ಜಿ.ಪಂ-ತಾ.ಪಂ ಮೀಸಲಾತಿ ಹಂಚಿಕೆಯಲ್ಲಿ ಗೋಲ್‌ಮಾಲ್‌: ಕಾಂಗ್ರೆಸ್‌ ವಿರುದ್ಧ ನಿಖಿಲ್‌ ಆರೋಪ

ZP TP Elections: ಜಿ.ಪಂ-ತಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಮೀಸಲಾತಿ ಹಂಚಿಕೆ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ವಿವಾದ ತೀವ್ರಗೊಂಡಿದೆ. ಮೀಸಲಾತಿ ಹಂಚಿಕೆಯಲ್ಲಿ ಗೋಲ್‌ಮಾಲ್‌ ನಡೆದಿದೆ ಎಂದು ಆರೋಪಿಸಿರುವ ನಿಖಿಲ್‌ ಕುಮಾರಸ್ವಾಮಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು. ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಜನವರಿಯಲ್ಲಿ ನಡೆಯುವುದು ಅನುಮಾನವಿದೆ. ಮೀಸಲಾತಿ ವಿಚಾರದಲ್ಲಿ ಎಲ್ಲಿ ಅನ್ಯಾಯ ಆಗಿದೆಯೋ ಅಲ್ಲಿ ನಾವು ಕೋರ್ಟ್ ಮೊರೆ ಹೋಗಿ ಆಕ್ಷೇಪಣೆ ಸಲ್ಲಿಸಿ, ಕಾನೂನು ಹೋರಾಟ ಮಾಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

ZP TP Elections Nikhil Kumaraswamy Allege Irregularities in ZP-TP Reservation Allocation Targets Congress

ಜಿ.ಪಂ-ತಾ.ಪಂ ಚುನಾವಣೆಯ ಮೀಸಲಾತಿ ಕೆಟಗರಿ ಹಂಚಿಕೆಯಲ್ಲೂ ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡಿದೆ. ತಮ್ಮ ಕಾರ್ಯಕರ್ತರು, ಮುಖಂಡರ ಗೆಲುವಿಗೆ ಅನುಕೂಲವಾಗುವಂತೆ ಕೆಟಗರಿಯನ್ನು ಬೇಕಾಬಿಟ್ಟಿ ಮಾಡಿಕೊಂಡಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ZP TP Elections: ನಾಳೆ ಚುನಾವಣೆ ನಡೆದರೂ ಉತ್ತರ ಕೊಡಲು ಸಿದ್ಧ

ಬೆಂಗಳೂರಿನಲ್ಲಿ GBA ಮಾಡಿ 5 ಕಾರ್ಪೊರೇಷನ್ ಮಾಡುತ್ತೇವೆ ಎಂದಿದ್ದರು. ಈಗ SIR ಬಳಿಕ 50 ಲಕ್ಷ ಮತದಾರರು ಕಡಿಮೆಯಾಗಿದ್ದಾರೆ ಎಂದು ಹೇಳಿ 2 ಕಾರ್ಪೊರೇಷನ್ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾಳೆ ಚುನಾವಣೆ ನಡೆದರೂ ಜನ ಉತ್ತರ ಕೊಡಲು ಸಿದ್ಧರಿದ್ದಾರೆ ಎಂದು ಹೇಳಿದರು.

ರೈತರಿಗೆ ಚಿಲ್ಲರೆ ಪರಿಹಾರವೇ?

ರಾಜ್ಯದಾದ್ಯಂತ ಮಳೆ-ಬೆಳೆ ಇಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆ ಮಾಡಲು 25 ಸಾವಿರ ರೂ. ಖರ್ಚು ಮಾಡಿರುವ ರೈತನಿಗೆ 2500 ರೂ. ಕೊಡ್ತೀವಿ ಅಂತ ಹೇಳಿ ತಿಂಗಳುಗಳೇ ಕಳೆದಿವೆ. ಇಲ್ಲಿಯವರೆಗೂ ಸರ್ಕಾರಿ ಆದೇಶವೇ ಆಗಿಲ್ಲ. ಕೇವಲ 2500 ರೂಪಾಯಿಯಿಂದ ರೈತರ ಕಣ್ಣೀರು ಒರೆಸಲು ಸಾಧ್ಯನಾ? ಘೋಷಣೆ ಮಾಡಿದ ಮಾತ್ರಕ್ಕೆ ರೈತರ ಹೊಟ್ಟೆ ತುಂಬಲ್ಲ.

