ಉತ್ತರ ಕನ್ನಡ ಜಿಲ್ಲೆಯ ಚುನಾವಣಾ ಕಣದಲ್ಲಿ 57 ಅಭ್ಯರ್ಥಿಗಳು: ಇಲ್ಲಿದೆ ಕ್ಷೇತ್ರವಾರು ಸಂಪೂರ್ಣ ಮಾಹಿತಿ

ಕಾರವಾರ, ಏಪ್ರಿಲ್‌ 25: ಉತ್ತರ ಕನ್ನಡ ಜಿಲ್ಲೆಯ ಒಟ್ಟು 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್‌ ಪಡೆದಿದ್ದು, ಅಂತಿಮವಾಗಿ 57 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಒಟ್ಟು 64 ಅಭ್ಯರ್ಥಿಗಳಿಂದ 101 ನಾಮಪತ್ರ ಸಲ್ಲಿಕೆಯಾಗಿತ್ತು. ಈ ಪೈಕಿ ಹಳಿಯಾಳ ಮತಕ್ಷೇತ್ರದಲ್ಲಿ 2 ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರಗೊಂಡಿತ್ತು. ಉಳಿದಂತೆ 62 ಅಭ್ಯರ್ಥಿಗಳ ಪೈಕಿ ಒಟ್ಟು 5 ಅಭ್ಯರ್ಥಿಗಳು ಹಿಂದೆ ಸರಿದಿದ್ದು, ಒಟ್ಟು 57 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಇದರಲ್ಲಿ 53 ಪುರುಷ ಹಾಗೂ 4 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.

57 Candidates Contesting From Uttara Kannada District In Karnataka Assembly Election 2023

ಕಾರವಾರ ಕ್ಷೇತ್ರದಿಂದ ದಿಲೀಪ್ ಕೊಠಾರಕರ್, ಶಿರಸಿ ಕಾಂಗ್ರೆಸ್ ಬಂಡಾಯ ವೆಂಕಟೇಶ ಹೆಗಡೆ, ಕುಮಟಾ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ್ ಶೆಟ್ಟಿ, ಮೋಹನ್ ಬಾಗ್ಲು ಪಟಗಾರ ಹಾಗೂ ಯಲ್ಲಾಪುರ ಶೆಟ್ಟಪ್ಪ ಯಲ್ಲಪ್ಪ ಭೋವಿವಡ್ಡರ ನಾಮಪತ್ರ ವಾಪಸ್‌ ಪಡೆದು ಕೊಂಡಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಒಟ್ಟು 6 ಬಿಜೆಪಿ, 6 ಕಾಂಗ್ರೆಸ್, 6 ಜೆಡಿಎಸ್, 6 ಎಎಪಿ, ಬಿಎಸ್ಪಿ 1, ಇತರೆ ಪಕ್ಷಗಳಿಂದ 13 ಹಾಗೂ ಪಕ್ಷೇತರ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾರವಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ವಿವರ

ಕಾರವಾರ-ಅಂಕೋಲಾ ಕ್ಷೇತ್ರದಿಂದ ಸತೀಶ್ ಸೈಲ್ (ಕಾಂಗ್ರೆಸ್), ರೂಪಾಲಿ ನಾಯ್ಕ (ಬಿಜೆಪಿ) ಚೈತ್ರಾ ಕೋಠಾರಕರ್ (ಜೆಡಿಎಸ್), ವಿನಾಯಕ ಮಂಗೇಶ ನಾಯ್ಕ (ಕರ್ನಾಟಕ ರಾಷ್ಟ್ರ ಸಮಿತಿ), ಆಶಿಸ್ ಗಾಂವಕರ್ (ಆಮ್ ಆದ್ಮಿ ಪಾರ್ಟಿ), ಗಂಗಾಧರ ಭಟ್ ಸ್ವತಂತ್ರ (ಬಿಜೆಪಿ ಬಂಡಾಯ), ಕುಮಾರ್ ನಾಯ್ಕ (ಸ್ವತಂತ್ರ) ಕುಂದಾಬಾಯಿ ಪರುಳೇಕರ್ (ಸ್ವತಂತ್ರ) ನಾಗರಾಜ ಶಿರಾಲಿ (ಸ್ವತಂತ್ರ) ಹೊಸಬಣ್ಣ ಕೃಷ್ಣಾ ನಾಯಕ (ಸ್ವತಂತ್ರ)ಮುಕುಂದ ಮಧು ಹುಲಸ್ವಾರ್ (ಸ್ವತಂತ್ರ) ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

