ಮುಷ್ಕರದ ನಡುವೆಯೂ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ

By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ನವೆಂಬರ್ 14 : ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ತಿದ್ದುಪಡಿ ಮಸೂದೆ ವಿರೋಧಿಸಿ ರಾಜ್ಯದ ಖಾಸಗಿ ಆಸ್ಪತ್ರೆಗಳ ವೈದ್ಯರು ಕೈಗೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಕಾರವಾರ ಜಿಲ್ಲೆಯ 534 ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಹಾಗೂ ಲ್ಯಾಬೋರೇಟರಿಗಳ ವೈದ್ಯರು, ಸಿಬ್ಬಂದಿ ಮಂಗಳವಾರವೂ ತಮ್ಮ ಕರ್ತವ್ಯ ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದರು.

ಬಾಗಲಕೋಟೆ: ಗರ್ಭಿಣಿ ಚೈತ್ರಾ ಪಾಲಿಗೆ ದೇವರಾದ ಡಾ. ಮನೋಹರ್

ಖಾಸಗಿ ಆಸ್ಪತ್ರೆಗಳು ಮುಚ್ಚಿದ್ದ ಹಿನ್ನೆಲೆಯಲ್ಲಿ ರೋಗಿಗಳು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದರು. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಮುಗಿಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ದೃಶ್ಯ ಕಂಡು ಬಂತು.

ಕೆ.ಪಿ.ಎಂ.ಇ ಬಗ್ಗೆ ವೈದ್ಯರ ಸಲಹೆ ಪಡೆದು ನಿರ್ಧಾರ : ಸಿ.ಎಂ

ಎಲ್ಲ ಖಾಸಗಿ ಆಸ್ಪತ್ರೆಗಳು ಬಹುತೇಕ ಮುಚ್ಚಿದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಅತ್ಯಂತ ಹೆಚ್ಚಿತ್ತು. ರೋಗಿಗಳು ಕ್ಯೂನಲ್ಲಿ ನಿಂತು ಚಿಕಿತ್ಸೆಗಾಗಿ ಕಾಯುತ್ತಿರುವುದು, ವೈದ್ಯಕೀಯ ಸಿಬ್ಬಂದಿಯ ಬಿಡುವಿಲ್ಲದ ಕರ್ತವ್ಯ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಮೂಲಿ ದೃಶ್ಯವಾಗಿತ್ತು.

ವೈದ್ಯರ ಮುಷ್ಕರವೂ ವೈದ್ಯನೇ ಹರಿಃ ಎಂಬ ತಪ್ಪು ಕಲ್ಪನೆಯೂ

ಬಹುತೇಕ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದರೂ ಕೂಡ ಕರ್ತವ್ಯವೇ ಮೊದಲ ದೇವರೆಂದು ಬಗೆದಿರುವ ನಗರದ ವೈದ್ಯ ಡಾ.ಸಂಜೀವ್ ಪಿಕಳೆ ತಮ್ಮ ನರ್ಸಿಂಗ್ ಹೋಮ್ ನಲ್ಲಿ ರೋಗಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರು.

ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯ

ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯ

ಕೆಪಿಎಂಇ ತಿದ್ದುಪಡಿ ಮಸೂದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಕರ್ತವ್ಯ ಸ್ಥಗಿತಗೊಳಿಸಿ ಬೆಳಗಾವಿಯತ್ತ ತೆರಳಿದ್ದರೆ, ಇನ್ನೊಂದೆಡೆ ಕಾರವಾರದ ಪಿಕಳೆ ನರ್ಸಿಂಗ್ ಹೋಂನ ವೈದ್ಯ ಡಾ.ಸಂಜೀವ್ ಪಿಕಳೆ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಆ ಮೂಲಕ ಕರ್ತವ್ಯವೇ ಮೊದಲ ಮೊದಲು ಎಂಬುದನ್ನು ಮೆರೆದಿದ್ದಾರೆ.

