ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸತಿಶಾಲೆ ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ನಮ್ಮದೊಂದು ಸಲಾಂ!

By Vanitha
|
Google Oneindia Kannada News

ಶಿಡ್ಲಘಟ್ಟ, ನವೆಂಬರ್, 09: ಯುವಶಕ್ತಿ ತಂಡವು ಬಯಲು ಸೀಮೆ ವಸತಿ ಶಾಲೆಗಳ ಆವರಣದಲ್ಲಿ ನೆಡಲಾದ ಸಸಿಗಳ ಬೆಳವಣಿಗೆ ಪರಿಶೀಲಿಸಲು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿದ್ದು, ಗಿಡಗಳ ಬಗ್ಗೆ ಇರುವ ಕಾಳಜಿ ವ್ಯಕ್ತಪಡಿಸಿದರು.

ಕೆಲವು ತಿಂಗಳ ಹಿಂದೆ ಕೋಟಗಲ್ ನ ಕಿತ್ತೂರು ಚೆನ್ನಮ್ಮ ಮಹಿಳಾ ವಸತಿ ಶಾಲೆ, ಗಡಿಗವಾರಹಳ್ಳಿ ಹಾಗೂ ತಿಮ್ಮನಾಯಕ ಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಯುವಶಕ್ತಿಯು ವಿವಿಧ ಗಿಡಗಳನ್ನು ನೀಡಿ ಅವುಗಳ ಆರೈಕೆ ಮಾಡುವಂತೆ ಮಕ್ಕಳಿಗೆ ಸಲಹೆ ನೀಡಿದ್ದರು.[ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ]

Yuvashakti members visited North Karnataka residential schools on Monday

ಈ ಬಾರಿ ನೆಟ್ಟಿರುವ ಎಲ್ಲಾ ಸಸಿಗಳು ಉತ್ತಮ ಬೆಳವಣಿಗೆ ಕಂಡಿವೆ. ಸಸಿಗಳ ಗುಣಿಗಳಲ್ಲಿ ಕಳೆ ತೆಗೆದು, ಪಾತಿಗಳನ್ನು ಮಾಡಿಸಲು, ನೀರುಣಿಸಲು ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯರು, ಶಾಲಾ ಸಿಬ್ಬಂದಿ ಹಾಗು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಇವರಲ್ಲಿರುವ ಪರಿಸರ ಕಾಳಜಿ ಕಂಡು ಸಂತಸವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಗಿಡಗಳನ್ನು ನೆಡುವ ಸಲುವಾಗಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಬಿ.ಜೆ. ಹೊಸಮಟ್, ಗಡಿಗವಾರಹಳ್ಳಿ ವಸತಿ ಶಾಲೆ ಪಕ್ಕದಲ್ಲಿರುವ ಸುಮಾರು 1000 ಎಕರೆ ಸರ್ಕಾರಿ ಸ್ಥಳದಲ್ಲಿ ಸಾವಿರಾರು ಗಿಡ ನೆಡುವ ನಮ್ಮ ಯೋಜನೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಯುವಶಕ್ತಿ ತಂಡದ ಸದಸ್ಯರು ತಿಳಿಸಿದರು.

English summary
Yuvashakti members and Forest officers has visited Kootagal Kitturu Raani Chennamma residential school, Gadigavaarahalli and Timmanayaka halli Morarji Desayi residential school. They are appreciated by school children, teachers environment concern.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X