Good news ಈ ಭಾಗದ ಶಿಥಿಲ ಮನೆಯವರಿಗೆ ಗುಡ್‌ನ್ಯೂಸ್ ಕೊಟ್ಟ ಜಮೀರ್
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಬೆಂಗಳೂರಿನ ಈ ಭಾಗದಲ್ಲಿ ಶಿಥಿಲ ಮನೆಗಳಲ್ಲಿ ವಾಸವಾಗಿರುವ ಬಡಜನರಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದ್ದಾರೆ. ಬೆಂಗಳೂರಿನ ಸಿವಿ ರಾಮನ್ ನಗರದ ಸಂಜಯ ನಗರ ಕೊಳಗೇರಿ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ಅವರು ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪ್ರದೇಶಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿ ಇರುವ ಮನೆಗಳ ಬಗ್ಗೆ ಜನರ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಬೆಂಗಳೂರಿನ ಸಿ.ವಿ ರಾಮನ್ ನಗರದ ಸಂಜಯ ನಗರ ಕೊಳಗೇರಿ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಗೊಂಡು ಹಲವು ಮನೆಗಳಿಗೆ ಹಾನಿಯಾಗಿತ್ತು. ಈ ಭಾಗದಲ್ಲಿ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮನೆ ಕಳೆದುಕೊಂಡವರು ಹಾಗೂ ಗಾಯಗೊಂಡವರಿಗೆ ಸಾಂತ್ವನ ಹೇಳಿದರು.

ಸಿಲಿಂಡರ್ ಸ್ಫೋಟ 6 ಮನೆಗಳಿಗೆ ಹಾನಿ
ಸಿಲಿಂಡರ್ ಸ್ಫೋಟದಿಂದ ಬೆಂಗಳೂರಿನ ಸಿ.ವಿ ರಾಮನ್ ನಗರದ ಸಂಜಯ ನಗರ ಕೊಳಗೇರಿ ಪ್ರದೇಶದಲ್ಲಿ ಒಟ್ಟು ಆರು ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಶಿಥಿಲಗೊಂಡಿರುವ 6 ಮನೆ ಒಳಗೊಂಡ ಇಡೀ ಬ್ಲಾಕ್‌ನ 12 ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜಮೀರ್ ಅಹ್ಮದ್ ಖಾನ್ ಅವರ ವಿವೇಚನಾ ನಿಧಿಯಿಂದ ಹೊಸದಾಗಿ ಕಟ್ಟಿಕೊಡುವುದಾಗಿಯೂ ಜಮೀರ್ ಅವರು ಇದೇ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಿದರು.
130 ಮನೆಗಳ ಅಭಿವೃದ್ಧಿಗೆ ಕ್ರಮ
ಇನ್ನು ಬೆಂಗಳೂರಿನ ಸಿ.ವಿ ರಾಮನ್ ನಗರದ ಸಂಜಯ ನಗರ ಕೊಳಗೇರಿ ಭಾಗದಲ್ಲಿ 1994ರಲ್ಲಿ ಹುಡ್ಕೋ ಅನುದಾನದಡಿ ಇಲ್ಲಿ ನಿರ್ಮಿಸಿ ರುವ 130 ಮನೆಗಳು ಶಿಥಿಲ ಗೊಂಡಿರುವ ಬಗ್ಗೆ ಸ್ಥಳೀಯರು ಜಮೀರ್ ಅವರ ಗಮನಕ್ಕೆ ತಂದರು. ಶಿಥಿಲಾ ವಸ್ಥೆಯಲ್ಲಿ ಇರುವ ಮನೆಗಳಲ್ಲಿ ವಾಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಮನೆಗಳು ಯಾವುದೇ ಕ್ಷಣದಲ್ಲಾದರೂ ಬೀಳುವ ಸ್ಥಿತಿಯಲ್ಲಿ ಇದೆ. ಭಯದಲ್ಲೇ ನಾವು ವಾಸಿಸುತ್ತಿದ್ದೇವೆ. ಹೇಗಾದರೂ ನೀವೇ ಸಹಾಯ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ಇದಕ್ಕೆ ಜಮೀರ್ ಅವರು ಸ್ಪಂದಿಸಿದರು. ಈ ಸಮಸ್ಯೆಯ ಬಗ್ಗೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ದುರಂತದಲ್ಲಿ ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು. ಅಡುಗೆ ಅನಿಲ ಸಿಲಿಂಡರ್ ಸ್ಫೋಟದಿಂದ ಗಾಯಾಗೊಂಡಿರುವವರನ್ನು ಭೇಟಿ ಮಾಡಿ ಉಚಿತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಅಣ್ಣಾ ದೊರೆ ಎನ್ನುವವರಿಗೆ 50,000 ಸಾವಿರ ರೂ. ಪರಿಹಾರ ನೀಡಿದರು. ಅಲ್ಲದೇ ಘಟನೆಯಲ್ಲಿ ಎರಡು ದ್ವಿಚಕ್ರ ವಾಹನ ಜಖಂಗೊಂಡಿದ್ದು, ರಿಪೇರಿ ಮಾಡಿಸಿಕೊಳ್ಳಲು ತಲಾ 25,000 ಸಾವಿರ ನೀಡಿದರು.












Click it and Unblock the Notifications