ಸಮುದ್ರದಾಳದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಸಂದೀಪ್-ಲಾವಣ್ಯಾ

By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ಫೆಬ್ರುವರಿ 13: ಪ್ರೇಮಿಗಳ ದಿನಾಚರಣೆಯ ನಿಮಿತ್ತ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯು ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ವಿಶೇಷವಾಗಿ ಸ್ಕೂಬಾ ಡೈವಿಂಗ್ ಅನ್ನು ಆಯೋಜಿಸಿತ್ತು. ಪ್ರೇಮಿಗಳು ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ವಿಶೇಷವಾಗಿ ಅವಕಾಶ ಮಾಡಿಕೊಟ್ಟಿತ್ತು.

ಮುರುಡೇಶ್ವರಕ್ಕೆ ಬಂದಿದ್ದ ಜೋಡಿಯೊಂದು ತಮ್ಮ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದಲ್ಲಿ ಆಚರಿಸಿಕೊಂಡಿತು. ಸಂದೀಪ್ ಹಾಗೂ ಲಾವಣ್ಯಾ ದಂಪತಿಯೇ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಮುದ್ರದಾಳದಲ್ಲಿ ಆಚರಿಸಿಕೊಂಡ ಜೋಡಿ.

ಪ್ರೇಮಿಗಳ ದಿನದಂದು ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿ

ಸಮುದ್ರದಳಾದ ಜೀವಿ ಪ್ರಪಂಚಗಳನ್ನು ಕಣ್ತುಂಬಿಕೊಂಡ ಈ ಜೋಡಿಯು, ಅಲ್ಲೇ ತಮ್ಮ ಮದುವೆಯ ದಿನದ ಮೆಲುಕು ಹಾಕಿದರು. ಒಬ್ಬರಿಗೊಬ್ಬರು ಸಮುದ್ರದೊಳಗೆ ಗುಲಾಬಿಯ ಗುಚ್ಛ ಹಿಡಿದು ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡರು. ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ನುರಿತ ಸ್ಕೂಬಾ ಡೈವರ್ಸ್ ಗಳು ಈ ಜೋಡಿಯನ್ನು ಸಮುದ್ರದಾಳಕ್ಕೆ ಕರೆದೊಯ್ದಿದ್ದರು.

Wedding anniversary celebrated differently by Sandeep- Lavanya

ಪ್ರೇಮಿಗಳಿಗಾಗಿ ರಿಯಾಯಿತಿ ದರದಲ್ಲಿ, ಉಚಿತ ವಸತಿ ಸೌಲಭ್ಯದೊಂದಿಗೆ ಫೆಬ್ರವರಿ 18ರ ವರೆಗೆ ಈ ವಿಶೇಷ ಅವಕಾಶವನ್ನು ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆ ಕಲ್ಪಿಸಿದೆ.

Wedding anniversary celebrated differently by Sandeep- Lavanya

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sandeep- Lavanya couple celebrated their first wedding anniversary differently in Netrani island, Muradeshwar. Read the story to know how they celebrated.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