Kolar Clash: ಕೋಲಾರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ
ಕೋಲಾರ ಸೆಪ್ಟೆಂಬರ್ 17: ಈದ್ ಮಿಲಾದ್ ಮೆರವಣಿಗೆ ವೇಳೆ ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಐವರು ಗಾಯಗೊಂಡ ಘಟನೆ ಕೋಲಾರದಲ್ಲಿ ನಡೆದಿದೆ. ಕಳೆದ ದಿನ (ಸೆ.16) ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಐದಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ದಿನ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆರವಣಿಗೆ ಹೊರಟಿದ್ದರು. ಈ ವೇಳೆ ಮಾರಕಾಸ್ತ್ರಗಳನ್ನು ಬಳಕೆ ಮಾಡಲಾಗಿದೆ. ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದೆ. ನಗರದ ಕ್ಲಾಕ್ ಟವರ್ ಬಳಿ ಗಲಾಟೆ ನಡೆದಿದ್ದು, ಮಾರಕಾಸ್ತ್ರಗಳಿಂದ ಥಳಿಸಲಾಗಿದೆ.

ಘಟನೆಯಲ್ಲಿ ಕಲೀಲ್ ಅಹ್ಮದ್, ಸೈಯದ್ ಸಲ್ಮಾನ್, ಹುಸೇನ್ ಕಾಷಿಪ್, ಸೈಫ್ ಎಂಬುವವರಿಗೆ ಗಾಯವಾಗಿದ್ದು, ಎಸ್‌ಎಸ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೆಲ ಹೊತ್ತಿನ ಬಳಿಕ ಸ್ಥಳದಲ್ಲಿ ಶಾಂತಿ ಕಾಪಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳಿಕ ಮೆರವಣಿಗೆ ಮುಂದೆ ಸಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ಮೇಲ್ವೀಚರಣೆ ಮಾಡಿದ್ದು ಈ ವೇಳೆ ಸಯ್ಯದ್ ವಸೀಂ ಪಾಷಾ, ಥಾಹೀರ್ ಎಂಬುವವರ ಗುಂಪಿನಿಂದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಕ್ಷುಲ್ಲಕ ಕಾರಣಕ್ಕೆ ಈ ಗಲಾಟೆ ನಡೆದಿದೆ. ಬಾವುಟ ಹಾರಿಸುವ ವಿಚಾರವಾಗಿ ಎರಡು ಗುಂಪುಗಳು ಜಗಳ ಆಡಿದೆ. ಸೈಯದ್ ಸೈಫ್, ಸೈಯ್ಯದ್ ಸಲ್ಮಾನ್ ಹಾಗೂ ವಸೀಂ ಪಾಷಾ, ಥಾಹೀರ್ ಎಂಬುವವರ ನಡುವೆ ಮೊದಲು ಗಲಾಟೆ ಆರಂಭವಾಗಿದೆ. ಬಳಿಕ ಪ್ರಾರ್ಥನೆ ನಿಲ್ಲಿಸಿ ಮರಳಿ ಹೋಗುವಾಗ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಸಯ್ಯದ್ ವಸೀಂ ಪಾಷಾ, ಥಾಹೀರ್ ಗುಂಪಿನಿಂದ ಲಾಂಗ್ ಗಳಿಂದ ಹಲ್ಲೆ ಮಾಡಲಾಗಿದೆ. ಇನ್ನು ಘಟನೆ ಬಳಿಕ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.












Click it and Unblock the Notifications