ಗಂಭೀರ ಪರಿಸ್ಥಿತಿಯಲ್ಲಿದ್ದ ಮಹಿಳೆ

ಗಂಭೀರ ಪರಿಸ್ಥಿತಿಯಲ್ಲಿದ್ದ ಮಹಿಳೆ

ಇಲ್ಲಿನ ಗರ್ಭಿಣಿಯೊಬ್ಬಳಿಗೆ ತಿಂಗಳು ತುಂಬಿತ್ತು. ಈ ಬಗ್ಗೆ ಭಾನುವಾರ ಆಸ್ಪತ್ರೆಗೆ ಕರೆ ಮಾಡಿದ್ದ ಆಕೆಯ ಪತಿ, ಸೋಮವಾರ ಆಸ್ಪತ್ರೆಗೆ ಬಂದು ದಾಖಲಾಗುವುದಾಗಿ ಕೇಳಿಕೊಂಡಾಗ, ಬಂದ್ ಇರುವುದರಿಂದ ಬರದಂತೆ ಹಾಗೂ ಗಂಭೀರವೇನಾದರೂ ಇದ್ದಲ್ಲಿ ತಿಳಿಸುವಂತೆ ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಆದರೆ ಆಕೆಗೆ ನೋವು ಹೆಚ್ಚಾಗಿದ್ದರಿಂದ ಕೂಡಲೇ ಸೋಮವಾರ ಇಲ್ಲಿನ ಪಿಕಳೆ ನರ್ಸಿಂಗ್‌ ಹೋಂಗೆ ಗರ್ಭಿಣಿಯನ್ನು ತರಲಾಗಿತ್ತು. ಆಕೆಯನ್ನು ಪರೀಕ್ಷಿಸಿದ ವೈದ್ಯೆ ಡಾ.ಅನುರಾಧ ಪಿಕಳೆ, ‘ಆಕೆಯ ಗರ್ಭದಲ್ಲಿ ಆಮ್ನಿಯೋಟಿಕ್ ದ್ರವ ಕಡಿಮೆಯಾಗಿದೆ. ಕೂಡಲೇ ಹೆರಿಗೆ ಮಾಡಲೇ ಬೇಕು. ಇಲ್ಲದಿದ್ದಲ್ಲಿ ಮಗು ಬದುಕುಳಿಯುವುದು ಕಷ್ಟ' ಎಂದು ತಿಳಿಸಿದರು.

ಗಂಡು ಮಗು ತಂದ ಸಂತಸ

ಗಂಡು ಮಗು ತಂದ ಸಂತಸ

ಈ ವೇಳೆ ಮುಷ್ಕರ ಇರುವುದರಿಂದ ಕರ್ತವ್ಯದಲ್ಲಿ ಇಲ್ಲದ ಹೆರಿಗೆ ತಜ್ಞ ಡಾ.ಸಂಜೀವ್ ಪಿಕಳೆ ಅವರನ್ನು ಆಕೆಯ ಕುಟುಂಬದವರು ಹೆರಿಗೆ ಮಾಡಿಸುವಂತೆ ವಿನಂತಿಸಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು, ಕೋರಿಕೆಗೆ ಒಪ್ಪಿ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಆಕೆಗೆ ಇದೀಗ ಗಂಡು ಮಗು ಪ್ರಾಪ್ತಿಯಾಗಿದೆ.

ಕುಟುಂಬದವರ ಕೃತಜ್ಞತೆ

ಕುಟುಂಬದವರ ಕೃತಜ್ಞತೆ

ಮುಷ್ಕರ ಹೂಡಿದ್ದರು ಮಾನವೀಯತೆಗೆ ಕರ್ವ್ಯಕ್ಕೆ ಹಾಜರಾದ ವೈದ್ಯ ಕರ್ತವ್ಯದಲ್ಲಿಲ್ಲದಿದ್ದರೂ ಸಹ, ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಬದುಕುಳಿಸಲು ಮಾನವೀಯತೆ ಮೆರೆದು ಕರ್ತವ್ಯ ನಿಭಾಯಿಸಿದ ವೈದ್ಯರಿಗೆ ಬಾಣಂತಿಯ ಪತಿ ಪ್ರಕಾಶ್ ಅಂಕೋಲೆಕರ್ ಧನ್ಯವಾದ ತಿಳಿಸಿದರು. ಈ ಸಮಯ ಮಾತನಾಡಿದ ಪಿಕಳೆ ಅವರು ‘ಕಾಯ್ದೆ, ಕಾನೂನುಗಳಿಗಿಂತ ಒಬ್ಬರ ಜೀವ ಉಳಿಸುವುದು ಮುಖ್ಯ. ತಕ್ಷಣವೇ ಹೆರಿಗೆ ಮಾಡಿಸದಿದ್ದರೆ ಮಗು ಬದುಕುಳಿಯುತ್ತಿರಲಿಲ್ಲ' ಎಂದರು..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sanjeev Pikale karavara doctor give treatment to a pregnent lady. all private hospital Doctors in the state were on stirike but dr.Sanjeev shows humanity by treating pregnent lady. woman gave birth to baby boy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