ಮೀನುಗಾರಿಕೆ ಆರಂಭವಾದರೂ ಬಾರದ ಕಾರ್ಮಿಕರು: ಬಂದರಿನಲ್ಲೇ ಉಳಿದ ಬೋಟ್‌ಗಳು
ಕಾರವಾರ, ಆಗಸ್ಟ್ 13: ಪ್ರತಿಸಲಕ್ಕಿಂತಲೂ ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಮೀನುಗಾರರು ಈ ಬಾರಿಯೂ ನಷ್ಟ ಅನುಭವಿಸುವಂತಾಗಿದೆ. ಮೀನುಗಾರಿಕೆ ನಡೆಸಲು ಉತ್ತಮ ವಾತಾವರಣ ಇದ್ದರೂ ಸಹ ಮೀನುಗಾರಿಕೆಗೆ ಕಾರ್ಮಿಕರು ಸಿಗದೆ ಬೋಟುಗಳನ್ನು ಬಂದರುಗಳಲ್ಲಿ ಲಂಗರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಮೀನುಗಾರಿಕಾ ಬಂದರುಗಳಲ್ಲಿ ಉತ್ತರ ಪ್ರದೇಶ, ಜಾರ್ಖಂಡ, ಓಡಿಶಾ ಸೇರಿದಂತೆ ಇನ್ನಿತರ ರಾಜ್ಯದ ಹೆಚ್ಚಿನ ಕಾರ್ಮಿಕರೇ ದುಡಿಯುತ್ತಾರೆ. ಆದರೆ ಈವರೆಗೆ ಆಯಾ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ದುಡಿಯುವ ಕಾರ್ಮಿಕರು ಈಗ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರಿಂದ ಹೆಚ್ಚಿನ ಕಾರ್ಮಿಕರು ಮೀನುಗಾರಿಕಾ ಬೋಟಿಗಳಿಗೆ ದುಡಿಲು ಆಗಮಿಸದೆ ಇದ್ದರಿಂದ ಸ್ಥಳೀಯ ಮೀನುಗಾರಿಕಾ ಬೋಟುಗಳಿಗೆ ಮೀನುಗಾರಿಕೆಗೆ ತೆರಳು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಹೆಚ್ಚಿನ ಪರ್ಶಿನ್ ಬೋಟುಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೆ ಬೈತಖೋಲದ ಮೀನುಗಾರಿಕಾ ಜಟ್ಟಿಯಲ್ಲೇ ಲಂಗರು ಹಾಕಿವೆ.

ಮಳೆಗಾಳದ ಆರಂಭದಿಂದ ಮೀನುಗಳ ಸಂತತಿ ಬೆಳವಣಿಗೆ ಹಾಗೂ ಹೆಚ್ಚಿನ ಮಳೆ ಗಾಳಿ ಇರುವ ಕಾರಣದಿಂದಾಗಿ ಸರ್ಕಾರ ಒಟ್ಟು 61 ದಿನಗಳ ಕಾಲ ಮೀನುಗಾರಿಕೆಯನ್ನು ಸಂಪೂರ್ಣವಾಗಿ ಬಂದ್ ಮಾಡುತ್ತದೆ. ಈ ಅವಧಿಯಲ್ಲಿ ಮೀನುಗಾರಿಕೆ ಇಲ್ಲದೆ ಪರ್ಶಿನ್, ಟ್ರಾಲರ್ ಬೋಟ್ ಮಾಲೀಕರು ನಷ್ಟ ಅನುಭವಿಸುತ್ತಾರೆ. ಸದ್ಯ ಆಗಸ್ಟ್ 1ರಿಂದ ಮೀನುಗಾರಿಕೆ ಆರಂಭಗೊಂಡಿದೆ. ಕೆಲವು ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಉಳಿದ ಬೋಟುಗಳು ಆಗಸ್ಟ್ 6ರಿಂದ ಆರಂಭಿಸಿವೆ. ಆದರೆ ಕಾರ್ಮಿಕರ ಸಮಸ್ಯೆಯಿಂದ ನೂರಾರು ಬೋಟಿಯವರಿಗೆ ಮೀನುಗಾರಿಕೆ ಆರಂಭಿಸಲು ಸಾಧ್ಯವಾಗಿಲ್ಲ. ನೂರಾರು ಬೋಟುಗಳು ಲಂಗರು ಹಾಕಿವೆ.
ಮೀನುಗಾರಿಕೆಗೆ ಉತ್ತಮ ವಾತಾವರಣ
ಪ್ರತಿ ವರ್ಷ ಆ1ರಿಂದ ಮಳೆಗಾಲ ಆರಂಭವಾದರೂ ಸಹ ಭಾರಿ ಮಳೆ, ಗಾಳಿ, ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಸಾಮಾನ್ಯವಾಗಿತ್ತು. ಇದರಿಂದ ಮೀನುಗಾರಿಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈ ಅವಧಿಯಲ್ಲೂ ಮೀನುಗಾರಿಕೆ ಸಾಧ್ಯವಾಗದೆ. ನಷ್ಟ ಅನುಭವಿಸುವಂತಾಗಿತ್ತು. ಆದರೆ ಈ ವರ್ಷ ಮಳೆ-ಗಾಳಿಯ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿದೆ. ಮೀನುಗಾರಿಕೆಗೆ ಉತ್ತಮ ವಾತಾವರಣವೂ ಇದೆ. ಕಳೆದ 10 ದಿನಗಳಿಂದ ಉತ್ತಮ ಮೀನುಗಾರಿಕೆಯಲ್ಲಿ ಇರಬೇಕಾಗಿದ್ದ ಮೀನುಗಾರಿಕಾ ಬೋಟುಗಳೂ ಅನಿವಾರ್ಯವಾಗಿ ಲಂಗರು ಹಾಕಿವೆ.
ಮೀನುಗಾರಿಕೆಗೆ ಬಾರದ ಕಾರ್ಮಿಕರು
ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ತಲಾ ಒಂದು ಬೋಟುಗಳಿಗೆ ಸುಮಾರು 30 ರಿಂದ 35 ಕಾರ್ಮಿಕರ ಅಗತ್ಯ ಇರುತ್ತವೆ. ಪರ್ಶಿನ್ ಬೋಟುಗಳು ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದರೆ ವಾಪಸ್ಸಾಗುವುದು 5 ದಿನಗಳ ಬಳಿಕ. ಈ ಬೋಟುಗಳಿಗೆ ಹೆಚ್ಚಿನ ಕಾರ್ಮಿಕರ ಅಗತ್ಯವಿದೆ. ಟ್ರಾಲರ್ ಬೋಟುಗಳಿಗೆ ನಿತ್ಯ ಮೀನುಗಾರಿಕೆ ಮಾಡುವ ಬೋಟ್ ಆಗಿದ್ದು 10 ಕಾರ್ಮಿಕರ ಸಾಕು. ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಇನ್ನಿತರ ರಾಜ್ಯದವರಾಗಿದ್ದರಿಂದ ಇವರೆಗೆ ಶೇ.10 ರಷ್ಟು ಕಾರ್ಮಿಕರು ವಾಪಸ್ಸಾಗದೆ ಇದ್ದರಿಂದ ಜಿಲ್ಲೆಯ ಅನೇಕ ಬೋಟುಗಳಿಗೆ ತೊಂದರೆ ಸೃಷ್ಟಿಯಾಗಿದೆ.

