ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಕೆಎಸ್ ಐಯ್ಯಂಗಾರ್ ಗೆ ಶಾಂತಿ ನೊಬೆಲ್ ಯೋಗ?

By Super
|
Google Oneindia Kannada News

ಬೆಂಗಳೂರು, ಜ.10: ಇನ್ನೂ ಮೊನ್ನೆಮೊನ್ನೆಯಷ್ಟೇ ನೊಬೆಲ್ ಪ್ರಶಸ್ತಿಗಳು ಪ್ರಕಟವಾಗಿವೆ. ಮತ್ತೆ ಇದೇನಿದು ನೊಬೆಲ್ ಪ್ರಶಸ್ತಿ ಕಲರವ ಎಂದು ಕೇಳಬೇಡಿ. ಏಕೆಂದರೆ ಇದು ಮುಂದಿನ ಸಾಲಿನ (2014ನೇ) ಶಾಂತಿ ನೊಬೆಲ್ ವಿಷ್ಯ. Nobel Committee 2014ನೇ ಸಾಲಿನ ನೊಬೆಲ್ ಪ್ರಶಸ್ತಿಗಾಗಿ ನಾಮನಿರ್ದೇಶನಗಳನ್ನು ಮುಂದಿನ ಫೆಬ್ರವರಿ 1ಕ್ಕೆ ಅಂತಿಮಗೊಳಿಸಲಿದೆ.

ಬಿಕೆಎಸ್ ಐಯ್ಯಂಗಾರ್ ಅವರಿಗೆ ಶಾಂತಿ ನೊಬೆಲ್ ಯೋಗ?
ಕಳೆದ ವರ್ಷ ನೊಬೆಲ್ ಶಾಂತಿ ಪ್ರಶಸ್ತಿಗಾಗಿ 259 ಮಂದಿಯನ್ನು ಹೆಸರಿಸಲಾಗಿತ್ತು. ಪಾಕಿಸ್ತಾನದ ಮಲಾಲಾ ರಷ್ಯಟಾದ ಪುಟೀನ್, ಜೂಲಿಯಾ ಅಸಾಂಜ್, ಎಡ್ವರ್ಡ್ ಸ್ನೋಡೆನ್ ಅವರುಗಳ ಹೆಸರೂ ಈ ಬಾರಿ ನಾಮನಿರ್ದೇಶನ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಹುದು.

yoga-guru-bks-iyengar-deserves-nobel-peace-prize

ಈ ಸಂದರ್ಭದಲ್ಲಿ, ಶಾಂತಿ ಮಂತ್ರ ಪಠಿಸುವುದನ್ನು ಕರಗತ ಮಾಡಿಕೊಂಡಿರುವ ಭಾರತದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಬಹುದಾದ ವ್ಯಕ್ತಿಗಳು ಯಾರಾದರೂ ಇದ್ದಾರಾ ಎಂದು ನೋಡಿದರೆ ... ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಮೂರ್ತಸ್ವರೂಪ ಕಾಣಿಸಿಕೊಳ್ಳುತ್ತದೆ. ಆದರೆ 'ನೊಬೆಲ್ ಶಾಂತಿ ಪಡೆಯಲು ಗಾಂಧೀಜಿ ಅವರು ಅತ್ಯಂತ ಅರ್ಹ ವ್ಯಕ್ತಿ' ಎಂದು ಇಡೀ ಜಗತ್ತಿನಿಂದ ಮನ್ನಣೆ ಗಳಿಸಿದ್ದಾಗ್ಯೂ ಅವರಿಗೆ 'ಕಾರಣಾಂತರಿಗಳಿಂದಾಗಿ' ಇದುವರೆಗೂ ಆ ಪುರಸ್ಕಾರ ದಕ್ಕಿಲ್ಲ ಎಂಬುದು ಖೇದಕರ.

ಇಲ್ಲಿ ಒಂದು ವಿಷಯ ಹೇಳಬೇಕಾಗುತ್ತದೆ. 1989ರಲ್ಲಿ ನೊಬೆಲ್ ಶಾಂತಿ ಪಡೆದ ದಲೈ ಲಾಮಾ ಅವರು 'ವಿಶ್ವ ಶಾಂತಿ ಎಂಬುದು ವ್ಯಕ್ತಿಗತವಾಗಿ ಆಂತರ್ಯದಿಂದ ಸೃಜಿಸುವುದು' ಎಂಬುದನ್ನು ಮನಗಾಣಬೇಕು ಎಂದಿದ್ದರು.

