ಕಾರವಾರ-ಪೆರ್ನಂ ರೈಲಿಗೆ ಚಾಲನೆ, 8 ಬೋಗಿ ಸೇರ್ಪಡೆ

ಕಾರವಾರ, ಸೆಪ್ಟೆಂಬರ್ 04 : ಕಾರವಾರ-ಪೆರ್ನಂ ಅಭಿವೃದ್ಧಿಪಡಿಸಿದ ರೈಲು ಸೇವೆಗೆ ಮಂಗಳವಾರ ಹಸಿರು ನಿಶಾನೆ ಸಿಕ್ಕಿದೆ. ಮೇಲ್ದರ್ಜೆಗೇರಿಸಿದ ರೈಲು ಸಂಚಾರದಿಂದ 1000ಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಕಾರವಾರ ರೈಲು ನಿಲ್ದಾಣದಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಅನಂತ ಕುಮಾರ ಹೆಗಡೆ ರೈಲು ಸೇವೆಗೆ ಚಾಲನೆ ನೀಡಿದರು. ಕಾರವಾರ ಮತ್ತು ಗೋವಾದ ಪೆರ್ನಂಗೆ ಸಾಗುವ ರೈಲನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು.

ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (ಡೆಮು) ರೈಲು ಇದಾಗಿದ್ದು, ಈ ಮೊದಲು ಕೇವಲ ಮೂರು ಬೋಗಿಗಳಿದ್ದವು. ಸ್ಥಳೀಯರ ಬೇಡಿಕೆಗೆ ಸ್ಪಂದಿಸಿರುವ ಕೊಂಕಣ ರೈಲ್ವೆ ಈಗ 84 ಅಸನಗಳ 8 ಬೋಗಿಗಳನ್ನು ನೀಡಿದೆ.

Karwar-Pernem upgraded DEMU train service flagged off

ಮೇಲ್ದರ್ಜೆಗೇರಿದ ರೈಲಿನಲ್ಲಿ ಸಾಮಾನ್ಯ ಬೋಗಿಗಿಂತ ಆಸನಗಳ ನಡುವೆ ಹೆಚ್ಚು ಅಂತರವಿದೆ. ಕಿಟಕಿಗಳಿಗೆ ಪಾರದರ್ಶಕ ಗಾಜು ಅಳವಡಿಸಲಾಗಿದೆ. ನಿಂತುಕೊಳ್ಳುವ ಪ್ರಯಾಣಿಕರಿಗೂ ಅನುಕೂಲವಾಗುವಂತೆ ಹೆಚ್ಚು ಹ್ಯಾಂಡಲ್ ಅಳವಡಿಕೆ ಮಾಡಲಾಗಿದೆ.

ರೈಲಿನ ವೇಳಾಪಟ್ಟಿ : ಕಾರವಾರ-ಪೆರ್ನಂ ರೈಲು ದಿನಕ್ಕೆ 2 ಬಾರಿ ಸಂಚಾರ ನಡೆಸಲಿದೆ. ಕಾರವಾರದಿಂದ ಬೆಳಗ್ಗೆ 6ಕ್ಕೆ ಹೊರಡುವ ರೈಲು ಬೆಳಗ್ಗೆ 9.30ಕ್ಕೆ ಪೆರ್ನಂ ತಲುಪಲಿದೆ. 9.40ಕ್ಕೆ ಪೆರ್ನಂನಿಂದ ಹೊರಡಲಿರುವ ರೈಲು ಮಧ್ಯಾಹ್ನ 12.30ಕ್ಕೆ ಕಾರವಾರಕ್ಕೆ ವಾಪಸ್ ಆಗಲಿದೆ. (110 ಕಿ.ಮೀ.)

ಮಧ್ಯಾಹ್ನ 1 ಗಂಟೆಗೆ ಕಾರವಾರದಿಂದ ಹೊರಡಲಿದ್ದು ಸಂಜೆ 4.30ಕ್ಕೆ ಪೆರ್ನಂ ತಲುಪಲಿದೆ. ಪರ್ನೆಂನಿಂದ ಸಂಜೆ 5.30ಕ್ಕೆ ಹೊರಡಲಿರುವ ರೈಲು 8.30ಕ್ಕೆ ಕಾರವಾರಕ್ಕೆ ತಲುಪಲಿದೆ. ಎರಡೂ ನಗರಗಳ ನಡುವಿನ ಪ್ರಯಾಣ ದರ 35 ರೂ.ಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+