ಕೋಲಾರ : ಚುನಾವಣೆಗೂ ಮುನ್ನ 8 ಕಾಂಗ್ರೆಸ್ ನಾಯಕರ ಅಮಾನತು

Recommended Video

      Kolar: 8 ಕಾಂಗ್ರೆಸ್ ನಾಯಕರನ್ನ ಅಮಾನತು ಮಾಡಿದ ಕೋಲಾರ ಕಾಂಗ್ರೆಸ್ | Oneindia Kannada

      ಕೋಲಾರ, ಏಪ್ರಿಲ್ 17 : ಲೋಕಸಭಾ ಚುನಾವಣೆಗೆ ಒಂದು ದಿನ ಮೊದಲು ಕೋಲಾರ ಕಾಂಗ್ರೆಸ್ 8 ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದೆ. ಇವರಲ್ಲಿ ಮುಳಬಾಗಿಲು ಜಿಲ್ಲಾ ಪಂಚಾಯಿತಿಯ ಮೂವರು ಸದಸ್ಯರು ಸೇರಿದ್ದಾರೆ.

      ಕೋಲಾರ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅವರು 8 ನಾಯಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 18ರ ಗುರುವಾರ ನಡೆಯಲಿದೆ.

      ಕೋಲಾರ ಲೋಕಸಭಾ ಕ್ಷೇತ್ರದ ಪರಿಚಯ

      ಪಕ್ಷ ವಿರೋಧಿ ಚಟುವಟಿಕೆ ಮತ್ತು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿರುದ್ಧ ಪ್ರಚಾರ ನಡೆಸಿದ ಆರೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರವಾಗಿ ಅವರು ಪ್ರಚಾರ ನಡೆಸುತ್ತಿದ್ದರು.

      Congress suspends 8 leaders in Kolar

      ಮಂಡ್ಯದಲ್ಲಿಯೂ ಕಾಂಗ್ರೆಸ್ ಇದೇ ತಂತ್ರವನ್ನು ಅನುಸರಿಸಿತ್ತು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸುತ್ತಿದ್ದ ಏಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಅಮಾನತುಗೊಳಿಸಿತ್ತು.

      ಅಮಾನತುಗೊಂಡವರು

      * ಪ್ರಕಾಶ್ ರಾಮಚಂದ್ರ (ಜಿ.ಪಂಚಾಯಿತಿ ಸದಸ್ಯ)
      * ನಾಗಮಣಿ (ಜಿ.ಪಂಚಾಯಿತಿ ಸದಸ್ಯೆ)
      * ಕೃಷ್ಣಪ್ಪ (ಜಿ.ಪಂಚಾಯಿತಿ ಸದಸ್ಯ)
      * ವಿವೇಕಾನಂದ (ಎಪಿಎಂಸಿ ಸದಸ್ಯ)
      * ಗಂಗಿ ರೆಡ್ಡಿ (ಪಿಎಲ್‌ಡಿ ಬ್ಯಾಂಕ್)
      * ಶ್ರೀನಾಥ್ (ಪಿಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ)
      * ಶ್ರೀನಿವಾಸ್ (ತಾ.ಪಂಚಾಯಿತಿ ಸದಸ್ಯ)
      * ಮಂಜುನಾಥ್ (ಎಪಿಎಂಸಿ ಅಧ್ಯಕ್ಷ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+