ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನದ ಹುಡುಗ 'ನೀರಜ್' ಹೆಸರಿನವರಿಗೆ ಭಟ್ಕಳದ ಈ ರೆಸ್ಟೋರೆಂಟ್‌ನಲ್ಲಿ ಫ್ರೀ, ಅನ್‌ಲಿಮಿಟೆಡ್ ಊಟ!

|
Google Oneindia Kannada News

ಕಾರವಾರ, ಆಗಸ್ಟ್ 09: ಸದ್ಯ ಕಳೆದೆರಡು ದಿನಗಳಿಂದ ನೀರಜ್ ಚೋಪ್ರಾ ಹೆಸರು ಎಲ್ಲಾ‌ ಕಡೆಗಳಲ್ಲೂ ಟ್ರೆಂಡಿಂಗ್‌ನಲ್ಲಿದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್ ಚೋಪ್ರಾಗೆ ಸದ್ಯ ಎಲ್ಲಾ ಕಡೆಯಿಂದಲೂ ಶುಭ ಹಾರೈಕೆಗಳು ಬರುತ್ತಿವೆ. ಭಾರತಕ್ಕೆ ಈ ಬಾರಿಯ ಟೋಕಿಯೋ ಒಲಂಪಿಕ್‌ನಲ್ಲಿ ಒಂದೇ ಒಂದು ಚಿನ್ನದ ಪದಕ ದೊರೆತಿದ್ದು, ಅದು ಕೂಡ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರಿಂದಲೇ. ಹೀಗಾಗಿ ಎಲ್ಲೆಡೆ ಇವರದ್ದೆ ಹೆಸರು ಸದ್ಯ ಪ್ರಚಲಿತದಲ್ಲಿದೆ.

ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಹೋಟೆಲೊಂದು ನೀರಜ್ ಎಂಬ ಹೆಸರಿನವರಿಗೆ ಉಚಿತವಾಗಿ ಊಟ ನೀಡುವುದಾಗಿ ಘೋಷಿಸಿದೆ. ಭಟ್ಕಳದ ಶಿರಾಲಿಯ ನೀರಕಂಠ ಜಂಕ್ಷನ್‌ನಲ್ಲಿ ನೂತನವಾಗಿ ಕಳೆದ ಏಳು ತಿಂಗಳ ಹಿಂದೆ ಆರಂಭಗೊಂಡ 'ತಾಮ್ರ' ರೆಸ್ಟೋರೆಂಟ್‌ನಲ್ಲಿ ಈ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ. ಆ ಮೂಲಕ ಚಿನ್ನದ ವೀರ ನೀರಜ್ ಚೋಪ್ರಾಗೆ ಗೌರವ ಸಲ್ಲಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.

