Ettinhole Irrigation Project: ಈ ಮಾರ್ಗಗಲ್ಲಿ ಒಂದು ವಾರ ರೈಲು ಸಂಚಾರ ರದ್ದು-ಮಾಹಿತಿ, ವಿವರ ಇಲ್ಲಿದೆ
ಬೆಂಗಳೂರು, ಜೂನ್, 04: ಎತ್ತಿನಹೊಳೆ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಈ ರೈಲು ನಿಲ್ದಾಣಗಳ ನಡುವೆ ತಾತ್ಕಾಲಿ ಗರ್ಡರ್ ಅಳವಡಿಕೆ ಹಿನ್ನೆಲೆ ಹಲವು ಮಾರ್ಗಗಳಲ್ಲಿ ಸಂಚರಿಸುವ ರೈಲುಗಳನ್ನು ಒಂದು ವಾರ ರದ್ದು ಮಾಡಲಾಗುತ್ತಿದೆ ಮತ್ತು ಇನ್ನು ಕೆಲವು ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವೆಲ್ಲ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಾಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೊಡ್ಡಬೆಲೆ-ಮುದ್ದಲಿಂಗನಹಳ್ಳಿ ನಿಲ್ದಾಣಗಳ ನಡುವೆ ತಾತ್ಕಾಲಿಕ ಗರ್ಡರ್ ಅಳವಡಿಕೆ ಕಾಮಗಾರಿ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನು ಒಂದು ವಾರ ರದ್ದು ಮಾಡಲಾಗಿದ್ದು, ಕೆಲವು ರೈಲುಗಳು ಬೇರೆ ಮಾರ್ಗದಲ್ಲಿ ಓಡಲಿವೆ.

ಜೂನ್ 13ರವರೆಗೆ ಎಲ್ಲೆಲ್ಲಿ ರೈಲು ಸಂಚಾರ ರದ್ದು: ತುಮಕೂರು-ಚಾಮರಾಜನಗರ ಪ್ರಯಾಣಿಕರ ರೈಲು, ಚಾಮರಾಜನಗರ-ಮೈಸೂರು ಪ್ರಯಾಣಿಕರ ರೈಲು, ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್, ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲು, ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು, ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ರೈಲು ಸಂಚಾರವನ್ನು ಜೂನ್ 6ರಿಂದ 13ರವರೆಗೆ ರದ್ದು ಮಾಡಲಾಗಿದೆ.
ಜೂನ್ 6ರಿಂದ 13ರವರೆಗೆ ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ಮತ್ತು ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ರೈಲುಗಳು ಗೊಲ್ಲಹಳ್ಳಿ-ತುಮಕೂರು ಮಧ್ಯ ಭಾಗಶಃ ರದ್ದು ಮಾಡಲಾಗಿದೆ. ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು, ಧಾರವಾಡ-ಎಕ್ಸ್‌ಪ್ರೆಸ್ ರೈಲು, ಧಾರವಾಡ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಕೆಎಸ್‌ಆರ್ ಬೆಂಗಳೂರು-ಅರಸಿಕೆರೆ ನಡುವೆ ಭಾಗಶಃ ರದ್ದು ಮಾಡಲಾಗಿದೆ.
ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ-ತುಮಕೂರು ಸಂಚಾರ ಇರುವುದಿಲ್ಲ. ಶಿವಮೊಗ್ಗ ಪಟ್ಟಣ-ತುಮಕೂರು ಮೆಮು ರೈಲು ಗುಬ್ಬಿ-ತುಮಕೂರು ನಡುವೆ ರದ್ದುಗಳಿಸಲಾಗಿದೆ.
ರೈಲು ಸಂಚಾರ ವಿಳಂಬ: ಜೂನ್ 4 ಮತ್ತು 11ರಂದು ಸಂಚರಿಸುವ ಬಿಕಾನೇರ್-ಯಶವಂತಪುರ್ ಎಕ್ಸ್‌ಪ್ರೆಸ್ ರೈಲು 1 ಗಂಟೆ 55 ನಿಮಿಷ ತಡವಾಗಿ ಸಂಚಾರ ಮಾಡಲಿದೆ. ಜೂನ್ 6 ಮತ್ತು 13ರಂದು ಸಂಚರಿಸುವ ಯಶವಂತಪುರ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು 80 ನಿಮಿಷ ತಡ ಆಗಲಿದೆ. ಕೆಎಸ್‌ಆರ್ ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು 30 ನಿಮಿಷ, ಚಾಮರಾಜನಗರ-ತುಮಕೂರು ಪ್ರಯಾಣಿಕ ರೈಲು 2 ಗಂಟೆ ವಿಳಂಬವಾಗಲಿದೆ.
ಜೂನ್ 6 ಮತ್ತು 13ರಂದು ಸಂಚರಿಸುವ ಯಶವಂತಪುರ-ವಾಸ್ಕೋಡಗಾಮ ರಯಳು, ಜೂನ್ 12ರಂದು ಪ್ರಯಾಣಿಸುವ ತುಮಕೂರು-ಬಾಣಸವಾಡಿ ರೈಲುಗಳು 60 ನಿಮಿಷ ತಡವಾಗಿ ನಿರ್ಗಮಿಸಲಿದೆ.
ಈ ನಿಲ್ದಾಣಗಳಲ್ಲಿ ರೈಲು ನಿಲುಗಡೆ ರದ್ದು: ಜೂನ್ 4 ಮತ್ತು 11ರಂದು ಸಂಚಾರ ಮಾಡುವ ಅಜ್ಮೀರ್-ಮೈಸೂರು ವಿಶೇಷ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮೂಲಕ ಸಂಚರಿಸಲಿದ್ದು, ತುಮಕೂರು ನಿಲ್ದಾಣದ ನಿಲುಗಡೆ ರದ್ದುಪಡಿಸಲಾಗಿದೆ. ಇನ್ನು ಜೂನ್ 5 ಮತ್ತು 12ರಂದು ಸಂಚರಿಸುವ ವಾಸ್ಕೋ-ಡ-ಗಾಮಾ-ಯಶವಂತಪುರ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮೂಲಕ ಸಂಚರಿಸಲಿದ್ದು, ತಿಪಟೂರು ಮತ್ತು ತುಮಕೂರು ರೈಲು ನಿಲ್ದಾಣಗಳಲ್ಲಿ ನಿಲುಗಡೆ ರದ್ದು ಮಾಡಲಾಗಿದೆ.
ಜೂನ್ 6 ಮತ್ತು 13ರಂದು ಸಂಚರಿಸುವ ಮೈಸೂರು-ವಾರಾಣಾಸಿ ರೈಲು, ಯಶವಂತಪುರ-ಜೈಪುರ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮೂಲಕ ಸಂಚರಿಸಲಿದ್ದು, ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಈ ಮಾರ್ಗಗಳಲ್ಲಿ ರೈಲು ಸಂಚಾರ: ಮೈಸೂರು-ಉದಯಪುರ ನಗರ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ನೆಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಸಂಚರಿಸಲಿದೆ.
ಮೈಸೂರು-ಬೆಳಗಾವಿ ರೈಲು ಯಶವಂತ, ನೆಲಮಂಗಲ, ಹಾಸನ, ಅರಸೀಕೆರೆ ಮೂಲಕ ಸಂಚರಿಸಲಿದ್ದು, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಮಾಹಿತಿ ನೀಡಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು?












Click it and Unblock the Notifications