ಬೈತಖೋಲ ಬಂದರು ಬಂದರಲ್ಲೇ 128 ಪರ್ಶಿನ್ ಬೋಟುಗಳ ನೋಂದಣಿಯಾಗಿದೆ. ಅಲ್ಲದೆ ಟ್ರಾಲರ್ ಬೋಟುಗಳು ಇವೆ. ಜಿಲ್ಲೆಯ ಬೈತಕೋಲ್, ಅಂಕೋಲಾದ ಬೇಲೇಕೇರಿ, ತದಡಿ, ಭಟ್ಕಳ, ಕಾಸಕೋಡು, ಮುದಗಾ ಹಾಗೂ ಇನ್ನಿತರ ಕಡೆ ಇರುವುದು ಪ್ರಮುಖ ಮೀನುಗಾರಿಕಾ ಬಂದರುಗಳಾಗಿವೆ. ಈ ಎಲ್ಲ ಮೀನುಗಾರಿಕಾ ಬಂದರಿನ ಆಳ ಸಮುದ್ರ ಮೀನುಗಾರಿಕಾ ಬೋಟುಗಳಲ್ಲಿ ದುಡಿಯುವವರು ಹೊರ ರಾಜ್ಯದ ಕಾರ್ಮಿಕರೇ ಆಗಿದ್ದು ಎಲ್ಲ ಕಡೆಯೂ ಕಾರ್ಮಿಕರ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದ ಬ್ಯಾಂಕ್‌ಗಳ ಮೂಲಕ ಸಾಲ ಮಾಡಿಕೊಂಡಿರುವ ಅನೇಕ ಮೀನುಗಾರರು ಇಂದು ಸಾಲಕಟ್ಟಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಸ್ಥಳೀಯ ಮೀನುಗಾರರು ಉತ್ತಮ ಮೀನಿನ ನಿರೀಕ್ಷೆಯಲ್ಲಿದ್ದೇವು. ಆದರೆ ಹೊರ ರಾಜ್ಯದ ಕಾರ್ಮಿಕರು ಈವರೆಗೂ ಬಂದಿಲ್ಲ. ಈಗಾಗಲೇ ಮೀನುಗಾರಿಕೆ ಆರಂಭಗೊಂಡಿದೆ. ಹೆಚ್ಚಿನ ಬೋಟುಗಳು ಕಾರ್ಮಿಕರ ಸಮಸ್ಯೆಯಿಂದ ಬೈತಖೋಲ್ ಮೀನುಗಾರಿಕಾ ಜಟ್ಟಿಯಲ್ಲೇ ಲಂಗರೂ ಹಾಕಿದ್ದಾರೆ. ಅನೇಕ ಮೀನುಗಾರರು ಬ್ಯಾಂಕ್‌ಗಳ ಮೂಲಕ ಸಾಲ ಮಾಡಿಕ ಬೋಟುಗಳನ್ನು ಮಾಡಿಕೊಂಡಿದ್ದಾರೆ. ಮೀನುಗಾರಿಕೆ ಇಲ್ಲದೆ ಬ್ಯಾಂಕ್ ಸಾಲ ಕಟ್ಟುವುದು ಸಹ ಕಷ್ಟವಾಗಿದೆ ಎಂದು ಬೈತಖೋಲದ ಮೀನುಗಾರ ನಿತಿನ್ ರಮಾಕಾಂತ್ ಗಾಂವಕಾರ್ ಹೇಳಿದ್ದಾರೆ.












Click it and Unblock the Notifications