 ಸಮುದ್ರಾಹಾರಗಳ ಖಾದ್ಯಕ್ಕಾಗಿಯೇ ಇಲ್ಲಿ ಭೇಟಿ ನೀಡುತ್ತಾರೆ

ಸಮುದ್ರಾಹಾರಗಳ ಖಾದ್ಯಕ್ಕಾಗಿಯೇ ಇಲ್ಲಿ ಭೇಟಿ ನೀಡುತ್ತಾರೆ

ಇತ್ತೀಚಿಗೆ ಆರಂಭವಾಗಿದ್ದರೂ, 'ತಾಮ್ರ' ರೆಸ್ಟೋರೆಂಟ್ ಸಾಂಪ್ರದಾಯಿಕ ಶೈಲಿಯ, ಸಮುದ್ರಾಹಾರಗಳಿಗೆ ಪ್ರಸಿದ್ಧಿ ಪಡೆಯುತ್ತಿದೆ. ಇಲ್ಲಿ ಪ್ರತಿದಿನ ನೂರಾರು ಜನರು ಈ ಸಮುದ್ರಾಹಾರಗಳ ಖಾದ್ಯಕ್ಕಾಗಿಯೇ ಇಲ್ಲಿ ಭೇಟಿ ನೀಡುತ್ತಾರೆ.‌ ಇತ್ತೀಚಿನವರೆಗೂ ತಾಮ್ರದಲ್ಲಿ ಊಟ ಮಾಡಿದವರು ಇನ್‌ಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ಪೇಜ್ ಅನ್ನು ಟ್ಯಾಗ್ ಮಾಡಿದರೆ ಶೇ.10ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿತ್ತು. ಅನೇಕರು ಕೂಡ ಇದರ ಪ್ರಯೋಜನ ಪಡೆದಿದ್ದಾರೆ. ಇದೀಗ ಮತ್ತೊಂದು ಕೊಡುಗೆಯ ಮೂಲಕ 'ತಾಮ್ರ' ಜನರನ್ನು ತನ್ನತ್ತ ಸೆಳೆಯುತ್ತಿದೆ.
ನೀರಜ್ ಎಂಬ ಹೆಸರಿನವರಿಗೆ ಅನ್‌ಲಿಮಿಟೆಡ್ ಊಟವನ್ನು ಇಲ್ಲಿ ನೀಡಲಾಗುತ್ತಿದೆ. ಈ ಕೊಡುಗೆ ಆಗಸ್ಟ್ 15ರವರೆಗೂ ಇದ್ದು, ಈ ಬಗ್ಗೆ ಈಗಾಗಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲೂ 'ತಾಮ್ರ' ರೆಸ್ಟೋರೆಂಟ್ ಘೋಷಣೆ ಮಾಡಿಕೊಂಡಿದೆ. ಈ ಇನ್‌ಸ್ಟಾಗ್ರಾಂ ಪೋಸ್ಟ್ ಇದೀಗ ಜಿಲ್ಲೆಯಾದ್ಯಂತ ಸಾಕಷ್ಟು ವೈರಲ್ ಆಗಿದ್ದು, ಈ ಆಫರ್ ಭಾರೀ ಸದ್ದು ಮಾಡುತ್ತಿದೆ.

 ತಾಮ್ರ‌ ರೆಸ್ಟೋರೆಂಟ್ ಮಾಲೀಕ ಆಶೀಶ್ ನಾಯಕ್

ತಾಮ್ರ‌ ರೆಸ್ಟೋರೆಂಟ್ ಮಾಲೀಕ ಆಶೀಶ್ ನಾಯಕ್

ಇನ್ನು ಈ ಬಗ್ಗೆ 'ಒನ್ ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿರುವ 'ತಾಮ್ರ‌' ರೆಸ್ಟೋರೆಂಟ್ ಮಾಲೀಕ ಆಶೀಶ್ ನಾಯಕ್, "ನೀರಜ್ ಹೆಸರಿನವರು ಯಾರೇ ಬಂದರೂ ಅವರಿಗೆ ನಮ್ಮ ರೆಸ್ಟೋರೆಂಟ್‌ನಲ್ಲಿ ಉಚಿತವಾಗಿ, ಅನ್‌ಲಿಮಿಟೆಡ್, ಅವರಿಗೆ ಬೇಕಾದ ಅಥವಾ ನಮ್ಮಲ್ಲಿ‌ ಲಭ್ಯವಿರುವ ಊಟ ನೀಡಲಾಗುತ್ತದೆ. ತಮ್ಮ ಹೆಸರಿನ ಐಡಿಯನ್ನು ಅಥವಾ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಖಾತೆಗಳನ್ನು ತೋರಿಸಿ ತಮ್ಮ ಹೆಸರು ನೀರಜ್ ಎಂದು ದೃಢಪಡಿಸಿದರೆ ಸಾಕು, ಅವರು ಈ‌ ಕೊಡುಗೆ ಪಡೆದುಕೊಳ್ಳಲಿದ್ದಾರೆ. ಆದರೆ ಇದು ಕೇವಲ ನೀರಜ್ ಎಂದು ಹೆಸರಿರುವವರಿಗೆ ಮಾತ್ರ,'' ಎಂದು ತಿಳಿಸಿದ್ದಾರೆ.
"ಈ ಹಿಂದೆ ನಮ್ಮ ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನ ವಾಯುಸೇನೆಯು ವಿಫಲ ದಾಳಿಯನ್ನು ನಡೆಸಿತ್ತು. ಆಗ ಪಾಕ್ ಯುದ್ಧ ವಿಮಾನವನ್ನು ಅಟ್ಟಿಸಿಕೊಂಡು ಹೋಗಿ ಪಾಕಿ ವಾಯುಸೇನೆಯ ವಿಮಾನವನ್ನು ನಮ್ಮ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವರ್ಧಮಾನ್ ತಮ್ಮ ವಿಮಾನದ ಮೂಲಕ ಹೊಡೆದುರುಳಿಸಿದ್ದರು.''

