ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಸತೀಶ್ ಸೈಲ್‍ಗೆ ಮತ್ತೆ ಗಣಿ ಕಂಟಕ?

By ದೇವರಾಜ ನಾಯ್ಕ್‌
|
Google Oneindia Kannada News

ಕಾರವಾರ, ಏಪ್ರಿಲ್ 10: ಬೆಲೆಕೇರಿ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಕಾಂಗ್ರೆಸ್ ಶಾಸಕ ಹಾಗೂ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕ ಸತೀಶ್ ಸೈಲ್‍ಗೆ ಮತ್ತೇ ಗಣಿ ಕಂಟಕ ಎದುರಾಗಿದೆ.

ಗೋವಾದಲ್ಲಿ 2007-2012ರಲ್ಲಿ ನಡೆದ 35 ಸಾವಿರ ಕೋಟಿ ರೂಪಾಯಿ ಅದಿರಿನ ಅಕ್ರಮ ಗಣಿಗಾರಿಕೆ ಹಾಗೂ ವಿದೇಶಕ್ಕೆ ಅಕ್ರಮ ಸಾಗಾಟ ಆರೋಪದಲ್ಲಿ ಸತೀಶ್ ಸೈಲ್ ಅವರಿಗೆ ಗೋವಾ ವಿಶೇಷ ತನಿಖಾ ತಂಡ(ಎಸ್‍ಐಟಿ) ಎರಡನೇ ಬಾರಿ ಸಮನ್ಸ್ ಜಾರಿಗೊಳಿಸಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಎಸ್‍ಐಟಿಯಿಂದ ಬಂಧಿಸಲ್ಪಟ್ಟಿರುವ ಗೋವಾ ಮೂಲದ ಅದಿರು ವ್ಯಾಪಾರಿ ಫಿಲಿಪ್ ಜಾಕೋಬ್ ತಮ್ಮ ಬಳಿ ಸತೀಶ್ ಸೈಲ್ ಅದಿರು ಖರೀದಿಸುತ್ತಿದ್ದರೆಂದು ತನಿಖೆ ವೇಳೆ ತಿಳಿಸಿದ್ದಾರೆ.

ಬಳ್ಳಾರಿ ಗಣಿ ಹಗರಣದ ಬಗ್ಗೆ ಈಗ ಮಾತಾಡೋರೇ ಇಲ್ಲ!ಬಳ್ಳಾರಿ ಗಣಿ ಹಗರಣದ ಬಗ್ಗೆ ಈಗ ಮಾತಾಡೋರೇ ಇಲ್ಲ!

ಎಫ್‍ಐಆರ್ ದಾಖಲು: 2007-2012ರಲ್ಲಿ ನಡೆದ ಅಕ್ರಮ ಅದಿರು ಗಣಿಗಾರಿಕೆಯಲ್ಲಿ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಅಧಿಕಾರಿಗಳ ಸಮಿತಿ (ಸಿಇಸಿ), ಷಾ ಕಮಿಷನ್ ಮತ್ತು ಸಾರ್ವಜನಿಕ ಖಾತೆಗಳ ಸಮಿತಿಯ ವರದಿಗಳ ಅನ್ವಯ 2013 ಆಗಸ್ಟ್ 19ರಂದು ಗೋವಾ ಅಪರಾಧ ವಿಭಾಗದಿಂದ ಕೆಲವು ರಾಜಕಾರಣಿಗಳು, ಅಧಿಕಾರಿಗಳು, ಗಣಿ ಮಾಲೀಕರು ಮತ್ತು ಇಲಾಖೆಯ ಅಧಿಕಾರಿಗಳ ವಿರುದ್ಧ ಸೆಕ್ಷನ್ 120(ಬಿ) (ಪಿತೂರಿ) ಮತ್ತು 166 (ಸಾರ್ವಜನಿಕ ಸೇವಕ ಅವಿಧೇಯ ಕಾನೂನು) 13(1) (ಡಿ) ಮತ್ತು ಭ್ರಷ್ಟಚಾರ ತಡೆ ಕಾಯಿದೆಯ 13(2) ಸೇರಿದಂತೆ ಐಪಿಸಿಯ ವಿವಿಧ ಕಾಯ್ದೆಯಡಿ ಎಫ್‍ಐಆರ್ ದಾಖಲಾಗಿತ್ತು.

