ಕಾರ್ಗಿಲ್ ವಿಜಯ ದಿವಸ್; ಕಾರವಾರದ ಕದಂಬ ನೌಕಾನೆಲೆ ವೀಕ್ಷಣೆಗೆ ನಾಳೆ ಮುಕ್ತ ಅವಕಾಶ
ಕಾರವಾರ, ಜುಲೈ 19: ಕಾರ್ಗಿಲ್ ವಿಜಯ ದಿವಸ್ (ಜು.26) ಅಂಗವಾಗಿ ಜುಲೈ 20ರಂದು ಇಲ್ಲಿನ ಕದಂಬ ನೌಕಾನೆಲೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಲಾಗಿದೆ.
ಕರ್ನಾಟಕದ ಏಕೈಕ ನೌಕಾನೆಲೆ ಐಎನ್ಎಸ್ ಕದಂಬದಲ್ಲಿ ಸ್ಟೇಟ್-1 ಅಲರ್ಟ್ ಘೋಷಣೆ
ಜನರಿಗೆ ದೇಶದ ಏಕೈಕ ಯುದ್ಧ ವಿಮಾನ ವಾಹಕ ನೌಕೆ ವಿಕ್ರಮಾದಿತ್ಯನನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು (5ನೇ ತರಗತಿ ಮತ್ತು ಮೇಲ್ಪಟ್ಟ ತರಗತಿ) ಭೇಟಿ ನೀಡಬಹುದು. ಐಎನ್ ಎಸ್ ವಿಕ್ರಮಾದಿತ್ಯ ಮತ್ತು ಐಎನ್ ಎಸ್ ಸುವರ್ಣ ನೌಕೆಗಳ ಪ್ರವೇಶಕ್ಕೆ ಮುಕ್ತವಾಗಿರುತ್ತವೆ. ಭದ್ರತೆಯ ಕಾರಣದಿಂದ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ.

ಜನರಿಗೆ ಅರಗಾದ ಮುಖ್ಯ ಗೇಟಿನಿಂದ ಮಾತ್ರ ಪ್ರವೇಶ ಲಭ್ಯ. ತಮ್ಮೊಂದಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರದಿಂದ ನೀಡುವ ಯಾವುದೇ ಫೋಟೊ ಗುರುತಿನ ಚೀಟಿ ತರುವುದು ಕಡ್ಡಾಯ. ವಾಹನಗಳನ್ನು ನೌಕಾನೆಲೆಯ ಹೊರಗೆ ನಿಗದಿತ ಜಾಗದಲ್ಲೇ ನಿಲುಗಡೆ ಮಾಡಬೇಕು. ಅಲ್ಲಿಂದ ನೌಕೆಗಳಿರುವ ಜೆಟ್ಟಿಗೆ ನೌಕಾಪಡೆಯ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ನಂತರ ಮುಖ್ಯ ಗೇಟಿಗೆ ಕರೆತಂದು ಬಿಡಲಾಗುತ್ತದೆ.

ಪ್ರವೇಶ ಪಾಸುಗಳನ್ನು ಮುಖ್ಯ ಗೇಟಿನಲ್ಲೇ ನೀಡಲಾಗುತ್ತದೆ. ನೌಕಾನೆಲೆಯಿಂದ ವಾಪಸ್ ಬಂದಾಗ ಅವುಗಳನ್ನು ಪುನಃ ಭದ್ರತಾ ಸಿಬ್ಬಂದಿಗೆ ಕೊಡಬೇಕು. ದೃಶ್ಯ, ಧ್ವನಿ ಮುದ್ರಣ ಮಾಡಿಕೊಳ್ಳುವ ಕ್ಯಾಮೆರಾ ಅಥವಾ ಇನ್ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೌಕಾನೆಲೆಯ ಒಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದು ನೌಕಾ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications