Get Updates
Get notified of breaking news, exclusive insights, and must-see stories!

ರಾಹುಲ್‌ಗಾಂಧಿ ಕರ್ನಾಟಕ ಭೇಟಿ: ಮುನಿಸಿಕೊಂಡು ದೂರವಾದ ಇಬ್ಬರು ಕಾಂಗ್ರೆಸ್ ನಾಯಕರು

ಬೆಂಗಳೂರು, ಏ.2: ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದ ರಾಹುಲ್‌ಗಾಂಧಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸೀಟು ಗೆಲ್ಲಬೇಕು ಎಂಬ ಗುರಿ ನೀಡಿದ್ದಾರೆ. ಮತ್ತೊಂದೆಡೆ ರಾಹುಲ್‌ ಕಾರ್ಯಕ್ರಮಕ್ಕೆ ಗೈರಾಗಿದ್ದ ಇಬ್ಬರು ಮುಖಂಡರು ಕಾಂಗ್ರೆಸ್‌ನೊಂದಿಗೆ ಮುನಿಸಿಕೊಂಡಂತೆ ಕಾಣಿಸುತ್ತಿದೆ.

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ವಿಚಾರಗಳಿಂದ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ಮಂಕಾದಂತೆ ಕಾಣುತ್ತಿತ್ತು. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಕರ್ನಾಟಕಕ್ಕೆ ಬಂದು ಎರಡು ದಿನಗಳ ಕಾಲ ಎಲ್ಲ ನಾಯಕರನ್ನೂ ಮತ್ತೆ ಹುರಿದುಂಬಿಸಿದ್ದಾರೆ.

ರಾಹುಲ್‌ಗಾಂಧಿ ಭೇಟಿಯ ವೇಳೆ ಬಹುತೇಕ ಎಲ್ಲ ನಾಯಕರೂ ಎಡಬಲದಲ್ಲಿಯೇ ಓಡಾಡುತ್ತಿದ್ದರು. ಆದರೆ, ಚಾಮರಾಜಪೇಟೆಯ ಶಾಸಕ ಮತ್ತು ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರ ನಾಯಕ ಎಂದು ಗುರುತಿಸಿಕೊಳ್ಳುತ್ತಿರುವ ಜಮೀರ್‌ ಅಹಮದ್ ಮಾತ್ರ ಕಾಣಲಿಲ್ಲ. ಕಾಂಗ್ರೆಸ್ ನಾಯಕರು ಜಮೀರ್‌ ಅವರನ್ನು ಸೈಡ್‌ಲೈನ್ ಮಾಡುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ರಾಹುಲ್‌ಗಾಂಧಿ ರಾಜ್ಯ ಭೇಟಿ ಸಂದರ್ಭದಲ್ಲಿ ಜಮೀರ್‌ ಹೈದರಾಬಾದ್‌ನ ಖಾಸಗಿ ಕಾರ್ಯಕ್ರಮಗಳಲ್ಲಿದ್ದರು.

Zameer Ahmed Khan and SR Patil step out from Congress?

ಕಾಂಗ್ರೆಸ್‌ನ ಪ್ರಮುಖ ಅಲ್ಪಸಂಖ್ಯಾತರ ನಾಯಕರಲ್ಲಿ ಜಮೀರ್ ಅಹಮದ್ ಇತ್ತೀಚೆಗೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲೂ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದ ನಂತರ ಜಮೀರ್ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿತ್ತು. ಇಂತಹ ಸಂದರ್ಭದಲ್ಲಿಯೇ ರಾಹುಲ್‌ಗಾಂಧಿ ಬಂದ ಸಂದರ್ಭದಲ್ಲಿ ಜಮೀರ್‌ ಅವರನ್ನು ಮೂಲೆಗುಂಪು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇತ್ತೀಚೆಗೆ ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲಿ ಜಮೀರ್ ಅಂತರ ಕಾಯ್ದುಕೊಳ್ಳುತ್ತಿರುವುದು ಇದು ಮೊದಲೂ ಅಲ್ಲ. ಪೆಟ್ರೋಲ್, ಗ್ಯಾಸ್ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲೂ ಜಮೀರ್ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ. ಪಾಟೀಲ್ ಅಧಿಕಾರ ಸ್ವೀಕಾರ ಸಮಾರಂಭದಲ್ಲೂ ಮುಂದೆ ಬಂದು ಓಡಾಡಲಿಲ್ಲ.

Zameer Ahmed Khan and SR Patil step out from Congress?

