ಚಾಮರಾಜಪೇಟೆಯಲ್ಲಿ ಜಮೀರ್ ಅಹ್ಮದ್ ಗೆಲುವು ನಿಶ್ಚಿತ: ಪುಟ್ಟಣ್ಣ

ಚಾಮರಾಜಪೇಟೆ, ಜನವರಿ 27: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್ ಅವರ ಗೆಲುವು ನಿಶ್ಚಿತ ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಪುಟ್ಟಣ್ಣ ಹೇಳಿದರು.

ನಗರದ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಮುಖಂಡ ಸಿ. ಗೋವಿಂದರಾಜ್ ನೇತೃತ್ವದಲ್ಲಿ ಶ್ರೀ ಅಣ್ಣಮ್ಮದೇವಿ ಭಕ್ತ ಮಂಡಲಿ ತನ್ನ 40 ನೇ ವಾರ್ಷಿಕೋತ್ಸವ ಹಾಗೂ ಊರ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ದಿನೋಪಯೋಗಿ ವಸ್ತುಗಳು, ಸೀರೆಗಳು ಹಾಗೂ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.

"ತಾಂತ್ರಿಕ ಕಾರಣಗಳಿಂದ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ನಿಧಾನವಾಗುತ್ತಿದೆ. ಆದರೆ, ಈಗಾಗಲೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿರುವಂತೆ ಅವರು ಕಾಂಗ್ರೆಸ್ ನಿಂದ ಸ್ಪರ್ಧೆಗಿಳಿಯಲಿದ್ದಾರೆ. ಜಮೀರ್ ಖಾನ್ ಅವರು ಈ ಭಾಗದಲ್ಲಿ ಸಾಕಷ್ಟು ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದು ಅವರ ಗೆಲುವು ನಿಶ್ಚಿತ," ಎಂದು ಭವಿಷ್ಯ ನುಡಿದರು.

Zameer Ahmed Khan's victory in Chamarajpet is fixed: Puttanna

ಜಮೀರ್ ಸಹಭಾಗಿತ್ವಕ್ಕೆ ಚಿರರುಣಿ - ಯಶ್

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್ ಮಾತನಾಡಿ, ತಾಯಿ ಅಣ್ಣಮ್ಮದೇವಿಯ ಕೃಪೆ ನನ್ನ ಮೇಲಿದೆ. ಮನೆ ಬಿಟ್ಟು ಬಂದಾಗ ತಾಯಿಯ ಆಶೀರ್ವಾದದಿಂದ ಚಲನ ಚಿತ್ರರಂಗದಲ್ಲಿ ಇಷ್ಟರಮಟ್ಟಿಗೆ ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಜಮೀರ್ ಅಹ್ಮದ್ ಖಾನ್ ಅವರು ಮೊದಲಿನಿಂದಲೂ ನನಗೆ ಹಲವಾರು ಸಂಧರ್ಭಗಳಲ್ಲಿ ಜತೆಯಾಗಿದ್ದಾರೆ. ಅವರ ಸಹಭಾಗಿತ್ವಕ್ಕೆ ನಾನು ಚಿರಋಣಿ ಎಂದರು.

Zameer Ahmed Khan's victory in Chamarajpet is fixed: Puttanna

ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಕಳೆದ 40 ವರ್ಷಗಳಿಂದ ಅಣ್ಣಮ್ಮದೇವಿಯ ಕಾರ್ಯಕ್ರಮವನ್ನು ಚಾಮರಾಜಪೇಟೆಯಲ್ಲಿ ಆಯೋಜಿಸುತ್ತಿದ್ದೇವೆ. ಸಮಾಜ ಸೇವಕರಾದ ಸಿ ಗೋವಿಂದರಾಜ್ ಅವರ ನೇತೃತ್ವದಲ್ಲಿ ಕ್ಷೇತ್ರದ ಬಡ ಜನರಿಗೆ ತಕ್ಕಮಟ್ಟಿನ ಸಹಾಯವನ್ನೂ ಮಾಡುತ್ತಿದ್ದೇವೆ. ಮಹಿಳೆಯರಿಗೆ ದಿನೋಪಯೋಗಿ ವಸ್ತುಗಳೂ, ಸೀರೆಗಳು ಹಾಗೂ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವ ಮೂಲಕ ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ಅವರು ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಚಾಮರಾಜಪೇಟೆ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಸಿ. ಗೋವಿಂದ್‍ರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+