• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದುಬೈನಿಂದ ಬಂದಿದ್ದ ಭಟ್ಕಳದ ಮತ್ತೊಬ್ಬ ಯುವಕನಲ್ಲೂ ಕೊರೊನಾ ಕನ್ಫರ್ಮ್

|

ಕಾರವಾರ, ಮಾರ್ಚ್ 27: ಭಟ್ಕಳ ಮೂಲದ ಮತ್ತೊಬ್ಬ ಯುವಕನಲ್ಲಿ ಕೊರೊನಾ ಇರುವುದನ್ನು ಪುಣೆಯ ಪ್ರಯೋಗಾಲಯವು ಇಂದು ದೃಢಪಡಿಸಿದೆ. ಈ ಮೂಲಕ ಭಟ್ಕಳ ಪಟ್ಟಣವೊಂದರಲ್ಲೇ ಕೊರೊನಾ ದೃಢಪಟ್ಟವರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.

ಮೊದಲು 40 ವರ್ಷದ ಭಟ್ಕಳ ಮೂಲದ ವ್ಯಕ್ತಿ ದುಬೈನಿಂದ ವಿಮಾನದಲ್ಲಿ ಮಾರ್ಚ್ 21ಕ್ಕೆ ಮಂಗಳೂರಿಗೆ ಬಂದು ಇಳಿದಿದ್ದರು. ಅವರಲ್ಲಿ ಕೊರೊನಾ ಪಾಸಿಟಿವ್ ಇರುವುದಾಗಿ ವರದಿಯಾಗಿತ್ತು. ಎರಡನೆಯದಾಗಿ 65 ವರ್ಷದ ವ್ಯಕ್ತಿಯಲ್ಲೂ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮತ್ತೊಬ್ಬರಿಗೂ ಕೊರೊನಾ ಸೋಂಕು ಇದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿದುಬಂದಿತ್ತು. ಇದೀಗ 22 ವರ್ಷದ ಯುವಕನಲ್ಲೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಭಟ್ಕಳದ ಇಬ್ಬರಲ್ಲಿ ಕೊರೊನಾ ಸೋಂಕು ಕನ್ಫರ್ಮ್

 ದುಬೈನಿಂದ ಬಂದಿದ್ದ ಯುವಕ

ದುಬೈನಿಂದ ಬಂದಿದ್ದ ಯುವಕ

ಈಗ ಕೊರೊನಾ ಪಾಸಿಟಿವ್ ಇರುವ ಯುವಕ ದುಬೈನಿಂದ ಭಟ್ಕಳಕ್ಕೆ ಬಂದಿದ್ದ. ಮಾರ್ಚ್ 20ರಂದು ಗೋವಾ ದಾಬೋಲಿಯಮ್ ವಿಮಾನ ನಿಲ್ದಾಣದ ಮೂಲಕ ಕಾರಲ್ಲಿ ಬಂದಿದ್ದ ಈತ, ಕಾರವಾರದಲ್ಲಿ ಉಪಾಹಾರ ಸೇವಿಸಿದ್ದಾನೆ. ಆ ಬಳಿಕ ಅದೇ ಕಾರಲ್ಲಿ ಭಟ್ಕಳಕ್ಕೆ ತೆರಳಿದ್ದ. ಈತನಲ್ಲಿ ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನದ ಮೇಲೆ ಈತನ ಗಂಟಲಿನ ದ್ರವವನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

 ಮತ್ತೊಮ್ಮೆ ಪುಣೆ ಪ್ರಯೋಗಾಲಯಕ್ಕೆ ಮಾದರಿ ರವಾನೆ

ಮತ್ತೊಮ್ಮೆ ಪುಣೆ ಪ್ರಯೋಗಾಲಯಕ್ಕೆ ಮಾದರಿ ರವಾನೆ

ಶಿವಮೊಗ್ಗ ಪ್ರಯೋಗಾಲಯದಲ್ಲಿ ಈ ಯುವಕನಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಆದರೂ ಮತ್ತೊಮ್ಮೆ ಪರಿಶೀಲನೆಗಾಗಿ ಅಲ್ಲಿಂದ ಪುಣೆಯ ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಲಾಗಿತ್ತು. ಇದೀಗ ಪುಣೆಯಿಂದಲೂ ಕೊರೊನಾ ಇರುವುದು ದೃಢಪಟ್ಟಿದೆ. ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ.

 ಟ್ರಾವೆಲ್ ಹಿಸ್ಟರಿ ಪರಿಶೀಲಿಸುತ್ತಿರುವ ಜಿಲ್ಲಾಡಳಿತ

ಟ್ರಾವೆಲ್ ಹಿಸ್ಟರಿ ಪರಿಶೀಲಿಸುತ್ತಿರುವ ಜಿಲ್ಲಾಡಳಿತ

ಇಂದು ಸಂಜೆ ವೇಳೆಗೆ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ಕೊರೊನಾ ದೃಢಪಟ್ಟ ಮೂವರನ್ನೂ ಸಾಗಿಸುವ ಸಾಧ್ಯತೆ ಇದೆ. ಈ ಯುವಕನ ಟ್ರಾವೆಲ್ ಹಿಸ್ಟರಿಯನ್ನು ಇದೀಗ ಜಿಲ್ಲಾಡಳಿತ ಪರಿಶೀಲಿಸುತ್ತಿದೆ.

 ಭಟ್ಕಳ ಮೂಲದವರದ್ದೇ ನಾಲ್ಕು ಪ್ರಕರಣ

ಭಟ್ಕಳ ಮೂಲದವರದ್ದೇ ನಾಲ್ಕು ಪ್ರಕರಣ

ಭಟ್ಕಳ ಭಟ್ಕಳ ಮೂಲದವರದ್ದೇ ನಾಲ್ಕು ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಎಲ್ಲರೂ ದುಬೈನಿಂದ ಬಂದವರೆಂದು ತಿಳಿದುಬಂದಿದೆ. ಈ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗುತ್ತಿದ್ದಂತೆ ಕಟ್ಟೆಚ್ಚರ ವಹಿಸಲು ಜಾಗೃತಿ ಮೂಡಿಸಲಾಗುತ್ತಿದೆ.

English summary
A Bhatkala based boy who came from dubai on march 20 tested coronavirus positive. There are total 4 corona cases from bhatkal,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X