ಉತ್ತರ ಕನ್ನಡ: ಕೈ ಪಕ್ಷದೊಳಗೆ ಎದ್ದಿದೆಯೇ ಭಿನ್ನಮತ: ನಾಲ್ವರು ಶಾಸಕರ ಅನುಪಸ್ಥಿತಿಯಲ್ಲಿ ಜನತಾ ದರ್ಶನ!

ಉತ್ತರ ಕನ್ನಡ, ಸೆಪ್ಟೆಂಬರ್‌ 26:ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಸೋಮವಾರ ಯಶಸ್ವಿಯಾಗಿ ನಡೆದಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಈ ಜನತಾ ದರ್ಶನದಲ್ಲಿ ಆಡಳಿತ ಪಕ್ಷದ ಶಾಸಕರು ಸೇರಿ ನಾಲ್ವರು ಶಾಸಕರ ಅನುಪಸ್ಥಿತಿ ಎದ್ದು ಕಂಡಿದ್ದು ಹಲವು ಅನುಮಾನಗಳಿಗೆ ಸಹ ಎಡೆ ಮಾಡಿಕೊಟ್ಟಿದೆ.

ಜನರ ಕೆಲಸ ಸುಲಭವಾಗಲಿ, ಎಲ್ಲಾ ಸಮಸ್ಯೆಗಳು ಬಗೆಹರಿಯಲಿ ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ಜಿಲ್ಲಾ ಮಟ್ಟದಲ್ಲಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇನ್ನು ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ಅಧಿಕಾರಿಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವರು ಜನತಾ ದರ್ಶನ ನಡೆಸಲಿದ್ದು ಜಿಲ್ಲೆಯ ಎಲ್ಲಾ ಶಾಸಕರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಅಹವಾಲುಗಳನ್ನು ಕೇಳಿ ಅಧಿಕಾರಿಗಳೊಂದಿಗೆ ಚರ್ಚಿಗೆ ಪರಿಹಾರ ಒದಗಿಸುವ ಕಾರ್ಯ ಮಾಡಲು ಈ ಜನತಾ ದರ್ಶನ ಕಾರ್ಯಕ್ರಮ ಪ್ರಾರಂಭಿಸಿದೆ.

Congress Janata Darshan Done In The Absence Of Four Uttara Kannada MLAs

ಕಾರವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಸೋಮವಾರ ನಗರದ ಸಾಗರ ದರ್ಶನ ಹಾಲ್ ನಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇನ್ನು ಕಾರ್ಯಕ್ರಮದಲ್ಲಿ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೊರತು ಪಡಿಸಿ ಯಾವ ಶಾಸಕರುಗಳು ಆಗಮಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಜಿಲ್ಲೆಯಲ್ಲಿಯೇ ಹಿರಿಯ ಶಾಸಕರಾಗಿರುವ ಹಳಿಯಾಳ ಕ್ಷೇತ್ರದ ಆರ್.ವಿ ದೇಶಪಾಂಡೆ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಅಲ್ಲದೇ ಪ್ರತಿ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಗಳಿಗೆ ಆಗಮಿಸುತ್ತಿದ್ದ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್‌ ಸಹ ಜನತಾ ದರ್ಶನಕ್ಕೆ ಆಗಮಿಸಿರಲಿಲ್ಲ. ಇಬ್ಬರು ಶಾಸಕರು ಆಡಳಿತ ಪಕ್ಷದ ಶಾಸಕರೇ ಆಗಿದ್ದರು ಏತಕ್ಕಾಗಿ ಆಗಮಿಸಿಲ್ಲ ಎನ್ನುವುದು ಮಾತ್ರ ಅನುಮಾನ ಮೂಡಿಸಿತ್ತು.

Congress Janata Darshan Done In The Absence Of Four Uttara Kannada MLAs

ಇನ್ನು ವಿರೋಧ ಪಕ್ಷದ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್, ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರ ಅನುಪಸ್ಥಿತಿ ಜೊತೆಗೆ ಜಿಲ್ಲೆಯಿಂದ ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ, ಸಂಕನೂರು, ಗಣಪತಿ ಉಳ್ವೇಕರ್ ಅವರ ಅನುಪಸ್ಥಿತಿ ಸಹ ಎದ್ದು ಕಾಣುತ್ತಿತ್ತು.

ಈ ಹಿಂದೆ ಮೊದಲ ಬಾರಿಗೆ ತ್ರೈ ಮಾಸಿಕ ಸಭೆ ಹಮ್ಮಿಕೊಂಡಿದ್ದಾಗ ಆರ್.ವಿ ದೇಶಪಾಂಡೆ ಸಭೆಗೆಂದು ಆಗಮಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಸಭೆ ರದ್ದಾಗಿದ್ದರಿಂದ ಅವರು ವಾಪಾಸ್ ಆಗಿದ್ದು, ಅಲ್ಲಿಂದ ದೇಶಪಾಂಡೆ ಸ್ವಪಕ್ಷದ ಶಾಸಕ ಸಚಿವರ ವಿರುದ್ದವೇ ಗರಂ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದ್ದು ಅದೇ ಕಾರಣಕ್ಕೆ ಜನತಾ ದರ್ಶನಕ್ಕೂ ಆಗಮಿಸಿಲ್ಲ ಎನ್ನಲಾಗಿದೆ.

