ಕಾರವಾರ: 200 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆ ಜಾರಿಯಾಗುವ ಮುನ್ನವೇ ಗ್ರಾಹಕರ ಜೇಬಿಗೆ ಕತ್ತರಿ

ಕಾರವಾರ, ಜೂನ್‌, 12: ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವದ ಭರವಸೆಯಂತೆ ಮುಂದಿನ ತಿಂಗಳಿನಿಂದ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ತಿಳಿಸಿದೆ. ಆದರೆ ಈ ಯೋಜನೆ ಜಾರಿಯಾಗುವ ಮೊನ್ನವೇ ದುಪ್ಪಟ್ಟು ಬೆಲೆಯ ವಿದ್ಯುತ್‌ ಬಿಲ್ ಮನೆ ಸೇರಿದ್ದು, ಇದನ್ನು ಕಂಡ ಜನ ದಂಗಾಗಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗಳಿಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುವುದಾಗಿ ತಿಳಿಸಿದೆ. ಆದರೆ ಇದರ ಪ್ರಯೋಜನ ಜನರಿಗೆ ಸಿಗುವ ಮೊದಲೇ ಈ ತಿಂಗಳು ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ. ಹೆಸ್ಕಾಂನಿಂದ ಪ್ರತಿ 0-100 ಯುನಿಟ್‌ಗೆ ಪ್ರತೀ ಒಂದು ಯೂನಿಟ್ ಮೇಲೆ 4.75 ರೂಪಾಯಿ ದರ ನಿಗದಿ ಮಾಡಲಾಗಿದ್ದು, 100 ಯುನಿಟ್‌ಗೂ ಹೆಚ್ಚಾದಲ್ಲಿ ಪ್ರತೀ ಯುನಿಟ್ ಮೇಲೆ 7 ರೂಪಾಯಿ ದರ ವಿಧಿಸಲಾಗುತ್ತಿದೆ.

Electricity bill increase: People worried in Karwar district

ಇನ್ನು ಸಾಮಾನ್ಯ ಬಿಲ್‌ಗಳ ಮೇಲೆ ಕನಿಷ್ಟ ಚಾರ್ಜ್ ಫಿಕ್ಸ್ ಚಾರ್ಜ್ 330 ರೂಪಾಯಿ, ಎಫ್‌ಎಸಿ 91.80 ರೂಪಾಯಿ, ಟ್ಯಾಕ್ಸ್ 15.39 ಸೇರಿಸಿ 437.19 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಇದರ ಮೇಲೆ ಜನರು ಬಳಕೆ ಮಾಡಿದ ವಿದ್ಯುತ್ ಯೂನಿಟ್ ಅನ್ನು ಲೆಕ್ಕಕ್ಕೆ ಸೇರಿಸಲಾಗುತ್ತಿದೆ. ಆದರೆ ಮುಂದಿನ ತಿಂಗಳು ಉಚಿತ ವಿದ್ಯುತ್ ಎಂದು ಕಾದು ಕುಳಿತಿದ್ದವರಿಗೆ ಈ ತಿಂಗಳ ಬಿಲ್‌ನಲ್ಲಿಯೇ ವಿದ್ಯುತ್ ದರ ಹೆಚ್ಚಳ ಮಾಡಿ ಶಾಕ್ ನೀಡಿದೆ.

