ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಹೂತಿದ್ದ ಯುವತಿ ಶವವನ್ನು ಮತ್ತೆ ತೆಗೆಯುವಂತೆ ಮಾಡಿತು ಫೋನ್ ಕಾಲ್

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜನವರಿ 21: ಮೂರು ದಿನದ ಹಿಂದೆ ನೀರಿನ ಸಂಪಿನಲ್ಲಿ ಬಿದ್ದು ಸಾವನ್ನಪ್ಪಿದ ಯುವತಿಯ ಶವ ಸಂಸ್ಕಾರ ಮಾಡಿದ್ದು, ಇಂದು ಹೂತಿದ್ದ ಶವವನ್ನು ತೆಗೆದು ಪರೀಕ್ಷೆ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಇದಕ್ಕೆಲ್ಲ ಕಾರಣವಾಗಿದ್ದು ಒಂದು ಫೋನ್ ಕಾಲ್.

Recommended Video

ಟೀಚರ್ಸ್ ವಿರುದ್ಧ ಕ್ರಮ ಕೈಗೊಳ್ತಾರಾ ಸಚಿವ ಸುರೇಶ್ ಕುಮಾರ್ | TEACHER DANCE | ONEINDIA KANNADA

ಕೋಲಾರ ತಾಲ್ಲೂಕಿನ ಗದ್ದೆ ಕಣ್ಣೂರು ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಪಿಯುಸಿ ವಿದ್ಯಾರ್ಥಿನಿ ಲಕ್ಷ್ಮೀ ನೀರಿನ ಸಂಪ್ ನಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಗದ್ದೆಕಣ್ಣೂರು ಗ್ರಾಮದ ದೇವರಾಜ್ ಹಾಗೂ ಮುನಿಲಕ್ಷ್ಮಮ್ಮ ದಂಪತಿ ಮಗಳು, 17 ವರ್ಷದ ಲಕ್ಷ್ಮೀ ಸಾವನ್ನು ಮೊದಲು ಸಹಜ ಎಂದೇ ಭಾವಿಸಿದ್ದರು ಮನೆಯವರು. ಆದರೆ ಆಕೆ ಸತ್ತ ಮಾರನೇ ದಿನ ಆಕೆಯ ಪ್ರಿಯಕರ ಎಂದು ಹೇಳಿಕೊಂಡು ಯುವಕನೊಬ್ಬ ಪೋಷಕರಿಗೆ ಕರೆ ಮಾಡಿದ್ದ. ನಾನು ಪ್ರೀತಿಸುತ್ತಿದ್ದ ಹುಡುಗಿಗೆ ಏನಾಯ್ತು ಎಂದು ಪೋಷಕರಿಗೆ ಧಮ್ಕಿ ಹಾಕುವಂತೆ ಕೇಳಿದ್ದ.

ಒಂದೇ ಹುಡುಗಿಗಾಗಿ ಇಬ್ಬರ ಹೊಡೆದಾಟ; ಕೊಲೆಯಲ್ಲಿ ಕೊನೆಯಾಯ್ತು ಜಗಳಒಂದೇ ಹುಡುಗಿಗಾಗಿ ಇಬ್ಬರ ಹೊಡೆದಾಟ; ಕೊಲೆಯಲ್ಲಿ ಕೊನೆಯಾಯ್ತು ಜಗಳ

ಇದರಿಂದ ಅನುಮಾನಗೊಂಡ ಪೋಷಕರು, ನಮ್ಮ ಮಗಳನ್ನು ಯಾರೋ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಜನವರಿ 18ರಂದು ಶನಿವಾರ 3 ಗಂಟೆಗೆ ಕಾಲೇಜು ಮುಗಿಸಿಕೊಂಡು ಮನೆಗೆ ಬಂದಿದ್ದ ಲಕ್ಷ್ಮೀಯನ್ನು ಮನೆಯಲ್ಲಿ ಬಿಟ್ಟು ಉಳಿದವರೆಲ್ಲ ತೋಟದ ಬಳಿ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದರೆ ಮಗಳು ಎಲ್ಲೂ ಕಾಣಲಿಲ್ಲ. ಬಳಿಕ ನೀರೆತ್ತಲು ಸಂಪ್ ತೆಗೆದ ವೇಳೆ ಸಂಪ್ ನಲ್ಲಿ ಆಕೆಯ ಶವ ಪತ್ತೆಯಾಗಿದೆ.

Buried Body Taken Out To Investigation In Kolar

ಆಯ ತಪ್ಪಿ ಬಿದ್ದಿರಬಹುದು ಎಂದು ಶನಿವಾರ ಸಂಜೆಯೇ ಶವ ಸಂಸ್ಕಾರ ಮಾಡಿದ್ದಾರೆ. ಆದರೆ ಭಾನುವಾರ ಬಂದ ಯುವಕನ ಕರೆ ಅನುಮಾನ ಮೂಡಿಸಿದೆ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂಬ ಶಂಕೆಯಿಂದ ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಎಫ್ಎಸ್ಎಲ್ ವರದಿಗಾಗಿ ಕಳುಹಿಸಿಕೊಟ್ಟಿದ್ದಾರೆ.

