ಶೂನ್ಯ ಫಲಿತಾಂಶ ಪಡೆದ 10 ಪಿಯು ಕಾಲೇಜುಗಳ ಮಾನ್ಯತೆ ರದ್ದು!
ಬೆಂಗಳೂರು, ಏಪ್ರಿಲ್ 28: ಸತತ ಮೂರು ವರ್ಷ ಶೂನ್ಯ ಫಲಿತಾಂಶ ಪಡೆದ 10 ಅನುದಾನರಹಿತ ಪಿಯು ಕಾಲೇಜುಗಳ ಮಾನ್ಯತೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ರದ್ದುಗೊಳಿಸಿದೆ.
ಕಲಬುರಗಿ-4,ದಾವಣಗೆರೆ-2, ಬಳ್ಳಾರಿ 1 ಹಾಗೂ ಬೆಳಗಾವಿ, ಹಾವೇರಿ, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಂದು ಕಾಲೇಜಿನ ಮಾನ್ಯತೆ ಹಿಂದಪಡೆದಿದೆ. ಅಲ್ಲದೆ, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
2018-19 ನೇ ಸಾಲಿನಿಂದಲೇ ಮಾನ್ಯತೆಯನ್ನು ಹಿಂಪಡೆದಿದ್ದು, ಈ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹತ್ತಿರದ ಕಾಲೇಜುಗಳಿಗೆ ದಾಖಲಾತಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

30 ರಂದು ಪ್ರತಿಭಟನೆ: ನಿಗಧಿತ ಅವಧಿಗೆ ಮುನ್ನ 2018-19 ನೇ ಸಾಲಿನ ಪಿಯು ಕಾಲೇಜುಗಳ ಪ್ರಾರಂಭವನ್ನು ವಿರೋಧಿಸಿ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ಸಂಘ ಏ.30ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. 30ರಂದು ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಲು ಇಲಾಖೆ ನಿರ್ಧರಿಸಿದೆ. ಈ ಮಧ್ಯೆಯೇ ಪಿಯು ಉಪನ್ಯಾಸಕರು ಪ್ರತಿಭಟನೆ ಕೈಗೊಂಡಿದ್ದಾರೆ.











Click it and Unblock the Notifications