• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ರಾಹುಲ್ ರಫೆಲ್ ಅಂದ್ರೆ 3 ಚಕ್ರದ ಸೈಕಲ್ ಅಂದುಕೊಂಡಿದ್ದಾರೆ'

By ಕಾರವಾರ ಪ್ರತಿನಿಧಿ
|

ಕಾರವಾರ, ಮಾರ್ಚ್ 12:ರಫೆಲ್ ಅಂದ್ರೆ ಏನು ಎನ್ನುವುದು ರಾಹುಲ್ ಗಾಂಧಿಗೆ ದೇವರಾಣೆ ಗೊತ್ತಿಲ್ಲ. ಅವರು ಅದನ್ನು ಮೂರು ಚಕ್ರದ ಸೈಕಲ್ ಅಂದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.

ಹೊನ್ನಾವರದ ನಗರಬಸ್ತಿಕೇರಿಯಯಲ್ಲಿ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಫೆಲ್ ಗೆ ಮೂರು ಚಕ್ರ ಇದೆ. ರಾಹುಲ್ ಸಣ್ಣವರಿದ್ದಾಗ ಆಡಿದ್ದ ಸೈಕಲ್ ಗೂ ಮೂರು ಚಕ್ರ ಇತ್ತು‌. ಹೀಗಾಗಿ, ಅದೇ ಸೈಕಲ್ ಅನ್ನು ಅವರು ರಫೆಲ್ ಅಂದುಕೊಂಡಿದ್ದಾರೆ ಎಂದು ಅನಂತ ಕುಮಾರ ಹೆಗಡೆ ಟೀಕಿಸಿದರು.

ಮುಸಲ್ಮಾನನ ಮಗ ಗಾಂಧಿ ಹೇಗಾದ? : ಅನಂತ ಕುಮಾರ್ ಹೆಗಡೆ ಪ್ರಶ್ನೆ

ಒಂದು ಕಾಲದಲ್ಲಿ ಕಾಂಗ್ರೆಸ್ ಹೈಕಮಾಂಡನ್ನು ಮಾತನಾಡಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಗಾಂಧಿ ಫ್ಯಾಮಿಲಿ ಯಾರಿಗೂ ಸಿಗುತ್ತಿರಲಿಲ್ಲ. ಆದ್ರೆ ಈಗ ಎಂಥ ಪರಿಸ್ಥಿತಿ ಬಂದಿದೆ ಎಂದರೆ, ಸ್ವತಃ ರಾಹುಲ್‌ ಗಾಂಧಿನೇ ಹೋಗಿ ಎಚ್.ಡಿ.ದೇವೇಗೌಡ ಅವರ ಮನೆಗೆ ಬಂದು ಕುಳಿತುಕೊಂಡು, ಒಪ್ಪಂದ ಮಾಡಿಕೊಳ್ಳುಂತೆ ಗೋಗರೆಯುತ್ತಿದ್ದಾರೆ ಎಂದು ತಿಳಿಸಿದರು.

English summary
Union Minister Ananth Kumar Hegde said that Rahul Gandhi does not know about Rafale.He feels Rafale like a three wheel cycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X