ಹೊನ್ನಾವರ: ಕಾಣೆಯಾಗಿದ್ದ ಅಬ್ದುಲ್ ಗಫೂರ್ ಪತ್ತೆ
ಕಾರವಾರ, ಡಿಸೆಂಬರ್ 12: ಹೊನ್ನಾವರದ ಹಡೀನಬಾಳ ಗ್ರಾಮದಿಂದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಲಾರಿ ಚಾಲಕ ಅಬ್ದುಲ್ ಗಫೂರ್ ಪತ್ತೆಯಾಗಿದ್ದಾರೆ.
ಹೊನ್ನಾವರಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯ ಚಾಲಕ, ಮೂಲತ ಶಿರಸಿಯ ಬಿಳಿಗಿರಿಕೊಪ್ಪದ ಅಬ್ದುಲ್ ಗಫೂರ್ ಅಬ್ದುಲ್ ಜಬ್ಬಾರ್ ಶುಂಠಿ ನಾಪತ್ತೆಯಾಗಿದ್ದರು. ಹೊನ್ನಾವರದಲ್ಲಿ ನಡೆಯುತ್ತಿದ್ದ ಅಹಿತಕರ ಘಟನೆಗಳಿಂದ ಗಫೂರ್ ಬದುಕಿರುವ ಕುರಿತು ಅತನ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇಂದು ಗಫೂರ್ ಪತ್ತೆಯಾಗಿದ್ದಾರೆ.

ಗಫೂರ್ ರ ಕಾಲಿಗೆ ಗಾಯಗಳಾಗಿದ್ದು, ಸದ್ಯ ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಮಾಹಿತಿ ಪಡೆಯಲಾಗುವುದು ಎಂದು ಹೊನ್ನಾವರ ಠಾಣಾ ಪಿಎಸ್ ಐ ಆನಂದ್ ಮೂರ್ತಿ ಮಾಹಿತಿ ನೀಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಹೊನ್ನಾವರಕ್ಕೆ ಹೊಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಅಬ್ದುಲ್ ಗಪೂರ್ ಕಾಣೆಯಾಗಿದ್ದರು, ಅಂದು ಹೊನ್ನಾವರದಲ್ಲಿ ಪರೇಶ್ ಮೆಸ್ತಾ ಹತ್ಯೆ ವಿರೋಧಿಸಿ ಹಿಂದೂ ಸಂಘಟನೆಗಳು ಮಾಡಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಾಗಾಗಿ ಅಬ್ದುಲ್ ಗಫೂರ್ ಕೋಮು ಗಲಭೆಗೆ ಬಲಿ ಆಗಿದ್ದಾನೆ ಎಂದು ಕುಟುಂಬದವರು ಹೆದರಿದ್ದರು.











Click it and Unblock the Notifications