ವಿದ್ಯುತ್ ದರದ ಜೊತೆಗೆ ಆಹಾರ ಪದಾರ್ಥಗಳ ದರ ಕೂಡ ಹೆಚ್ಚಾಗತೊಡಗಿದ್ದು, ಸರ್ಕಾರ ಹೇಳಿದ್ದೇ ಬೇರೆ ಈಗ ಮಾಡುತ್ತಿರುವುದೇ ಬೇರೆ ಎಂದು ಕಾರವಾರ ಕೊಡಿ ಭಾಗದ ಮಂಜುನಾಥ ನಾಯ್ಕ್‌ ಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಮನೆಗಳ ವಿದ್ಯುತ್ ಬಿಲ್ ಮತ್ರವಲ್ಲದೆ ವಾಣಿಜ್ಯ ಮಳಿಗೆಗಳಿಗೂ ವಿದ್ಯುತ್ ದರ ಹೆಚ್ಚು ಮಾಡಲಾಗಿದೆ. ಇದು ಅಂಗಡಿ ಹಾಗೂ ಇತರ ಉದ್ಯಮ ನಡೆಸುವವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಮೋದಲು ಮನೆಗಳಲ್ಲಿ 600 ರೂಪಾಯಿ, 900 ರೂಪಾಯಿ, 1500 ರೂಪಾಯಿ ಹೀಗೆ ವಿದ್ಯುತ್‌ ಬಿಲ್ ಬರುತ್ತಿತ್ತು. ಆದರೆ ಈ ಬಾರಿ ಬಿಲ್‌ 1,500 ರೂಪಾಯಿ ಗಡಿ ದಾಟಿದೆ. ಈ ಬಿಲ್ ನೋಡಿದ ಜನ ಉಚಿತ ವಿದ್ಯುತ್ತೇ ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ ಅಂತಾ ಕಿರಾಣಿ ವ್ಯಾಪಾರಿ ಮಹೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಸಣ್ಣ ಪುಟ್ಟ ಅಂಗಡಿಗಳ ಮೂಲಕ ದುಡಿದು ಜೀವನ ನಡೆಸುವವರಿಗೆ ಈ ವಿದ್ಯುತ್ ಬಿಲ್ ಹೊರೆಯಾಗಿದೆ. ಸರ್ಕಾರ ತಿಳಿಸಿರುವ 200 ಯೂನಿಟ್ ಉಚಿತ ವಿಚಾರದಲ್ಲಿ ವಾರ್ಷಿಕ ಸರಾಸರಿ ನೋಡಿ ಕೇವಲ ಶೇಕಡಾ 10ರಷ್ಟು ಹೆಚ್ಚು ಬಳಕೆಗೆ ಮಾತ್ರ ಅವಕಾಶ ಎಂದು ತಿಳಿಸಿದೆ. ಇದು ಜನರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರ ಸರಳ ನಿಯಮಗಳ ಮೂಲಕ ಈ ಗೊಂದಲವನ್ನು ಪರಿಹರಿಸಬೇಕು. ಜೊತೆಗೆ ಏರಿಕೆ ಮಾಡಿರುವ ವಿದ್ಯುತ್ ದರವನ್ನು ಕೂಡಲೇ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಕಾರವಾರ ಹೆಸ್ಕಾಂ ಎಇಇ ವಿ.ಎಸ್ ಶೇಬಣ್ಣನವರ ಅವರನ್ನು ಕೇಳಿದರೆ ಏಪ್ರಿಲ್ 1ರಿಂದ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗದಿಂದಲೇ ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ 100 ಯೂನಿಟ್‌ ವಿದ್ಯುತ್‌ಗೆ ಮನೆ ಬಿಲ್ 4.75 ಪೈಸೆ ಇದೆ. 100 ಯೂನಿಟ್ ಮೀರಿದರೆ 7 ರೂಪಾಯಿ ಪಾವತಿಸಬೇಕಾಗಿದೆ. ಒಂದು ವೇಳೆ 100 ಯೂನಿಟ್ ಒಳಗಿದ್ದಲ್ಲಿ ಕನಿಷ್ಠ 475 ರೂಪಾಯಿ ಹಾಗೂ 101 ಯೂನಿಟ್ ಆದರೂ 707 ರೂಪಾಯಿ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಉಚಿತ ವಿದ್ಯುತ್‌ಗಾಗಿ ಕಾದುಕುಳಿತಿದ್ದ ಜನರಿಗೆ ಸರ್ಕಾರ ದುಪ್ಪಟ್ಟು ಬಿಲ್ ನೀಡಿದ್ದು, ಇದರಿಂದ ಗ್ರಾಹಕರು ದಂಗಾಗುವಂತಾಗಿದೆ. ಕೂಡಲೇ ಸರ್ಕಾರ ಪರಿಶೀಲನೆ ನಡೆಸಿ ಪರಿಷ್ಕೃತ ದರವನ್ನು ವಾಪಸ್ಸ್ ಪಡೆಯಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+