ಇದನ್ನೇ ಮುಂದುವರಿದು ಹೇಳುವುದಾದರೆ ಸರ್ವ ಶ್ರೇಷ್ಠ ಯೋಗಗುರು BKS Iyengar ಅವರ ಮಾತುಗಳನ್ನು ಇಲ್ಲಿ ದಾಖಲಾರ್ಹವೆನಿಸುತ್ತದೆ. ಆಂತರ್ಯದಲ್ಲಿನ ಶಾಂತಿ ಮತ್ತು ಅದರ ನಾನಾ ಆಯಾಮಗಳ ಬಗ್ಗೆ ಅವರು ಬಹಳಷ್ಟು ಹೇಳಿದ್ದಾರೆ- ಶಾಂತಿ ಎಂಬುದು ದೈಹಿಕ ವಿಜ್ಞಾನ, ಅದು ಸ್ವಯಂ-ಜಾಗೃತಿ ಅವಸ್ಥೆ, ಅದು ಬಲಾಢ್ಯ ಅಂತಃಶಕ್ತಿ. ಅವರು ಇದನ್ನು ಹೇಳಿದ್ದಷ್ಟೇ ಅಲ್ಲ. ಅದನ್ನು ಪಠಿಸಿಕೊಂಡು/ಪಾಲಿಸಿಕೊಂಡು ಬಂದಿದ್ದಾರೆ- ಇದಕ್ಕೆ ಅವರು ಬಳಸಿರುವ ಸಾಧನ ಯೋಗ!

Bellur Krishnamachar Sundararaja Iyengar ಅವರಿಗೀಗ 96 ವರ್ಷ ವಯಸ್ಸು. ಇಂದಿಗೂ ನವಚೈತನ್ಯದಿಂದ ಪುಟಿಯುತ್ತಾರೆ. ಮೈ ಮತ್ತು ಮನಸ್ಸಿನಲ್ಲಿ ಯೋಗ ನಿರಂತರವಾಗಿ ಹರಿಯುತ್ತಿದೆ. ಇಂದಿಗೂ ಗಂಟೆ ಕಾಲ ಶಿರ್ಷಾಸನ ಹಾಕಬಲ್ಲರು. ಅದು ಅವರು ಪಾಲಿಸಿಕೊಂಡು ಬಂದಿರುವ ಯೋಗದ ಮಹಿಮೆ, ತಾಕತ್ತು.

ಇತ್ತೀಚೆಗೆ ಚೀನಾದಲ್ಲಿ ಪ್ರಾರಂಭಗೊಂಡ ಯೋಗ ಶಾಲೆ ಸೇರಿದಂತೆ ವಿಶ್ವದಲ್ಲಿ 72 ರಾಷ್ಟ್ರಗಳಲ್ಲಿ BKS Iyengar yoga schools ಇವೆ. 'ಯೋಗದಿಂದ ಶಾಂತಿ' ಎಂಬುದು BKS Iyengar ಅವರನ್ನು ನೋಡಿದಾಗ ಮನದಟ್ಟಾಗುತ್ತದೆ. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಇಂದು ಯೋಗ ಎಂಬುದು ಪವಾಡ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಬಿಕೆಎಸ್ ಐಯ್ಯಂಗಾರ್ ಅವರಿಗೆ ಶಾಂತಿ ನೊಬೆಲ್ ಪ್ರಶಸ್ತಿ ಕೊಡಬಾರದೇಕೆ ಎಂಬ ಚರ್ಚೆ ನಡೆದಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

English summary
Yoga guru BKS Iyengar deserves Nobel Peace prize. The great Indian yoga master Bellur Krishnamachar Sundararaja Iyengar from Karnataka has taught humanity as much about inner peace and its many dimensions - peace as a physical science, peace as a state of self-awareness and power that leads to World Peace. As such he deserves Nobel Peace prize feel the author Chandrahas Choudhury.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X