ಇನ್ನು ಭೀಮಣ್ಣ ನಾಯ್ಕ ಸಹ ಕೆಲ ವಿಚಾರದಲ್ಲಿ ಮನಸ್ಥಾಪ ಮಾಡಿಕೊಂಡಿದ್ದು ಅವರು ಜನತಾ ದರ್ಶನಕ್ಕೆ ಇದೇ ಕಾರಣಕ್ಕೆ ಆಗಮಿಸಿಲ್ಲ ಎನ್ನಲಾಗಿದೆ. ಇನ್ನು ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ಸಭೆ ಆಗಮಿಸಿದರೆ ತಮಗೆ ಗೌರವ ವಿರುವುದಿಲ್ಲ ಎನ್ನುವ ಕಾರಣಕ್ಕೆ ಜನತಾ ದರ್ಶನಕ್ಕೆ ಗೈರಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಜಿಲ್ಲೆಯ ಜನರೆಲ್ಲಾ ತಮ್ಮ ಸಮಸ್ಯೆಗಳನ್ನ ಹಿಡಿದು ಜನತಾ ದರ್ಶನಕ್ಕೆ ಆಗಮಿಸುತ್ತಾರೆ. ಆದರೆ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳೇ ಸಮಸ್ಯೆ ಹೇಳಿಕೊಂಡು ಜನರು ಬರುವ ವೇಳೆಯಲ್ಲಿ ಇರದಿದ್ದರೇ ಜನಪ್ರತಿನಿಧಿಯ ಕೆಲಸವಾದರು ಏನು ಎನ್ನುವ ಪ್ರಶ್ನೆಯನ್ನು ಸಹ ಸಾರ್ವಜನಿಕರು ಮಾಡಿದ್ದು, ಈ ಬೆಳವಣಿಗೆ ಇನ್ನಷ್ಟು ಸ್ವರೂಪ ಪಡೆಯುವುದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ.

ಅಧಿಕಾರಿಗಳ ವರ್ಗಾವಣೆಯ ಮುನಿಸು

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರವಾರದ ಶಾಸಕರ ಮೇಲೆ ಕೆಲ ಅಧಿಕಾರಿಗಳ ವರ್ಗಾವಣೆ ಮಾಡಿಸಿರುವ ವಿಚಾರ ದೇಶಪಾಂಡೆ, ಭೀಮಣ್ಣ ನಾಯ್ಕರ ಮುನಿಸಿಗೆ ಕಾರಣವಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರ ವರ್ಗಾವಣೆಗೆ ದೇಶಪಾಂಡೆ, ಭೀಮಣ್ಣ ನಾಯ್ಕರ ವಿರೋಧವಿತ್ತು ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ಲೆಕ್ಕಿಸದೇ ವರ್ಗಾವಣೆ ಮಾಡಲಾಗಿದೆ. ಇದಲ್ಲದೇ ಇನ್ನು ಹಲವು ಇಲಾಖೆಗಳಲ್ಲಿ ಇದೇ ರೀತಿ ಘಟನೆ ನಡೆದಿದ್ದು ಇದೇ ವಿಚಾರ ಶಾಸಕರ ನಡುವೆ ಭಿನ್ನಮತ ಸೃಷ್ಟಿಸಿದೆ ಎನ್ನಲಾಗಿದೆ.

ಇನ್ನು ಸಚಿವ ಮಂಕಾಳ ವೈದ್ಯ ಸಹ ಉಸ್ತುವಾರಿ ಸಚಿವರಾಗಿ ನಾಲ್ಕು ತಿಂಗಳು ಕಳೆದರು ಇನ್ನೂ ಹಳಿಯಾಳ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಕೇವಲ ಕರಾವಳಿ ಭಾಗ ಹಾಗೂ ಶಿರಸಿ ಕ್ಷೇತ್ರಕ್ಕೆ ಮಂಕಾಳ ವೈದ್ಯ ಭೇಟಿ ನೀಡಿದ್ದು, ಯಲ್ಲಾಪುರ ಹಾಗೂ ಹಳಿಯಾಳ ಕ್ಷೇತ್ರಕ್ಕೆ ಹೋಗದೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಜಿಲ್ಲೆಯಲ್ಲಿಯೇ ಶಾಸಕರುಗಳ ನಡುವೆ ಮುಸುಕಿನ ಗುದ್ದಾಟ ಜೋರಾಗಿ ಪ್ರಾರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+