ಕಾರವಾರದ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರ್ಪಡೆ ಖಚಿತ, ಇದು ಅಧಿಕೃತ

ಕಾರವಾರ, ಜನವರಿ 11: ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರುವ ಕುರಿತು ಅಂತೂ ಅಧಿಕೃತ ಸುಳಿವು ಸಿಕ್ಕಿದೆ.

'ಆನಂದ್ ಅಸ್ನೋಟಿಕರ್ ಬೆಂಗಳೂರಿನಲ್ಲಿ ಜನವರಿ 15ರಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರಲಿದ್ದಾರೆ' ಎಂದು ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪುರುಷೋತ್ತಮ ಸಾವಂತ ತಿಳಿಸಿದ್ದಾರೆ.

ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, 'ವಸಂತ್ ಅಸ್ನೋಟಿಕರ್ ಅವರು ಮೊದಲ ಬಾರಿಗೆ ಶಾಸಕರಾಗಿದ್ದು ಕೆಸಿಪಿಯಿಂದ. ಆದ್ದರಿಂದ ಅವರ ಪುತ್ರ ಆನಂದ ಅವರನ್ನು ಜೆಡಿಎಸ್ ಗೆ ಕರೆತರಲು ಮಧು ಬಂಗಾರಪ್ಪ ಪ್ರಯತ್ನ ನಡೆಸಿದ್ದರು. ಅದು ಫಲಿಸಿದೆ' ಎಂದರು.

Former minister Anand Asnotikar will join JDS on January 15th

'ಮುಂಬರುವ ಚುನಾವಣೆಯಲ್ಲಿ ಆನಂದ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಿಲ್ಲುವ ಮೂಲಕ ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ. ಆನಂದ್ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ರಾಜ್ಯದಲ್ಲಿಯೂ ಜೆಡಿಎಸ್ ಅಧಿಕಾರಕ್ಕೆ ಬರಲಿದೆ' ಎಂದು ತಿಳಿಸಿದರು.

ಸಂಕ್ರಾಂತಿ ವಿಶೇಷ ಪುಟ

ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಜಿತ್ ಪೊಕಳೆ, ಖಲೀಲುಲ್ಲಾ, ಸಂತೋಷ ಸಾವಂತ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+