ಹಿಂದಿ ಹೇರಿಕೆ ವಿರುದ್ಧ ಮೌನ ಮುರಿದ ಯಡಿಯೂರಪ್ಪ
Recommended Video
ಬೆಂಗಳೂರು, ಸೆಪ್ಟೆಂಬರ್ 16: 'ಒಂದು ದೇಶ, ಒಂದು ಭಾಷೆ' ಎನ್ನುವ ಮೂಲಕ ದಕ್ಷಿಣ ಭಾರತ ರಾಜ್ಯಗಳಲ್ಲಿ ಅಮಿತ್ ಶಾ ಭಾಷೆ ಹೋರಾಟದ ಕಿಚ್ಚು ಹುಟ್ಟುವಂತೆ ಮಾಡಿದ್ದಾರೆ. ತಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರ ಹೇಳಿಕೆಯಿಂದ ಇಕ್ಕಟ್ಟಿಗೆ ಸಿಲುಕಿದ್ದ ರಾಜ್ಯ ಬಿಜೆಪಿ ಇಂದು ತನ್ನ ನಿಲವು ಸ್ಪಷ್ಟಪಡಿಸಿದೆ.
ಸಿಎಂ ಯಡಿಯೂರಪ್ಪ ಅವರು, ಹಿಂದಿ ಹೇರಿಕೆಯ ಬಗ್ಗೆ ತೋರಿದ್ದ ಮೌನವನ್ನು ಕೊನೆಗೂ ಮುರಿದಿದ್ದು, ತಮಗೆ 'ಕನ್ನಡವೇ ಮುಖ್ಯ' ಎಂದು ಹೇಳುವ ಮೂಲಕ ಹಿಂದಿ ಹೇರಿಕೆಯ ಪ್ರಯತ್ನದ ವಿರುದ್ಧ ನಿಂತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ, 'ದೇಶದ ಎಲ್ಲ ಅಧಿಕೃತ ಭಾಷೆಗಳೂ ಸಮಾನವೇ, ಕರ್ನಾಟಕಕ್ಕೆ ಕನ್ನಡವೇ ಪ್ರಧಾನ ಭಾಷೆ' ಎಂದಿರುವ ಅವರು, 'ಇದರ ಬಗ್ಗೆ ಯಾವುದೇ ರಾಜಿ ಇಲ್ಲ' ಎಂದು ಹೇಳಿದ್ದಾರೆ.

'ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ' ಎಂದು ಯಡಿಯೂರಪ್ಪ ಹೇಳಿದ್ದಾರೆ.
ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ.#Kannada
— CM of Karnataka (@CMofKarnataka) September 16, 2019
ಸೆಪ್ಟೆಂಬರ್ 05 ರಂದು ಹಿಂದಿ ದಿವಸ ಆಚರಣೆ ಮತ್ತು ಅಂದು ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 'ಒಂದು ದೇಶ, ಒಂದು ಭಾಷೆ' ಸೂತ್ರದ ಬಗ್ಗೆ ಮಾತನಾಡಿರುವುದು ದಕ್ಷಿಣದ ರಾಜ್ಯಗಳಲ್ಲಿ ಭಾರಿ ಪ್ರತಿರೋಧ ಎಬ್ಬಿಸಿದೆ.












Click it and Unblock the Notifications