Satish Sail has been accused of illegal mining scam

ಇಲ್ಲಿಯೂ ಸತೀಶ್ ಸೈಲ್ ಹೆಸರಿತ್ತು: ಗಣಿ ಮತ್ತು ಖನಿಜ ಅಭಿವೃದ್ಧಿ ಕಾಯಿದೆ, ಮಿನರಲ್ ಕನ್ಸಲ್ಷನ್ ಕಾಯಿದೆ, ಮಿನರಲ್ ಕನ್ಸರ್ವೇಶನ್ ಮತ್ತು ಅಭಿವೃದ್ಧಿ ಕಾಯಿದೆ ಮತ್ತು 2004ರ ಗೋವಾ ರಾಜ್ಯದ ಅಕ್ರಮ ಗಣಿಗಾರಿಕೆ ತಡೆಗಟ್ಟುವಿಕೆ, ಸಾಗಾಣಿಕೆ, ಖನಿಜಗಳ ನಿಯಮಗಳ ಸಂಗ್ರಹಣೆ ಕಾಯಿದೆಯಡಿ ಜುಲೈ 26, 2013ರಂದು ಗಣಿ ಇಲಾಖೆ ದೂರು ದಾಖಲಿಸಿತ್ತು. ಅದರಲ್ಲಿ ಶಾಸಕ ಸತೀಶ್ ಸೈಲ್ ಅವರ ಹೆಸರು ಕೂಡ ಸೇರಿತ್ತು.

ಪತ್ರ ಬರೆದ ಸೈಲ್...
ಗೋವಾ ಎಸ್‍ಐಟಿ ಮೊದಲ ಸಮನ್ಸ್ ಜಾರಿಗೊಳಿಸಿ, ಸೈಲ್‍ಗೆ ಸೋಮವಾರ ಮಧ್ಯಾಹ್ನ(ಏ.9) ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಆದರೆ ವಿಚಾರಣೆಗೆ ಹಾಜರಾಗದ ಸೈಲ್ ಎಸ್‍ಐಟಿಗೆ ಪತ್ರ ಬರೆದಿದ್ದಾರೆ.

"ತಮ್ಮ ಅತ್ತೆ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಹಾಗೂ ಕೆಲವು ವೈಯಕ್ತಿಕ ಕಾರಣಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ ನಾನು ಎಸ್‍ಐಟಿ ಜತೆ ಸಹಕರಿಸಲು ಬದ್ಧನಿದ್ದೇನೆ ಮತ್ತು ಯಾವುದೇ ಮಾಹಿತಿ ಅಗತ್ಯವಿದ್ದಲ್ಲಿ ಒದಗಿಸುತ್ತೇನೆ" ಎಂದು ತಿಳಿಸಿದ್ದಾರೆ.

ಶುಕ್ರವಾರ (ಏ13) ಮತ್ತೇ ವಿಚಾರಣೆಗೆ ಹಾಜರಾಗುವಂತೆ ಎರಡನೇ ಬಾರಿ ಸಮನ್ಸ್ ಎಸ್‍ಐಟಿ ಜಾರಿಗೊಳಿಸಿದ್ದು, ಇದಕ್ಕೂ ಹಾಜರಾಗದಿದ್ದರೆ ಮೂರನೇ ಸಮನ್ಸ್ ಜತೆ ಅವರನ್ನು ಬಂಧಿಸಿ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ.

English summary
The Congress MLA and Mallikarjuna Shipping Pvt Ltd company director Satish Sail has been accused of illegal mining scamwill be issued fresh summons to be present before the crime branch of the Goa police, next Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X