57 Candidates Contesting From Uttara Kannada District In Karnataka Assembly Election 2023

ಕುಮಟಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ವಿವರ

ಕುಮಟಾ-ಹೊನ್ನಾವರ ಕ್ಷೇತ್ರದಿಂದ ದಿನಕರ ಶೆಟ್ಟಿ (ಬಿಜೆಪಿ), ನಿವೇದಿತ್ ಆಳ್ವ (ಕಾಂಗ್ರೆಸ್), ಸೂರಜ ನಾಯ್ಕ ಸೋನಿ (ಜೆಡಿಎಸ್), ನಾಗರಾಜ ಶೇಟ್ (ಆರ್‌ಜೆಪಿ), ರೂಪಾ ನಾಯ್ಕ (ಆಮ್ ಆದ್ಮಿ), ದಿನೇಶಚಂದ್ರ ಅಂಗಡಿಕೇರಿ (ಲೋಕಶಕ್ತಿ), ಸುಬ್ರಹ್ಮಣ ಭಟ್ (ಸ್ವತಂತ್ರ), ಗನಿ ಇಮಾಮ್‌ಸಾಬ್ ಜೈನುದ್ದೀನ್ (ಸ್ವತಂತ್ರ), ಈಶ್ವರ ಗೌಡ ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ.

ಭಟ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ವಿವರ

ಇನ್ನು ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಮಂಕಾಳು ವೈದ್ಯ (ಕಾಂಗ್ರೆಸ್), ಸುನೀಲ ನಾಯ್ಕ (ಬಿಜೆಪಿ), ನಾಗೇಂದ್ರ ನಾಯ್ಕ (ಜೆಡಿಎಸ್), ನಸೀಮ್ ಅಹ್ಮದ್ ಖಾನ್ (ಆಮ್ ಆದ್ಮಿ), ಯೋಗೇಶ ನಾಯ್ಕ (ಉತ್ತಮ ಪ್ರಜಾಕೀಯ), ಶಂಕರ ಗೌಡ (ಕರ್ನಾಟಕ ರಾಷ್ಟ್ರ ಸಮಿತಿ), ಗಫೂರ್ ಸಾಬ್ (ಆಲ್ ಇಂಡಿಯಾ ಮಹಿಳಾ ಎಂಪವರಮೆಂಟ್ ಪಾರ್ಟಿ), ಪ್ರಕಾಶ ಪಿಂಟೋ ಪಾಸ್ಕೋಲ್ (ಭಾರತೀಯ ಬೆಳಕು ಪಾರ್ಟಿ), ಮಹಮ್ಮದ್ ಝಬರೂದ್ ಖತೀಬ್ (ಸ್ವತಂತ್ರ) ಅಭ್ಯರ್ಥಿಯಾಗಿದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ವಿವರ

