂಡಾ ಪ್ರತ್ಯೇಕ ನಿಗಾವಹಿಸಿ ನೋಡಲಾಗುತ್ತಿದೆ.

ಇನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೋಲಾರದಲ್ಲಿ ಹೈಅಲರ್ಟ್ ಘೋಷಣೆಯಾಗಿದ್ದು, ಕೋಲಾರದಿಂದ ಆಂಧ್ರ ಮತ್ತು ತಮಿಳುನಾಡಿನ ಸಾರಿಗೆ ಸಂಪರ್ಕದ ಮೇಲೂ ನಿಗಾ ವಹಿಸಲಾಗಿದೆ.

20 ಸೆಕೆಂಡುಗಳಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚಿದ ಆಲಿಬಾಬಾ

ಪ್ರತಿನಿತ್ಯ ಆಂಧ್ರ ಮತ್ತು ತಮಿಳುನಾಡಿಗೆ ಸರಾಸರಿ 94 ಬಸ್ ಗಳಿಂದ 320 ಟ್ರಿಪ್ ಸಂಚಾರ ನಡೆಸಲಾಗುತ್ತಿದೆ. ಕೋಲಾರ ಜಿಲ್ಲೆಯಿಂದ ಪ್ರತಿನಿತ್ಯ ಸರಾಸರಿ 10,000 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ.

ಜಿಲ್ಲೆಯ ಎಲ್ಲಾ ಸರ್ಕಾರಿ ಬಸ್ ನಿಲ್ದಾಣಗಳಲ್ಲೂ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗಿದ್ದು, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಜಾಗೃತಿ ಕಾಯ೯ಕ್ರಮವನ್ನು ಕೆಎಸ್ಆರ್ಟಿಸಿ ವಹಿಸಲಾಗಿದೆ. ಜೊತೆಗೆ ಕೋಲಾರ ಕೈಗಾರಿಕಾ ಪ್ರದೇಶಕ್ಕೆ ಬರುವ ವಿದೇಶಿಗರ ಮೇಲೂ ನಿಗಾವಹಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

English summary
The HighAlert has been announced in the border district Kolar as the coronavirus has now entered the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X