 ಅಭಿನಂದನ್ ಎನ್ನುವ ಹೆಸರಿರುವವರಿಗೆ ಉಚಿತ ಊಟ

ಅಭಿನಂದನ್ ಎನ್ನುವ ಹೆಸರಿರುವವರಿಗೆ ಉಚಿತ ಊಟ

"ಆದರೆ ಪಾಕ್ ವಿಮಾನವನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ ಇನ್ನೊಂದು ಪಾಕ್ ಫೈಟರ್ ಜೆಟ್ ದಾಳಿಗೊಳಗಾದ ವರ್ಧಮಾನ್ ವಿಮಾನ, ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿ ಪತನವಾಗಿ, ಪಾಕ್ ಸೈನಿಕರಿಂದ ಬಂಧಿಸಲ್ಪಟ್ಟಿದ್ದರು. ನಂತರ‌ ಭಾರತದ‌ ಒತ್ತಡಕ್ಕೆ ಮಣಿದು ಅವರನ್ನು ಬಿಡುಗಡೆ ಮಾಡಲಾಗಿತ್ತು. ಅವರು ಬಂಧನಕ್ಕೊಳಗಾಗಿ ಬಿಡುಗಡೆಯಾಗುವವರೆಗೂ ಅವರಿಗಾಗಿ ಇಡೀ ದೇಶದಲ್ಲಿ ಪ್ರಾರ್ಥನೆಗಳು ಮೊಳಗಿದ್ದವು. ಅವರ ಸಾಹಸಕ್ಕೆ ಮೆಚ್ಚಿ, ಅವರಿಗೆ ಗೌರವ ಸಲ್ಲಿಸಲು ಹೋಟೆಲ್ ಒಂದು ಅಭಿನಂದನ್ ಎನ್ನುವ ಹೆಸರಿರುವವರಿಗೆ ಉಚಿತ ಊಟ ನೀಡುವುದಾಗಿ ಘೋಷಿಸಿತ್ತು. ಅದು ಈ ಸಮಯದಲ್ಲಿ ನೆನಪಾಗಿ, ಅದೇ ರೀತಿಯ ಆಫರ್ ಅನ್ನು ನಮ್ಮಲ್ಲಿ ನೀಡುತ್ತಿದ್ದೇವೆ,'' ಎಂದು ವಿವರಿಸಿದರು.