ನಗುನಗುತ್ತಾ ಹೊಸ ವರ್ಷಾಚರಣೆಗೆ ಹೊರಟ ಮಗ ಮನೆಗೆ ಬಂದದ್ದು ಹೆಣವಾಗಿನಗುನಗುತ್ತಾ ಹೊಸ ವರ್ಷಾಚರಣೆಗೆ ಹೊರಟ ಮಗ ಮನೆಗೆ ಬಂದದ್ದು ಹೆಣವಾಗಿ

ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಯುವತಿ ಸತ್ತ ಮಾರನೇ ದಿನ ಬಂತು ಫೋನ್ ಕಾಲ್

ಯುವತಿ ಸತ್ತ ಮಾರನೇ ದಿನ ಬಂತು ಫೋನ್ ಕಾಲ್

ಮೊದಲು ಲಕ್ಷ್ಮೀ ಸಾವನ್ನು ಸಹಜ ಎಂದೇ ಭಾವಿಸಿದ್ದರು ಮನೆಯವರು. ಕಾಲು ಜಾರಿ ಸಂಪಿನಲ್ಲಿ ಬಿದ್ದು ಸತ್ತಿದ್ದಾಳೆ ಎಂದು ತಿಳಿದು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ಆಕೆ ಸತ್ತ ಮಾರನೇ ದಿನ ಆಕೆಯ ಪ್ರಿಯಕರ ಎಂದು ಹೇಳಿಕೊಂಡು ಯುವಕನೊಬ್ಬ ಪೋಷಕರಿಗೆ ಕರೆ ಮಾಡಿದ್ದ. ನಾನು ಪ್ರೀತಿಸುತ್ತಿದ್ದ ಹುಡುಗಿಗೆ ಏನಾಯ್ತು ಎಂದು ಪೋಷಕರಿಗೆ ಧಮ್ಕಿ ಹಾಕುವಂತೆ ಕೇಳಿದ್ದ. ಇದರಿಂದ ಪೋಷಕರಲ್ಲಿ ಅನುಮಾನ ಹುಟ್ಟಿಕೊಂಡಿತು.

 ಮನೆಯಲ್ಲಿ ಒಬ್ಬಳೇ ಇದ್ದ ಲಕ್ಷ್ಮಿ

ಮನೆಯಲ್ಲಿ ಒಬ್ಬಳೇ ಇದ್ದ ಲಕ್ಷ್ಮಿ

ಜನವರಿ 18ರಂದು ಶನಿವಾರ 3 ಗಂಟೆಗೆ ಕಾಲೇಜು ಮುಗಿಸಿಕೊಂಡು ಮನೆಗೆ ಬಂದಿದ್ದ ಲಕ್ಷ್ಮೀಯನ್ನು ಮನೆಯಲ್ಲಿ ಬಿಟ್ಟು ಉಳಿದವರೆಲ್ಲ ತೋಟದ ಬಳಿ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದರೆ ಮಗಳು ಎಲ್ಲೂ ಕಾಣಲಿಲ್ಲ. ಗಾಬರಗೊಂಡಿದ್ದ ಅವರು, ಬಳಿಕ ನೀರೆತ್ತಲು ಸಂಪ್ ತೆಗೆದ ವೇಳೆ ಸಂಪ್ ನಲ್ಲಿ ಆಕೆಯ ಶವ ಕಂಡುಬಂದಿದೆ. ಅಂದೇ ಲಕ್ಷ್ಮಿಯ ಶವಸಂಸ್ಕಾರ ಮಾಡಿದ್ದಾರೆ.

 ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು

ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು

ಆದರೆ ಭಾನುವಾರ ಬಂದ ಆ ಒಂದು ಕರೆಯಿಂದ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂಬ ಶಂಕೆ ಹುಟ್ಟಿದ್ದು, ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ನಮ್ಮ ಮಗಳನ್ನು ಕೊಂದಿದ್ದಾರೆ. ತನಿಖೆ ನಡೆಸಿ ಎಂದು ಪೊಲೀಸರಲ್ಲಿ ಕೇಳಿಕೊಂಡಿದ್ದಾರೆ ಲಕ್ಷ್ಮೀ ತಂದೆ ತಾಯಿ.

 ಹೂತಿದ್ದ ಶವ ತೆಗೆದರು

ಹೂತಿದ್ದ ಶವ ತೆಗೆದರು

ಹೀಗೆ ದೂರು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸರು ತಹಶೀಲ್ದಾರ್ ಸಮ್ಮುಖದಲ್ಲಿ ಲಕ್ಷ್ಮಿಯ ಹೂತಿದ್ದ ಮೃತದೇಹವನ್ನು ಮತ್ತೆ ಹೊರಗೆ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಎಫ್ಎಸ್ಎಲ್ ವರದಿಗಾಗಿ ಕಳುಹಿಸಿಕೊಟ್ಟಿದ್ದಾರೆ. ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

English summary
A girl's buried body taken out to investigate in kolar. A girl named lakshmi was died three days before in water sump in gaddekannuru village in kolar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X