ಯಕ್ಷಗಾನ ಹಿರಿಯ ಕಲಾವಿದ ತಿಮ್ಮಣ್ಣಯಾಜಿ ಮಣ್ಣಿಗೆ ವಿಧಿವಶ
ಹೊನ್ನಾವರ, ಡಿಸೆಂಬರ್ 22: ಯಕ್ಷಗಾನದ ಶಕಪುರುಷ ಕೆರೆಮನೆ ಶಿವರಾಮ ಹೆಗಡೆಯವರ ಜೊತೆ ಅಭಿನಯಿಸುತ್ತಿದ್ದ ಯಕ್ಷಗಾನ ಹಿರಿಯ ಕಲಾವಿದ ತಿಮ್ಮಣ್ಣ ಯಾಜಿ ಮಣ್ಣಿಗೆ ಇವರು 94ನೇ ವಯಸ್ಸಿನಲ್ಲಿ ಮಿದುಳು ಆಘಾತದಿಂದ ಮಂಗಳವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ.
ಕೆರೆಮನೆಯ ಮೂರು ತಲೆಮಾರಿನ ಕಲಾವಿದರ ಜೊತೆ ಅಭಿನಯಿಸಿದ ಇವರು ಕೆರೆಮನೆ ಮೇಳದಿಂದ ಕಲಾಸೇವೆ ಆರಂಭಿಸಿ, ಅಲ್ಲಿಂದಲೇ ನಿವೃತ್ತಿ ಪಡೆದಿದ್ದರು. ಶಿವರಾಮ ಹೆಗಡೆಯವರ ಜರಾಸಂಧ ಇವರ ಭೀಮನ ಜೋಡಿ ಪ್ರಸಿದ್ಧ ವಾಗಿತ್ತು.. ಭೀಮ,ಧರ್ಮ ರಾಯ,ಕಿರಾತ,ಮೊದಲಾದ ಇವರ ಪಾತ್ರಗಳು ಪ್ರಸಿದ್ಧ ವಾಗಿದ್ದವು.
ಮೃತರು 3 ಗಂಡು,ಮತ್ತು ಮಗಳನ್ನು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಶಾಸಕ ಸುನೀಲ ನಾಯ್ಕ, ಕೆರೆಮನೆ ಶಿವಾನಂದ ಹೆಗಡೆ,ಬಳ್ಕೂರ ಕೃಷ್ಣಯಾಜಿ,ಸಪ್ತಕದ ಜಿ.ಎಸ್ ಹೆಗಡೆ ಮೊದಲಾದವರು ತೀವ್ರ ಸಂತಾಪ ವ್ಯಕ್ತ ಮಾಡಿದ್ದಾರೆ.

ಇಳಿವಯಸ್ಸಿನಲ್ಲಿ ದೇವಾಲಯವೊಂದರಲ್ಲಿ ಅರ್ಚಕರಾಗಿ ಕೆಲಸಮಾಡಿದ್ದ ಇವರು ವಿನಯಶೀಲ,ಸದ್ಗುಣಿ ಕಲಾವಿದರಾಗಿದ್ದರು.












Click it and Unblock the Notifications