ಮುಂಡಗೋಡ; ದನದ ಬಾಯಲ್ಲಿ ಕೈಬಾಂಬ್ ಸ್ಫೋಟ, ತೀವ್ರಗಾಯ

ಕಾರವಾರ, ಏಪ್ರಿಲ್ 07; ಪೈನಾಪಲ್‌ನಲ್ಲಿ ಸ್ಫೋಟಕ ಇಟ್ಟು ಆನೆಯನ್ನು ಕೊಂದ ಘಟನೆ ಕೇರಳದಲ್ಲಿ ವರದಿಯಾಗಿತ್ತು.‌ ಈ ಬಗ್ಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದ ಜನತೆ, ಈ ರೀತಿ ಅಮಾನವೀಯ ಕೃತ್ಯಕ್ಕೆ‌ ಕಾರಣರಾದವರನ್ನು ಬಂಧಿಸಲು ಒತ್ತಾಯಿಸಿದ್ದರು. ಇದೇ ರೀತಿಯ ಅಮಾನವೀಯ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲೂ ವರದಿಯಾಗಿದೆ.

ಹೌದು, ಕಾಡುಪ್ರಾಣಿ ಬೇಟೆಗೆಂದು ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದ ಬಳಿ ಕೈಬಾಂಬ್‌ ಇಡಲಾಗಿತ್ತು. ಮುಂಡಗೋಡದ ಸನವಳ್ಳಿ ಪ್ಲಾಟಿನ ಅಪ್ಪು ನಾರಾಯಣಸ್ವಾಮಿ ನಾಯರ ಎಂಬವರಿಗೆ ಸೇರಿದ ಆಕಳು ಜಲಾಶಯದ ಹತ್ತಿರ ಮೇಯುತ್ತಿದ್ದಾಗ ನೆಲದಲ್ಲಿ ಬಿದ್ದಿದ್ದ ಕೈಬಾಂಬ್‌ ಅನ್ನು ಆಹಾರವೆಂದು ತಿನ್ನಲು ಮುಂದಾಗಿದ್ದು, ಈ ವೇಳೆ ಬಾಂಬ್ ಸ್ಫೋಟಗೊಂಡಿದೆ.

ಪರಿಣಾಮ ಆಕಳಿನ ಬಾಯಿ ಸಂಪೂರ್ಣ ಛಿದ್ರಗೊಂಡಿದ್ದು, ಮೂಖ ಪ್ರಾಣಿಯ ವೇದನೆ ನೋಡಲಾಗದ ಸ್ಥಿತಿಗೆ ತಲುಪಿದೆ. ಬಾಯಿ, ನಾಲಿಗೆ ಕಳೆದುಕೊಂಡು ಆಕಳು ನರಕಯಾತನೆ ಅನುಭವಿಸುವಂತಾಗಿದೆ. ಅದೃಷ್ಟವಶಾತ್ ದುರ್ಘಟನೆಯಿಂದ ಸ್ವಲ್ಪದರಲ್ಲೇ ಕಟ್ಟಿಗೆಗೆ ತೆರಳಿದ್ದ ಮಹಿಳೆಯರು ಪಾರಾಗಿದ್ದಾರೆ.

Cow Injured After Chewing On Bait Bomb For Wild Animals

ಕಾಡುಪ್ರಾಣಿಗಳ ಬೇಟೆಗೆಂದು ಇಲ್ಲಿ ಕೆಲವರು ಈ ಕೈಬಾಂಬ್ ಗಳನ್ನು ಇಡುತ್ತಿದ್ದಾರೆ. ಜಲಾಶಯದ ನೀರು ಕುಡಿಯಲು ಬರುವ ಕಾಡು ಪ್ರಾಣಿಗಳು ಆಹಾರದ ರೀತಿ ಇರುವ ಈ ಕೈಬಾಂಬ್ ತಿನ್ನಲು ಮುಂದಾದಾಗ, ಇಲ್ಲವೆ ತುಳಿದರೆ ಬಾಂಬ್ ಸ್ಫೋಟಗೊಳ್ಳುತ್ತದೆ.

ಘಟನೆ ಬಳಿಕ ಮಾಹಿತಿ‌ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮತ್ತೊಂದು ಜೀವಂತ ಕೈಬಾಂಬ್ ಪತ್ತೆ ಮಾಡಿದ್ದಾರೆ. ಇಂತಹ‌‌ ದುಷ್ಕೃತ್ಯದಲ್ಲಿ ತೊಡಗುವ ಬೇಟೆಗಾರರ ಮೇಲೆ ನಿಗಾ ಇಡುವಂತೆ ಮತ್ತು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+