 ಭಾರತೀಯ ಸೇನೆಯ ಸುಬೇದಾರ್ ನೀರಜ್ ಚೋಪ್ರಾ

ಭಾರತೀಯ ಸೇನೆಯ ಸುಬೇದಾರ್ ನೀರಜ್ ಚೋಪ್ರಾ

"ನೀರಜ್ ಚೋಪ್ರಾ ನಮ್ಮ ದೇಶದ ಹೆಮ್ಮೆ. ಅವರು ಚಿನ್ನದ ಪದಕ ಗೆದ್ದಿದ್ದು, ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಅದರಲ್ಲೂ ಅವರು ಭಾರತೀಯ ಸೇನೆಯ ಸುಬೇದಾರ್ ಕೂಡ ಆಗಿರುವುದರಿಂದ ಈ ಹೆಮ್ಮೆ ದ್ವಿಗುಣಗೊಳ್ಳುತ್ತದೆ. ಸ್ವರ್ಣ ತಂದುಕೊಟ್ಟ ಅವರಿಗೆ ಈ ಆಫರ್ ಮೂಲಕ ನೀರಜ್ ಹೆಸರಿನವರಿಗೆ ಉಚಿತವಾಗಿ ಹೊಟ್ಟೆ ತುಂಬಿಸಿಕೊಳ್ಳುವಷ್ಟು ಊಟ ನೀಡುವ ಮೂಲಕ ನೀರಜ್ ಚೋಪ್ರಾಗೆ ನಮ್ಮ ಗೌರವ ಸಲ್ಲಿಸುತ್ತಿದ್ದೇವೆ,'' ಎಂದು ತಿಳಿಸಿದರು.
"ನೀರಜ್ ಎಂಬ ಹೆಸರಿನವರಿಗೆ ನಮ್ಮ ರೆಸ್ಟೋರೆಂಟ್‌ಗೆ ಹಾರ್ದಿಕ ಸ್ವಾಗತ ಕೋರುತ್ತೇವೆ. ಆದರೆ ಊಟದ ಸಮಯದಲ್ಲಿ ಆಹಾರವನ್ನು ವೇಸ್ಟ್ ಮಾಡಬಾರದು. ಬೇಕಾದಷ್ಟು ಪಡೆದು, ನಂತರ ಮತ್ತೆ ಬೇಕಿದ್ದಲ್ಲಿ ಎಷ್ಟು ಬೇಕಾದರೂ ಹಾಕಿಸಿಕೊಳ್ಳಬಹುದು,'' ಎಂದು ಕೂಡ ಮನವಿ ಮಾಡಿದರು.

Recommended Video

ಪ್ಲ್ಯಾನ್ ಉಲ್ಟಾ ಆಗಿದ್ದಕ್ಕೆ ಬೇಸರಗೊಂಡ Virat ಹಿಂಗ್ಯಾಕೆ ಹೇಳಿದ್ರು? | Oneindia Kannada
 30 ಆಸನಗಳ ಎಸಿ ಹಾಗೂ ಎರಡು ಫ್ಯಾಮಿಲಿ ರೂಮ್‌

30 ಆಸನಗಳ ಎಸಿ ಹಾಗೂ ಎರಡು ಫ್ಯಾಮಿಲಿ ರೂಮ್‌

ತಾಮ್ರ ರೆಸ್ಟೋರೆಂಟ್ ಶಿರಾಲಿಯ ನೀರಕಂಠ ಕ್ರಾಸ್‌ನಲ್ಲಿ, ಹೆದ್ದಾರಿಗೆ ಸಮೀಪದಲ್ಲಿದೆ. ಈ ವರ್ಷದ ಫೆ.21ಕ್ಕೆ ರೆಸ್ಟೋರೆಂಟ್ ಆರಂಭವಾಗಿದ್ದು, 60 ಆಸನಗಳ ವ್ಯವಸ್ಥೆ ಇದೆ. 30 ಆಸನಗಳ ಎಸಿ ಹಾಗೂ ಎರಡು ಫ್ಯಾಮಿಲಿ ರೂಮ್‌ಗಳಿವೆ. ಉತ್ತಮ ಪರಿಸರ, ವೈವಿಧ್ಯಮಯ ಬೆಳಕಿನ ನಡುವೆ ಇಲ್ಲಿ ಊಟ ಸವಿಯುವುದೇ ಒಂದು ವಿಶೇಷ ಕೂಡ ಹೌದು. ಈ ರೆಸ್ಟೋರೆಂಟ್ ಮಾಲೀಕ ಆಶೀಸ್ ನಾಯಕ ಕಾರವಾರ ಮೂಲದವರಾಗಿದ್ದು, ಗೋವಾದಲ್ಲಿ ಕನ್ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಅದರ ಜೊತೆಗೆ ತಾಮ್ರ ರೆಸ್ಟೋರೆಂಟ್ ಅನ್ನು ಕೂಡ ಆರಂಭಿಸಿದ್ದಾರೆ.

English summary
Bhatkal's Tamra restaurant in Uttara Kannada district has announced a free meal to customers whose name is Neeraj. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X