ಯಲ್ಲಾಪುರ-ಮುಂಡಗೋಡ ಕ್ಷೇತ್ರದಿಂದ ವಿ.ಎಸ್.ಪಾಟೀಲ್ (ಕಾಂಗ್ರೆಸ್), ಶಿವರಾಮ ಹೆಬ್ಬಾರ (ಬಿಜೆಪಿ), ನಾಗೇಶ ನಾಯ್ಕ (ಜೆಡಿಎಸ್), ಸಂತೋಷ ಮಂಜುನಾಥ ಶೇಟ್ ರಾಯ್ಕರ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಮಂಜುನಾಥ ಕುಲುಮಕರ (ಆಮ್ ಆದ್ಮಿ), ಮಂಜುನಾಥ ಶಿರಹಟ್ಟಿ (ಕರ್ನಾಟಕ ರಾಷ್ಟ್ರ ಸಮಿತಿ) ಲಕ್ಷ್ಮಣ ಬನ್ಸೊಡೆ (ಸ್ವತಂತ್ರ, ಕಾಂಗ್ರೆಸ್ ಬಂಡಾಯ) ಆನಂದ ಗಣಪತಿ ಭಟ್ (ಸ್ವತಂತ್ರ) ಚಿದಾನಂದ ಹರಿಜನ (ಸ್ವತಂತ್ರ) ಅಭ್ಯರ್ಥಿಗಳಾಗಿದ್ದಾರೆ.

57 Candidates Contesting From Uttara Kannada District In Karnataka Assembly Election 2023

ಹಳಿಯಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ವಿವರ

ಇನ್ನು ಹಳಿಯಾಳ-ಜೊಯಿಡಾ ಕ್ಷೇತ್ರದಲ್ಲಿ ಆರ್.ವಿ. ದೇಶಪಾಂಡೆ (ಕಾಂಗ್ರೆಸ್), ಸುನೀಲ್ ಹೆಗಡೆ (ಬಿಜೆಪಿ), ಶ್ರೀಕಾಂತ ಘೋಟ್ನೇಕರ (ಜೆಡಿಎಸ್), ಮಲ್ಲಯ್ಯ ಗಂಗಯ್ಯ ಹಿರೇಮಠ (ಉತ್ತಮ ಪ್ರಜಾಕೀಯ ಪಕ್ಷ), ಬಸವರಾಜ ಶೇಖ್ ಸನದಿ (ಕರ್ನಾಟಕ ರಾಷ್ಟ್ರ ಸಮಿತಿಪಕ್ಷ), ಮುನ್ನೂರಪ್ಪಾ ಕಲ್ಲಪ್ಪಾ ಜರಿ (ಬಹುಜನ ಸಮಾಜ ಪಾರ್ಟಿ), ಸಂದು ಗುರುದೀಪ್ ಸಿಂಗ್ (ಆಮ್‌ಆದ್ಮಿ ಪಾರ್ಟಿ), ಎಲಿಯಾ ಕಟಿ (ಸ್ವತಂತ್ರ) ಜಹಾಂಗೀರ ಬಾಬ ಜಾನ (ಸ್ವತಂತ್ರ) ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಶಿರಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ವಿವರ

ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ), ಉಪೇಂದ್ರ ಪೈ (ಜೆಡಿಎಸ್), ಭೀಮಣ್ಣ ನಾಯ್ಕ (ಕಾಂಗ್ರೆಸ್), ಹಿತೇಂದ್ರ ನಾಯ್ಕ (ಆಮ್ ಆದ್ಮಿ), ದಿನೇಶ ನಾಯ್ಕ (ಇಂಡಿಯನ್ ಮೂವೆಂಟ್ ಪಾರ್ಟಿ), ಸುನೀಲ ಪವಾರ (ಉತ್ತಮ ಪ್ರಜಾಕೀಯ), ವಿಶ್ವನಾಥ ನಾಯ್ಕ (ಕರ್ನಾಟಕ ಜನಸೇವಾ ಪಾರ್ಟಿ), ಅಭಿರಾಮ ಹೆಗಡೆ (ಸ್ವತಂತ್ರ), ಗೋಪಾಲ ದೇವಾಡಿಗ (ಸ್ವತಂತ್ರ) ಉಮೇಶ ದೈವಜ್ಞ (ಸ್ವತಂತ್ರ) ಅಭ್ಯರ್ಥಿಗಳಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+