ಸಿದ್ದರಾಮಯ್ಯ ಮೇಲಿನ ಸ್ವಾಮಿನಿಷ್ಠೆಯ ಫಲ: ಜಮೀರ್ ಅಹ್ಮದ್ ಇಂದು ಪ್ರಮಾಣ ವಚನ
ಬೆಂಗಳೂರು, ಮೇ 20: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.
ಶುಕ್ರವಾರ ತಡರಾತ್ರಿ ಹೈಕಮಾಂಡ್ ಎಂಟು ಜನರ ಹೆಸರನ್ನು ಮಂತ್ರಿಗಿರಿಗೆ ಫೈನಲ್ ಮಾಡಿದೆ. ಈ ಸಂಬಂಧ ಎಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯೂ ಹರಿದಾಡುತ್ತಿದೆ. ಈ ಎಂಟು ಜನರ ಪೈಕಿ, ಸಿದ್ದರಾಮಯ್ಯನವರ ಪರಮಾಪ್ತ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡಾ ಒಬ್ಬರು.

ನೇರನೇರವಾಗಿ ಜಮೀರ್ ಅವರು ಸಿದ್ದರಾಮಯ್ಯನವರ ಜೊತೆ ಗುರುತಿಸಿಕೊಂಡವರು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಹಲವು ಬಾರಿ ಹೇಳಿ, ಕೆಪಿಸಿಸಿ ಅಧ್ಯಕ್ಷರಿಂದ ಮೌಕಿಕ ಎಚ್ಚರಿಕೆಯನ್ನು ಪಡೆದುಕೊಂಡಿದ್ದರು.
ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜಮೀರ್ ಮತ್ತೆಮತ್ತೆ ಸಿದ್ದು ಸಿಎಂ ಎನ್ನುವ ಮಾತನ್ನು ಹೇಳುತ್ತಿದ್ದರು. ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಬೇಕು ಎನ್ನುವ ಗೊಂದಲವಿದ್ದಾಗ, ತಾವು ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ದರಾಗಿದ್ದರು.
ನೀವು ಬಂದು ನಾಮಿನೇಶನ್ ಫೈಲ್ ಮಾಡಿ ಹೋಗಿ, ನಿಮ್ಮನ್ನು ಐವತ್ತು ಸಾವಿರ ಲೀಡ್ ನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಜಮೀರ್ ಹೇಳಿದ್ದರು.
ಈಗ ಅವರ ಸ್ವಾಮಿನಿಷ್ಠೆಗೆ ಫಲ ಸಿಕ್ಕಿದೆ. ಇಂದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೊತೆಗೆ ಜಮೀರ್ ಅಹ್ಮದ್ ಖಾನ್ ಕೂಡಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.












Click it and Unblock the Notifications