ಸಾಲಮನ್ನಾಕ್ಕೆ ಒತ್ತಾಯ

ಈ ಹಿಂದೆ ರೈತರಿಗೆ ಸಂಕಷ್ಟ ಬಂದಾಗ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಇಡೀ ರಾಜ್ಯದ ರೈತರ ಸಾಲಮನ್ನಾ ಮಾಡಿ ರೈತರನ್ನು ಉಳಿಸಿದ್ದರು. ಕಾಂಗ್ರೆಸ್ ನಾಯಕರ ಹೈಕಮಾಂಡ್ ಕನಸನ್ನು ಕುಮಾರಣ್ಣ ನನಸು ಮಾಡಿದರು ಎಂದು ಸ್ವತಃ ಸಿಎಂ ಅವರೇ ಹೇಳಿದ್ದಾರೆ. ಅಂತಹ ಕೆಲಸವನ್ನು ಈಗಲೂ ಮಾಡಿ, ಕೂಡಲೇ ರೈತರ ಸಾಲಮನ್ನಾ ಮಾಡಿ ಎಂದು ಆಗ್ರಹಿಸಿದರು.

ಸರ್ಕಾರದ ನಾಟಕಗಳ ವಿರುದ್ಧ ಕಿಡಿ

ನಾಡಿನ ಜನರು ನಿಮಗೆ 136 ಶಾಸಕರನ್ನು ಕೊಟ್ಟಿದ್ದಾರೆ. ಆದರೆ ನೀವು ರೈತರ ಸಮಸ್ಯೆ ಬಿಟ್ಟು ದಿನಕ್ಕೊಂದು ಹೊಸ ನಾಟಕ ಶುರು ಮಾಡಿದ್ದೀರಿ. ಫಾರಂ-7 ಅಂದ್ರೆ ಏನು? ಮರಣನಾ? SIR ಸ್ಟಿಂಗ್, ಟ್ರ್ಯಾಪ್ ಅಂತ ದಾರಿ ತಪ್ಪಿಸುತ್ತಿದ್ದೀರಿ. ಸಚಿವರೆಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇನ್ನೂ ಮುಂದೆ ಏನೇನು ನೋಡಬೇಕೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸ್ಟಿಂಗ್ ಬಗ್ಗೆ ಸರ್ಕಾರದಲ್ಲೇ ಆತಂಕ

ಸದನದ ಒಳಗೆ ಸ್ಟಿಂಗ್ ಬಗ್ಗೆ ಸ್ವಪಕ್ಷದ ಹಿರಿಯ ಸಚಿವರೇ, ಅನೇಕ ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿರುವ ಹಿರಿಯರು ದಾಖಲೆ ಸಮೇತ ಆತಂಕ ವ್ಯಕ್ತಪಡಿಸಿದ್ದಾರೆ. "ಸ್ಟಿಂಗ್ ಮಾಡ್ತಾರೆ, ಸಚಿವರು ಹುಷಾರಾಗಿರಿ" ಎಂದು ಸರ್ಕಾರದಲ್ಲಿರುವವರೇ ಹೇಳುತ್ತಾರೆ ಅಂದರೆ ಸರ್ಕಾರದ ಒಳಗಡೆ ಏನೋ ನಡೆಯುತ್ತಿದೆ ಎಂದರ್ಥ. ಸರ್ಕಾರ ನಿಮ್ಮದ್ದು, ಗುಪ್ತಚರ ಇಲಾಖೆ ಯಾರ ಹತ್ತಿರ ಇದೆ ಎಂದು ನೀವೇ ಹೇಳಬೇಕು.

ಟಾರ್ಗೆಟ್ ಮಾಡಿ FIR ಮಾಡುವುದು ಕಡೂರು ತಾಲೂಕಿನಲ್ಲಿ ಮಾತ್ರ ಅಲ್ಲ, ರಾಜ್ಯದಾದ್ಯಂತ ನಡೆಯುತ್ತಿದೆ. ಜೆಡಿಎಸ್ ಕಾರ್ಯಕರ್ತರು ಇದಕ್ಕೆ ಹೆದರುವುದಿಲ್ಲ. ನಾನು ಚುನಾವಣೆ ಸೋತ ಬಳಿಕ ನೂರು ಪ್ರವಾಸ ಮಾಡಿದ್ದೇನೆ. ಜನರೊಂದಿಗೆ ನಿರಂತರವಾಗಿದ್ದೇನೆ. ಈ ಹೋರಾಟ ನಿಲ್ಲುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+