ಕಾರವಾರದಲ್ಲಿ ಭಾರತ್ ಬಂದ್ ಗೆ ಬೆಂಬಲ ಕೊಟ್ಟ ಕೆಎಸ್ ಆರ್ ಟಿಸಿ ಸಂಘಟನೆ
ಕಾರವಾರ, ಜನವರಿ 08: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿ ಯು) ಕರೆ ನೀಡಿರುವ 'ಭಾರತ್ ಬಂದ್'ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯತ್ಯಯವಾಗಿದೆ.
ಕಾರವಾರದಲ್ಲಿ ಬಸ್ ಸಂಚಾರ ಪ್ರಾರಂಭಕ್ಕೆ ಸಿಐಟಿಯು ಸಂಘಟಿತ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. ಪ್ರತಿಭಟನಾ ನಿರತ ಕಾರ್ಮಿಕ ಸಂಘಟನೆಯ ಕಾರ್ಯಕರ್ತರಿಂದ ಬಸ್ ತಡೆ ನಡೆಸಲಾಯಿತು.

ಇದರಿಂದಾಗಿ ಪೊಲೀಸರು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಕೆಎಸ್ಆರ್ ಟಿಸಿ ಸಂಘಟನೆಯೂ ಬೆಂಬಲ ವ್ಯಕ್ತಪಡಿಸಿ, ಬಸ್ ಸಂಚಾರ ಸ್ಥಗಿತಗೊಳಿಸಿದವು. ನಗರದಲ್ಲಿ ರಿಕ್ಷಾ ಸಂಚಾರ ಎಂದಿನಂತಿದ್ದು, ಅಂಗಡಿ- ಮುಂಗಟ್ಟು, ಹೋಟೆಲ್ ಗಳು ತೆರೆದಿವೆ.












Click it and Unblock the Notifications