"ಕಾರ್ಮಿಕ ಸುರಕ್ಷತೆಗೆ ಮೊದಲ ಆದ್ಯತೆ" ಶಿವರಾಮ ಹೆಬ್ಬಾರ್ ಟ್ವೀಟ್
ಯಲ್ಲಾಪುರ, ಫೆಬ್ರವರಿ 13: ಕಾರ್ಮಿಕ ಸಚಿವರಾದ ನಂತರ ಸಚಿವ ಶಿವರಾಮ ಹೆಬ್ಬಾರ್, "ಕಾರ್ಮಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು" ಎಂದು ಟ್ವೀಟ್ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆ ಕಾರ್ಮಿಕರ ಭಾವಚಿತ್ರ ಬಳಸಿದ ಟ್ವೀಟ್ ಮಾಡಿರುವ ಹೆಬ್ಬಾರ್, ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಸಮಗ್ರ ಯೋಜನೆಯನ್ನು ರೂಪಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ. ಯಾವುದೇ ಕಟ್ಟಡ ನಿರ್ಮಾಣ ವೇಳೆಯಲ್ಲಿ ಅವಘಡವಾದರೆ, ನೀವು ಅದರ ಛಾಯಾಚಿತ್ರವನ್ನು ತೆಗೆದು @Karmika_Sahaya ಟ್ಯಾಗ್ ಮಾಡಿ ಎಂದು ತಿಳಿಸಿದ್ದಾರೆ.

ಶಿವರಾಮ್ ಹೆಬ್ಬಾರ್ ಅವರ ಕಾರ್ಮಿಕ ಪರ ಕಾಳಜಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.












Click it and Unblock the Notifications