ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮವಾಗಿ ಸಾಗಿಸುತ್ತಿದ್ದ 6 ಒಂಟೆ ರಕ್ಷಣೆ, ಜಿಂಕೆ ಕೊಂಬು ಮಾರಲೆತ್ನಿಸಿದವರ ಬಂಧನ

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 11: ಹಿಂಸಾತ್ಮಕ ರೀತಿಯಲ್ಲಿ 6 ಒಂಟೆಗಳನ್ನು ಹಗ್ಗದಿಂದ ಬಿಗಿದು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಹಿಡಿದಿರುವ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.

ಯಲ್ಲಾಪುರದ ಜೋಡುಕೆರೆ ಚೆಕ್ ಪೊಸ್ಟ್ ಬಳಿ ಹುಬ್ಬಳ್ಳಿ ಮಾರ್ಗದಿಂದ ಬಂದ ಈಚರ್ ಲಾರಿಯನ್ನು ತಪಾಸಣೆಗೆ ಕೈ ಮಾಡಿದರು ನಿಲ್ಲಿಸದೆ ಸ್ಪೀಡಾಗಿ ತೆರಳಿದ್ದರು. ಆದರೆ ಪೊಲೀಸರು ವಾಹನವನ್ನು ಬೆನ್ನತ್ತಿ ಅಡ್ಡಗಟ್ಟಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆಗಳು ಪತ್ತೆಯಾಗಿವೆ. ಕಾಲು ಮುಖಗಳಿಗೆ ಹಗ್ಗದಿಂದ ಕಟ್ಟಿದ ಒಂಟೆಗಳಿಗೆ ಮಲಗಲು ಆಗದೇ ನಿಲ್ಲಲು ಸಾಧ್ಯವಾಗದೆ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು. ಪೊಲೀಸರು ಒಂಟೆಗಳನ್ನು ರಕ್ಷಣೆ ಮಾಡಿದ್ದಲ್ಲದೆ, ಮೂವರನ್ನು ಬಂಧಿಸಿದ್ದಾರೆ.

Police Arrests 3 Smugglers, Rescue 6 Camel in Yellapur

ಕಾಂತೇಶ್, ಪ್ರಕಾಶ್, ಈಶ್ವರಪ್ಪ ಎಂಬುವವರೇ ಬಂಧಿತರು. ಆರೋಪಿಗಳು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನವರ ಎಂದು ತಿಳಿದುಬಂದಿದೆ. ಈ ಕುರಿತು ಯಲ್ಲಾಪುರ ತಾಲೂಕಿನಲ್ಲಿ ಪ್ರಕರಣ ದಾಖಲಾಗಿದೆ.

Police Arrests 3 Smugglers, Rescue 6 Camel in Yellapur

ಜಿಂಕೆ‌ ಕೊಂಬು ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ
ಜಿಂಕೆ ಕೊಂಬುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಅಂಕೋಲಾದ ಮಾಸ್ತಿಕಟ್ಟಾ ಹೆದ್ದಾರಿಯಲ್ಲಿ ನಡೆದಿದೆ. ಹಳಿಯಾಳದ ಶೌಕತ್ ಸಾಬ್, ಕಲ್ಲೇಶ್ವರ ಗ್ರಾಮದ ಪ್ರಸಾದ ದೇಸಾಯಿ, ಸೂರಜ್ ಭಂಡಾರಿ, ಸಂದೀಪ ಭಂಡಾರಿ, ಬಂಧಿತ ಆರೋಪಿಗಳು. ಎರಡು ಜಿಂಕೆ ಕೊಂಬುಗಳನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಅಂಕೋಲಾದ ಮಾಸ್ತಿಕಟ್ಟಾ ಬಳಿ ಹೆದ್ದಾರಿಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾರಾಟ ಮಾಡುವ ಉದ್ದೇಶಕ್ಕಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ತಪಾಸಣೆ ನಡೆಸಿದ ಪೊಲೀಸರು ಕೊಂಬು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Police Arrests 3 Smugglers, Rescue 6 Camel in Yellapur

ಡಾಲ್ಫಿನ್ ಮೃತದೇಹ ಪತ್ತೆ
ಕಾರವಾರದ ಟ್ಯಾಗೋರ್ ಕಡಲ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಡಾಲ್ಫಿನ್ ಮೃತ ದೇಹವೊಂದು ಪತ್ತೆಯಾಗಿದೆ. ಮೃತ ಡಾಲ್ಫಿನ್ ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ಪ್ರಜಾತಿಗೆ ಸೇರಿದ್ದು ಸುಮಾರು 35-40 ವರ್ಷದ ಹೆಣ್ಣು ಡಾಲ್ಫಿನ್ ಇದಾಗಿದೆ. ಹೊಟ್ಟೆ ಹಾಗೂ ಮುಖದ ಭಾಗದಲ್ಲಿ ಕೊಳೆತಿದ್ದು ಎರಡು ದಿನದ ಹಿಂದೆ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. 80 ಕೆಜಿ ತೂಕ ಹಾಗೂ 7 ಅಡಿ ಉದ್ದವಿದೆ. ಡಾಲ್ಫಿನ್ ಮರಣೋತ್ತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ರಕ್ತಸ್ರಾವವಾದ ಮತ್ತು ಇನ್ನಾವುದೇ ವಸ್ತುಗಳು ಪತ್ತೆಯಾಗಿಲ್ಲ. ಸಹಜವಾಗಿ ಸಾವನ್ನಪ್ಪಿರಬಹುದು. ಅಲೆಗಳ ರಭಸದಿಂದ ತೀರಕ್ಕೆ ಬಂದಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Recommended Video

ಸೂರ್ಯಕುಮಾರ್ ಯಾದವ್ ಶತಕ ಸಿಡಿಸಿದ್ರೂ ಇಂಗ್ಲೆಂಡ್ ವಿರುದ್ಧ ಭಾರತ ಸೋಲ್ಬೇಕಾಯ್ತು...| * Cricket | OneIndia

English summary
Yellapur Police arrest 3 people for smuggling camels and rescued 6 camels. another case police arrested 4 people for illegal transport deer antler.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X