• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿರ್ಲೆ ಫಾಲ್ಸ್ ನಲ್ಲಿ ಸಿಕ್ಕಿಕೊಂಡಿದ್ದ ಹುಬ್ಬಳ್ಳಿ ಪ್ರವಾಸಿಗರ ರಕ್ಷಣೆ

By ಕಾರವಾರ ಪ್ರತಿನಿಧಿ
|

ಕಾರವಾರ, ಆಗಸ್ಟ್ 7: ಪ್ರವಾಸಕ್ಕೆ ಬಂದು ನೀರಿನಲ್ಲಿ ಸಿಲುಕಿದ್ದ ಮಹಿಳೆ ಸೇರಿ ಆರು ಮಂದಿ ಪ್ರವಾಸಿಗರನ್ನು ಯಲ್ಲಾಪುರ ತಾಲೂಕಿನ ಶಿರ್ಲೆ ಫಾಲ್ಸ್ ನಿಂದ ರಕ್ಷಣೆ ಮಾಡಲಾಗಿದೆ.

ಚಿಕ್ಕಮಗಳೂರಿನ ಮಳೆ ಚಿತ್ರ: ಜೋರು ಮಳೆ, ಭೂಕುಸಿತ, ಎಲ್ಲೆಲ್ಲೂ ನೀರು...

ಹುಬ್ಬಳ್ಳಿಯಿಂದ ಬಂದಿದ್ದ ಪ್ರವಾಸಿಗರು ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದ ಬಳಿ‌ ಇರುವ ಶಿರ್ಲೆ ಫಾಲ್ಸ್ ಗೆ ಮಂಗಳವಾರ ತೆರಳಿದ್ದರು. ಈ ವೇಳೆ ಮಳೆ ಹೆಚ್ಚಾಗಿ ಸುರಿದಿದ್ದರಿಂದ ಪ್ರವಾಹ ಉಂಟಾಗಿ ನೀರಿನ ಮಧ್ಯದಲ್ಲಿ ಸಿಲುಕೊಂಡಿದ್ದರು.

ಯಲ್ಲಾಪುರದ ಅಗ್ನಿಶಾಮಕ ಅಧಿಕಾರಿ ಟಿ.ಎನ್.ಗೊಂಡ ನೇತೃತ್ವದ ವಿನೋದ್ ಕಿಂದಾಳ್ಕರ್, ಜೋಗಿ, ರಮೇಶ್ ಬಿರಾದರ್ ಅವರ ತಂಡ ಮಂಗಳವಾರ ಸಂಜೆ ಸ್ಥಳಕ್ಕೆ ತೆರಳಿ, ಎಲ್ಲರನ್ನೂ ರಕ್ಷಿಸಿದೆ.

ಹುಬ್ಬಳ್ಳಿ ಮೂಲದ ನವೀನ್ ರೇವಣ್ಕರ್, ಆನಂದ್ ಕೋರಿ, ಬಸು, ಆರತಿ, ಪ್ರಸಾದ್ ಕಾಮತ್ ಯಲ್ಲಾಪುರದ ರಾಮಕೃಷ್ಣ ಭಟ್ ಅವರನ್ನು ರಕ್ಷಣೆ ಮಾಡಲಾಗಿದೆ.

English summary
Six tourists have been rescued from Shirley Falls in Yallapur taluk, including a woman who was trapped in the water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X