ಜಮೀರ್‌ ಅಹಮದ್‌ ಕಾಂಗ್ರೆಸ್‌ನಲ್ಲಿದ್ದಾರೆ ಎಂಬುದಕ್ಕಿಂತ ಸಿದ್ದರಾಮಯ್ಯ ಅವರ ಜೊತೆಗೆ ಬಹಳ ಆಪ್ತವಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಸಿದ್ದರಾಮಯ್ಯ ಕರ್ನಾಟಕ ಅಥವಾ ಹೊರರಾಜ್ಯ ಎಲ್ಲಿಗೇ ಹೋದರೂ ಪಕ್ಕದಲ್ಲಿ ಜಮೀರ್ ಇರುತ್ತಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರನ್ನು ಚಾಮರಾಜಪೇಟೆಯಿಂದಲೇ ಸ್ಪರ್ಧಿಸುವಂತೆ ಆಹ್ವಾನವನ್ನೂ ನೀಡಿದ್ದರು. ಇಂತಹ ಜಮೀರ್ ಕಾಂಗ್ರೆಸ್‌ ಪಕ್ಷದಿಂದ ದೂರವಾಗುತ್ತಿರುವುದು ಏಕೆ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಜಮೀರ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಮ್ಮ ಆಪ್ತರ ಜೊತೆ ಸಭೆಯನ್ನೂ ನಡೆಸಿದ್ದಾರೆ. ಇದೇ ರೀತಿಯಾದಂತಹ ಪ್ರಸಂಗಗಳು ಮುಂದುವರಿದರೆ ಜಮೀರ್ ಕಾಂಗ್ರೆಸ್ ತೊರೆಯುವ ಬಗ್ಗೆಯೂ ಆಲೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Zameer Ahmed Khan and SR Patil step out from Congress?

ಎಸ್‌.ಆರ್‌.ಪಾಟೀಲ್ ಕಾಂಗ್ರೆಸ್‌ನಿಂದ ದೂರ?:

ಈ ಮಧ್ಯೆ ವಿಧಾನ ಪರಿಷತ್ ಮಾಜಿ ಸಭಾನಾಯಕ ಎಸ್‌.ಆರ್‌. ಪಾಟೀಲ್ ಸಹ ಬಹಳ ದಿನಗಳಿಂದ ಕಾಂಗ್ರೆಸ್‌ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ. ಪಾಟೀಲರ ಇತ್ತೀಚಿನ ಬೆಳವಣಿಗಳು ಅವರು ಪಕ್ಷ ತೊರೆಯಲಿದ್ದಾರೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿವೆ.

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹಿಡಿತ ಹೊಂದಿದ್ದ ಎಸ್‌.ಆರ್. ಪಾಟೀಲ್ ಅವರಿಗೆ ಇತ್ತೀಚೆಗೆ ವಿಧಾನ ಪರಿಷತ್ ಟಿಕೆಟ್ ತಪ್ಪಿಸಲಾಗಿತ್ತು. ಅಲ್ಲದೆ, ಎಸ್‌.ಆರ್. ಪಾಟೀಲ್ ಅವರನ್ನು ಕೈಬಿಡುವುದಿಲ್ಲ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಿಂದೆ ಭರವಸೆ ನೀಡಿದ್ದರೂ ಸಹ, ಚುನಾವಣೆ ಕಳೆದು ಆರು ತಿಂಗಳಾದರೂ ಪಾಟೀಲ್ ಅವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಎಸ್‌.ಆರ್. ಪಾಟೀಲ್ ಅವರನ್ನು ನೇಮಕ ಮಾಡಬೇಕು ಎಂಬ ಪ್ರಯತ್ನವೂ ಕೈಗೂಡಲಿಲ್ಲ. ಇದರಿಂದ ಪಾಟೀಲ್ ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾರಜೋಳ ಜೊತೆ ಚರ್ಚೆ?

ಈ ಮಧ್ಯೆ ಎಸ್‌.ಆರ್. ಪಾಟೀಲ್ ಅವರ ಬಿಜೆಪಿ ಸರ್ಕಾರದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಜತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತದೆ. ಎಸ್‌.ಆರ್. ಪಾಟೀಲ್ ಬಿಜೆಪಿಯತ್ತ ಮುಖಮಾಡಲಿದ್ದಾರೆಯೆ ಎಂಬ ಚರ್ಚೆಗಳೂ ಆರಂಭಗೊಂಡಿವೆ.

Recommended Video

      ಯುಗಾದಿ ಹಬ್ಬಕ್ಕೆ ವಿಶ್ ಮಾಡಿದ ಅಪ್ಪು ನೋಡಿ ಕಣ್ಣೀರಿಟ್ಟ ಅಭಿಮಾನಿಗಳು,ವಿಡಿಯೋ ವೈರಲ್ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+