ಸಾವಂತವಾಡದಲ್ಲಿ ಹೋಂ ನರ್ಸ್ ಮೇಲೆ ವೃದ್ಧನಿಂದ ಅತ್ಯಾಚಾರ

ಕಾರವಾರ, ಸೆಪ್ಟೆಂಬರ್.20: ಮನೆಗೆ ಹೋಗಿ ರೋಗಿಯನ್ನು ಆರೈಕೆ ಮಾಡಲು ನರ್ಸ್ ಗಳು ಇನ್ನು ಮುಂದೆ ಹಿಂಜರಿದರೆ ಅಚ್ಚರಿ ಇಲ್ಲ. ಕಾರಣ ಅಂತಹದೊಂದು ಘಟನೆ ಕಾರವಾರ ತಾಲೂಕಿನಲ್ಲಿ ನಡೆದಿದೆ.

ಹೋಂ ನರ್ಸ್ ಮೇಲೆ 70 ವರ್ಷದ ವೃದ್ಧನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ತಾಲೂಕಿನ ಮಾಜಾಳಿಯ ಸಾವಂತವಾಡದಲ್ಲಿ ಬೆಳಕಿಗೆ ಬಂದಿದೆ.

ದಿನಕರ ಸಾವಂತ ಎಂಬ ವೃದ್ಧ ಹೋಂ ನರ್ಸ್ ಮೇಲೆ ಅತ್ಯಾಚಾರ ನಡೆಸಿದ ಆರೋಪಿ.

ಆರೋಪಿ ತಂಗಿಯು ಅನಾರೋಗ್ಯ ಪೀಡಿತರಾಗಿದ್ದರು. ಅವರನ್ನು ನೋಡಿಕೊಳ್ಳಲು ಪೂನಾದಿಂದ ಹೋಂ ನರ್ಸ್(39) ಅನ್ನು ಮನೆಗೆ ಕರೆಸಲಾಗಿತ್ತು. ನರ್ಸ್ ಅನ್ನು ತನ್ನ ರೂಮಿಗೆ ಬಲವಂತವಾಗಿ ಎಳೆದೊಯ್ದ ವೃದ್ಧ, ಅತ್ಯಾಚಾರ ನಡೆಸಿದ್ದಾನೆ.

A 70-year-old man has been raped on a home nurse

ಈ ಬಗ್ಗೆ ಅತ್ಯಾಚಾರಕ್ಕೊಳಗಾದ ನರ್ಸ್ ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ. ವೃದ್ಧನ ಬಂಧನಕ್ಕೆ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ದಿವ್ಯಾಂಗ ಮಹಿಳೆ ಮೇಲೆ ಅತ್ಯಾಚಾರ

ಕೆಲಸ ಕೊಡಿಸುವುದಾಗಿ ನಂಬಿಸಿ 29 ವರ್ಷದ ದಿವ್ಯಾಂಗ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸೋಮ ಸಾಯಿಲು ಬಂಧಿತ ಆರೋಪಿ.

ಸಂತ್ರಸ್ತೆಯ ಪತಿ ಆರ್ ಟಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಅವರು ಇತ್ತೀಚೆಗೆ ನಿಧನ ಹೊಂದಿದರು. ಆ ಕೆಲಸವನ್ನು ಪಡೆಯಲು ಸಂತ್ರಸ್ತೆ ಪ್ರಯತ್ನಿಸುತ್ತಿದ್ದರು. ಈ ವೇಳೆ ಆರೋಪಿ ಆರ್ ಟಿಸಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ.

ಮಹಿಳೆ ಪ್ರಜ್ಞೆ ತಪ್ಪಿ ತಪ್ಪಿಸಿ ಈ ನೀಚ ಕೃತ್ಯ ಎಸಗಿರುವ ಆರೋಪಿ ಪೊಲೀಸರಿಗೆ ತಿಳಿಸಿದರೆ ಪುತ್ರನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ. ಅತ್ಯಾಚಾರ ಮತ್ತು ವಂಚನೆ ಪ್ರಕರಣ ಸಂಬಂಧ ಆರೋಪಿ ವಿರುದ್ಧ ಪೊಲೀಸರು ಕೇಸ್ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+