ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಶಮಾನೋತ್ಸವ ಸಂಭ್ರಮದಲ್ಲಿ ಅಂಕೋಲಾ ಪದವಿ ಕಾಲೇಜು

|
Google Oneindia Kannada News

ಕಾರವಾರ, ನವೆಂಬರ್ 1 : ಕರ್ನಾಟಕದ412 ಸರ್ಕಾರಿ ಪದವಿ ಕಾಲೇಜುಗಳ ಪೈಕಿ ಅಂಕೋಲಾ ತಾಲೂಕಿನ ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಶಮಾನೋತ್ಸವ ಆಚರಿಸಿಕೊಂಡು, ರಾಜ್ಯದಲ್ಲಿಯೇ ದಶಮಾನೋತ್ಸವ ಆಚರಿಸಿಕೊಂಡ ಮೊದಲ ಪದವಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉ. ಕನ್ನಡದಲ್ಲಿ ವೃದ್ಧರು, ಅಶಕ್ತರಿಗೆ ಮನೆಯಲ್ಲೇ ಆಧಾರ್ ನೋಂದಣಿಉ. ಕನ್ನಡದಲ್ಲಿ ವೃದ್ಧರು, ಅಶಕ್ತರಿಗೆ ಮನೆಯಲ್ಲೇ ಆಧಾರ್ ನೋಂದಣಿ

ಈ ಹಿಂದೆ ರಾಜ್ಯದಲ್ಲಿ 239 ಸರ್ಕಾರಿ ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದವು. 2007ರಲ್ಲಿ ಸರ್ಕಾರ 173 ಪದವಿ ಕಾಲೇಜುಗಳನ್ನು ಆರಂಭಿಸಿತ್ತು. ಅದರಲ್ಲಿ ಇದುವರೆಗೂ ಸ್ವಂತ ನಿವೇಶನವಾಗಲಿ, ಕಟ್ಟಡ ನಿರ್ಮಾಣವಾಗದ ಹಲವು ಕಾಲೇಜುಗಳಿವೆ.

Ankola Govt college celebrating 10th anniversary

ಆದರೆ ಕಾಲೇಜು ಆರಂಭಗೊಂಡ 5 ವರ್ಷಗಳಲ್ಲಿಯೇ ಪೂಜಗೇರಿಯಲ್ಲಿ 10 ಎಕರೆ ಜಾಗದೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಆರಂಭದಲ್ಲಿ ತಾತ್ಕಾಲಿಕವಾಗಿ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಕಾಲೇಜನ್ನು ಆರಂಭಿಸಲಾಯಿತು.

ಬಿಎ, ಬಿಬಿಎ, ಬಿಕಾಂ ತರಗತಿಗಳು ಆರಂಭಗೊಂಡು ಸ್ವಂತ ಕಟ್ಟಡಕ್ಕೆ ತೆರಳಿದ ನಂತರ ಬಿಎಸ್‌ಸಿ ಈಗ ಸ್ನಾತಕೋತ್ತರ ಪದವಿಗಳು ತರಗತಿಗಳು ಪ್ರಾರಂಭವಾಗಿವೆ. ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ 638 ವಿದ್ಯಾರ್ಥಿಗಳಿದ್ದಾರೆ.

ಕಾಲೇಜು ಆರಂಭದಲ್ಲಿ ಡಾ.ವಿ.ಜಿ. ಗಣೇಶ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ನಂತರ ಡಾ. ವಿದ್ಯಾ ನಾಯಕ, ಡಾ. ಗೀತಾ ಬಿ. ನಾಯಕ, ಪ್ರೊ.ವಿದ್ಯಾ ಡಿ.ನಾಯಕ ಕಾರ್ಯನಿರ್ವಹಿಸಿದ್ದು, ಹಾಲಿ ಡಾ.ಎಸ್.ವಿ. ನಾಯಕ ಕಾಲೇಜಿನ ಪ್ರಾಚಾರ್ಯರು.

ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘವು ಅಕ್ಟೋಬರ್ 21ರಂದು ಹಮ್ಮಿಕೊಂಡಿದ್ದ ದಶಮಾನೋತ್ಸವ ‌ಕಾರ್ಯಕ್ರಮ ಯಶಸ್ವಿಯಾಗಿದೆ. ದಶಮಾನೋತ್ಸವದ ಅಂಗವಾಗಿ ಸೆಪ್ಟೆಂಬರ್ 5ರಂದು ಪ್ರಾಧ್ಯಾಪಕರ, ಹಳೆಯ ವಿದ್ಯಾರ್ಥಿ ಮತ್ತು ಹಾಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳನ್ನು ನಡೆಸಿದ್ದರು. ನಂತರ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಪ್ರಜ್ಞೆ ಮೂಡಿಸಲು ನಿವೃತ್ತ ಪ್ರಾಚಾರ್ಯ ಡಾ. ಆರ್.ಜಿ. ಗುಂದಿ ಅವರಿಂದ ಸಾಹಿತ್ಯ ಕಾರ್ಯಾಗಾರ ಹಮ್ಮಿಕೊಂಡಿದ್ದರು. 'ದಶಮಾನದ ಸಂಭ್ರಮ' ಸ್ಮರಣ ಸಂಚಿಕೆ ಹೊರತರಲು ವಿದ್ಯಾರ್ಥಿಗಳಿಗೆ ಕಥೆ-ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅಕ್ಟೋಬರ್ 21ರಂದು ನಡೆದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗಿದೆ.

ದಶಮಾನೋತ್ಸವದ ನೆನಪಿಗಾಗಿ ಬಿಬಿಎ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳು ಶಾರದಾ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಹಳೆಯ ವಿದ್ಯಾರ್ಥಿ ಸಂಘದಿಂದ ಸುಸಜ್ಜಿತ ಧ್ವಜದ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ.

ನೇತ್ರದಾನ : ಕಾಲೇಜಿನ ದಶಮಾನೋತ್ಸವದ ನಿಮಿತ್ತ ಆಶ್ರಯ ಫೌಂಡೇಷನ್ ಅಧ್ಯಕ್ಷ ರಾಜೀವ ಗಾಂವಕರ ನೇತ್ರದಾನದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಮಂಜಗುಣಿ, ಪ್ರಧಾನ ಕಾರ್ಯದರ್ಶಿ ಸೂರಜ ರಾಜು ಗೌಡ ತಮ್ಮ ಕಣ್ಣುಗಳನ್ನು ದಾನ ಮಾಡಿ ದಾಖಲೆಯನ್ನು ರಾಜೀವ ಗಾಂವಕರ ಅವರಿಗೆ ಹಸ್ತಾಂತರಿಸಿದರು.

English summary
Government first Grade college Ankola celebrating the 10th anniversary. College was established on the 29th May 2007 at Ankola. Than shifted to Poojageri with suitable environment for students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X