ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದಲ್ಲಿ ಒಬ್ಬಳೇ ಯುವತಿಗೆ ಇಬ್ಬರು ಯುವಕರೊಡನೆ ಮದುವೆ ಹೀಗೂ ಉಂಠೇ!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಆಗಸ್ಟ್.08: ಒಬ್ಬಳೇ ಯುವತಿಗೆ ವಿವಾಹ ನೋಂದಣಿ ಕಚೇರಿಯಲ್ಲಿ ಇಬ್ಬರು ಯುವಕರೊಂದಿಗೆ ಎರಡು ಬಾರಿ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಅಂಕೋಲಾ ತಾಲೂಕಿನ ಸುಂಕಸಾಳ ನಿವಾಸಿ ಗಣಪತಿ ಭಟ್ ಎನ್ನುವವರು 2017ರ ಆ.15ರಂದು ಕಾರವಾರ ತಾಲೂಕಿನ ಅಮದಳ್ಳಿಯ ವೀರಗಣಪತಿ ದೇವಸ್ಥಾನದಲ್ಲಿ ಯಲ್ಲಾಪುರದ ಯುವತಿಯನ್ನು ವಿವಾಹವಾಗಿದ್ದರು. ಇವರಿಬ್ಬರದು ಪ್ರೇಮ ವಿವಾಹವಾಗಿತ್ತು.

ಅಂಕೋಲಾದಲ್ಲಿ ಮದುವೆಯಾದ 9 ನೇ ದಿನಕ್ಕೆ ನವ ವಿವಾಹಿತೆ ಕಾಣೆಅಂಕೋಲಾದಲ್ಲಿ ಮದುವೆಯಾದ 9 ನೇ ದಿನಕ್ಕೆ ನವ ವಿವಾಹಿತೆ ಕಾಣೆ

ಅದರ ಬಳಿಕ ಕಾರವಾರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2018ರ ಫೆ.7ರಂದು ವಿವಾಹ ನೋಂದಣಿ ಮಾಡಿಕೊಂಡಿದ್ದರು. ಇವರ ನಡುವೆ ವಿಚ್ಛೇದನ ಕೂಡ ನಡೆದಿಲ್ಲ. ಆದರೂ ಆಕೆಗೆ ಪಾಲಕರು ಎರಡನೇ ಮದುವೆ ಮಾಡಿಸಿದ್ದು, ಯಲ್ಲಾಪುರ ನೋಂದಣಾಧಿಕಾರಿ ಈ ಎರಡನೇ ಮದುವೆಯನ್ನೂ ನೋಂದಣಿ ಮಾಡಿಸಿಕೊಂಡಿದ್ದಾರೆ.

A young woman was married two youths Incident happened in Karwar

2018ರ ಜು.19ರಂದು ಇದೇ ವಿವಾಹಿತೆಗೆ ಯಲ್ಲಾಪುರ ತಾಲೂಕಿನ ಮಾಗೋಡ ಮೇಲಿನ ತಾರೇಮನೆ ನಿವಾಸಿ ರಾಜೇಶ ಭಟ್ ಎಂಬುವವರಿಗೆ ಮದುವೆ ಮಾಡಿಸಲಾಗಿದೆ. ಈ ಮದುವೆಯನ್ನು ಇದೇ ವರ್ಷದ ಜು.23ರಂದು ಯಲ್ಲಾಪುರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದೆ.

ಮೊದಲ ವಿವಾಹ ನೋಂದಣಿಯಲ್ಲಿ ವಿವಾಹಿತಳ ಮನೆಯ ವಿಳಾಸವನ್ನು ಯಲ್ಲಾಪುರ ಪಟ್ಟಣದ ಉದ್ದಜಡ್ಡಿ, ಕಂಪ್ಲಿ ಅಂತಲೂ, ಎರಡನೇ ವಿವಾಹ ನೋಂದಣಿಯಲ್ಲಿ ಬಾಳಗಿಮನೆಯ ಹುಲ್ಲಾರಮನೆ ಎಂದು ನೀಡಲಾಗಿದೆ.

ಇದೀಗ ಹುಡುಗಿಯ ಮನೆಯವರು ತನಗೆ ಮೋಸ ಮಾಡಿ ಪತ್ನಿಗೆ ಇನ್ನೊಂದು ಮದುವೆ ಮಾಡಿಸಿದ್ದಾರೆ ಎಂದು ಗಣಪತಿ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

A young woman was married two youths Incident happened in Karwar

ಯುವತಿ ಹಾಗೂ ಗಣಪತಿ ಭಟ್ ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದರು. ನಂತರ ಮದುವೆಯಾಗಿ ಅದನ್ನು ನೋಂದಣಿ ಮಾಡಿಸಿಕೊಂಡಿದ್ದರು. ಆದರೆ ಈ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ನಂತರದ ದಿನಗಳಲ್ಲಿ ಗಣಪತಿ ಭಟ್ ಉದ್ಯೋಗವನ್ನು ಅರಸಿ ಬೆಂಗಳೂರಿಗೆ ತೆರಳಿದ್ದ. ಈ ನಡುವೆ ಒಮ್ಮೆ ಊರಿಗೆ ಬಂದಾತ ವಿವಾಹ ನೋಂದಣಿ ಮಾಡಿಸಿಕೊಂಡಿದ್ದ.

ಆದರೆ, ಆತ ಬೆಂಗಳೂರಿನಲ್ಲಿ ಇದ್ದ ಕಾರಣ ಆಕೆಗೂ ಆತನ ಮೇಲಿನ ಪ್ರೀತಿ ಕಡಿಮೆಯಾಗಿ, ಪಾಲಕರು ಮದುವೆಯಾಗುವಂತೆ ಒತ್ತಾಯಿಸಿದಾಗ ಮನ ಬದಲಿಸಿ ವಿವಾಹವಾಗಿದ್ದಾಳೆ ಎನ್ನಲಾಗಿದೆ.

ಈ ಕುರಿತು ಇದೀಗ ಗಣಪತಿ ಭಟ್ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಿದ್ದಾರೆ.

English summary
A young woman was married two youths Incident happened in Karwar. About this Ganapati Bhat complained to the District Police Superintendent office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X