ಕಾರ್ಕಳ ಮದರಸಾದ 21 ವಿದ್ಯಾರ್ಥಿಗಳನ್ನ ಕರೆದೊಯ್ಯುತ್ತಿದ್ದ ಆರೋಪಿ ಬಂಧನ

By: ನಮ್ಮ ಪ್ರತಿನಿಧಿ
Subscribe to Oneindia Kannada

ಕಾರವಾರ, ನವೆಂಬರ್‌ 4: ಉಡುಪಿಯ ಕಾರ್ಕಳದ ಮದರಸಾದಲ್ಲಿ ಓದುತ್ತಿದ್ದ ಬಿಹಾರದ 21 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆರೋಪಿಯನ್ನು ಕುಮಟಾ ಪೊಲೀಸರು ಶುಕ್ರವಾರ ಬಂಧಿಸಿ, ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ.

ಯಲ್ಲಾಪುರ: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವಿದ್ಯಾರ್ಥಿನಿ ಬಲಿ!

ಉಡುಪಿಯ ಕಾರ್ಕಳದ ಜಾಮಿಯಾ ಮದಿನುಲ್ಲಾ ಉಲೂಮ್ ಮದರಸಾದಲ್ಲಿ ಓದುತ್ತಿದ್ದರು. ಆದರೆ, ಅಲ್ಲಿನ ಶಿಕ್ಷಕ ಮೊಹಮ್ಮದ್ ತಹೀಬ್ ಮದರಸಾಕ್ಕೆ ತಿಳಿಸದೇ ಮಕ್ಕಳನ್ನು ರೈಲಿನಲ್ಲಿ ಗುಟ್ಟಾಗಿ ಕರೆದೊಯ್ಯುತ್ತಿದ್ದ. ಈ ಬಗ್ಗೆ ಮದರಸಾದ ವ್ಯವಸ್ಥಾಪಕ ಡಾ.ಮೊಹಮ್ಮದ್ ಮನ್ಸೂರ್ ಶುಕ್ರವಾರ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Kumta police arrest Madrasa teacher for allegedly carrying 21 students

ಬಳಿಕ ಅವರು ಎಲ್ಲ ಠಾಣೆಗಳಿಗೆ ಈ ಮಾಹಿತಿ ರವಾನಿಸಿದ್ದು, ಕುಮಟಾ ಪಿಎಸ್ಐ ಇ.ಸಿ ಸಂಪತ್ ನೇತೃತ್ವದ ತಂಡ ಕುಮಟಾಕ್ಕೆ ಆಗಮಿಸಿದ್ದ ಮತ್ಸ್ಯಗಂಧ ರೈಲನ್ನು ಪರಿಶೀಲಿಸಿದಾಗ ಅದರಲ್ಲಿ ಎಲ್ಲ ವಿದ್ಯಾರ್ಥಿಗಳ ಸಹಿತ ಆರೋಪಿಯು ಸಿಕ್ಕಿದ್ದಾನೆ.

Kumta police arrest Madrasa teacher for allegedly carrying 21 students

ಮದರಸಾದ ಆಡಳಿತ ಮಂಡಳಿಯ ಜತೆ ಭಿನ್ನಾಭಿಪ್ರಾಯ ಉಂಟಾಗಿ ಉಡುಪಿ ಮದರಸಾದಲ್ಲಿ ಓದುತ್ತಿದ್ದ ಬಿಹಾರದ ವಿದ್ಯಾರ್ಥಿಗಳನ್ನು ಪಾಟ್ನಾಕ್ಕೆ ಕರೆದೊಯ್ಯಲು ಸ್ಕೆಚ್ ಹಾಕಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kumta police arrest Maddasa teacher (Mohamad Taib) for allegedly carrying 21 students from Jamia Madinulla Uloom Madrasa Karkala Karkala.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