ಸೋದರ ಮಾವನ ವಿರುದ್ದವೇ ಕುಮಾರ್ ಬಂಗಾರಪ್ಪ ಭರ್ಜರಿ ಪ್ರಚಾರ

ಹಾವೇರಿ, ನ 18: 'ಸಂಬಂಧ'ಗಳು ಆಮೇಲೆ, ಮೊದಲು ರಾಜಕೀಯ ಎನ್ನುವಂತೆ, ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರವೊಂದರಲ್ಲಿ, ಕಣದಲ್ಲಿರುವ ಸೋದರ ಮಾವನ ವಿರುದ್ದವೇ ಅಳಿಯ ಪ್ರಚಾರ ನಡೆಸುತ್ತಿದ್ದಾರೆ.

ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಮ ಹೆಬ್ಬಾರ್, ಕಾಂಗ್ರೆಸ್ಸಿನಿಂದ ಭೀಮಣ್ಣ ನಾಯ್ಕ್ ಮತ್ತು ಜೆಡಿಎಸ್ ನಿಂದ ಚೈತ್ರಾ ಗೌಡ ಸ್ಪರ್ಧಿಸುತ್ತಿದ್ದಾರೆ.

ಶಿವರಾಮ ಹೆಬ್ಬಾರ್ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಅನಂತ್ ಕುಮಾರ್ ಹೆಗಡೆ, ಶಾಸಕರಾದ ಕುಮಾರ್ ಬಂಗಾರಪ್ಪ, ರೂಪಾಲಿ ನಾಯ್ಕ, ಹರೀಶ್ ಪೂಂಜಾ ಮುಂತಾದವರು ಹಾಜರಿದ್ದರು.

Soraba BJP MLA Kumar Bangarappa To Campaign Against His Uncle In Yellapur

ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ಅವರಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿರುವುದು ಕಾಂಗ್ರೆಸ್ಸಿನ ಭೀಮಣ್ಣ ನಾಯ್ಕ್. ಪಾಟೀಲ್ ಪರವಾಗಿ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಪ್ರಚಾರ ನಡೆಸುತ್ತಿದ್ದಾರೆ.

ಹಾಗಾಗಿ, ಇಲ್ಲಿ, ಕುಮಾರ್ ಬಂಗಾರಪ್ಪ ತಮ್ಮ ಸೋದರ ಮಾವ, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಭೀಮಣ್ಣ ನಾಯ್ಕ್ ಅವರ ವಿರುದ್ದ ಕ್ಯಾಂಪೇನ್ ಮಾಡುತ್ತಿದ್ದಾರೆ. ಕುಮಾರ್ ಬಂಗಾರಪ್ಪನವರ ತಾಯಿಯ ಸಹೋದರ ಭೀಮಣ್ಣ ನಾಯ್ಕ್.

ಕಳೆದ 2018ರ ಅಸೆಂಬ್ಲಿ ಚುನಾವಣೆಯಲ್ಲಿ, ಸೊರಬ ಕ್ಷೇತ್ರದಿಂದ, ಬಿಜೆಪಿಯಿಂದ ಸ್ಪರ್ಧಿಸಿದ್ದ ಕುಮಾರ್ ಬಂಗಾರಪ್ಪ, ತಮ್ಮ ಸಹೋದರ ಮಧು ಬಂಗಾರಪ್ಪ ವಿರುದ್ದ 13,286 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+