ಪತಿಯಿಂದ ಹಿಂಸೆ, ಮಗಳೊಂದಿಗೆ ತಾಯಿ ಆತ್ಮಹತ್ಯೆ

ಉಡುಪಿ, ಜೂ. 30 : ಗಂಡನ ಹಿಂಸೆ ತಾಳಲಾರದೆ ಮಹಿಳೆಯೊಬ್ಬರು ತನ್ನ ಮಗುವಿನೊಡನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಸಮೀಪದ ತಗ್ಗರ್ಸೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಪತಿ ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಕಿರುಕುಳವೇ ಕಾರಣ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ಶರಣಾದವರನ್ನು ತಗ್ಗರ್ಸೆ ಗ್ರಾಮದ ನಿವಾಸಿ ನಾಗರತ್ನ (26) ಹಾಗೂ ತ್ರಿಷಾ (3) ಎಂದು ಗುರುತಿಸಲಾಗಿದೆ. ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ನಾಗರತ್ನ ಅವರು ಬಾವಿಗೆ ಹಾರಿದ್ದು, ಇಬ್ಬರ ಮೃತದೇಹಗಳು ಒಟ್ಟಿಗೆ ಪತ್ತೆಯಾಗಿವೆ. ಬೈಂದೂರು ಠಾಣೆಯಲ್ಲಿ ನಾಗರತ್ನ ಪತಿ ಮಹೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

Udupi

ಘಟನೆ ವಿವರ : ತಗ್ಗರ್ಸೆ ಗ್ರಾಮದ ನಾಗರತ್ನ ಅವರ ವಿವಾಹ ಐದು ವರ್ಷಗಳ ಹಿಂದೆ ನಾವುಂದ ಗ್ರಾಮದ ಹೊಸಹಕ್ಲು ನಿವಾಸಿ ಮಹೇಶ ದೇವಾಡಿಗ ಅವರೊಂದಿಗೆ ನಡೆದಿತ್ತು. ಮಹೇಶ್ ಮದುವೆ ನಂತರ ಮಾವನ ಮನೆಯಲ್ಲಿಯೇ ನೆಲೆಸಿದ್ದರು.

ನಾಗರತ್ನ ಮತ್ತು ಮಹೇಶ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಈ ಬಗ್ಗೆ ಮನೆಯವರಿಗೆ ತಿಳಿದು ಇಬ್ಬರಿಗೂ ಬುದ್ಧಿವಾದ ಹೇಳಿ ಸರಿಪಡಿಸಿದ್ದರು. ಕೆಲವು ದಿನಗಳ ಹಿಂದೆ ಗಂಡ-ಹೆಂಡಂತಿ ಇಬ್ಬರು ಸೇರಿ ಮಗುವಿನ ಹುಟ್ಟು ಹಬ್ಬವನ್ನು ಮಾಡಿದ್ದರು.

ಆದರೆ, ಶನಿವಾರ ರಾತ್ರಿ ಇಬ್ಬರ ನಡುವೆ ಪುನಃ ಜಗಳ ಆರಂಭವಾಗಿದೆ. ಮಹೇಶ್ ದೇವಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಹೋಗಿದ್ದಾನೆ. ಆ ಸಮಯದಲ್ಲಿ ನಾಗರತ್ನ ಅವರು, ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಗರತ್ನ ಆತ್ಮಹತ್ಯೆಗೆ ಪತಿ ಮಹೇಶ್ ಕಾರಣ ಎಂದು ನಾಗರತ್ನ ಸಂಬಂಧಿಕರು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹೇಶ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+