Breaking; ದಲಿತರ ಮನೆಯಲ್ಲಿ ಸಿಎಂಗೆ ಯಡಿಯೂರಪ್ಪ ಕೊಟ್ಟ ಸೂಚನೆ ಏನು?
ಬೆಂಗಳೂರು, ಅಕ್ಟೋಬರ್ 12; ಬಿಜೆಪಿಯ ಜನಸಂಕಲ್ಪ ಯಾತ್ರೆ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ದಲಿತ ಸಮುದಾಯದ ಹನುಮಂತವ್ವ ಅವರ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿದರು.
ಗುರುವಾರ ಹನುಮಂತವ್ವ ನಿವಾಸಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ನೀಡಿ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್, ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು.
ಹನುಮಂತವ್ವ ಮನೆಯಲ್ಲಿ ಉಪ್ಪಿಟ್ಟು ಸೇವಿಸುತ್ತಾ ಬಿ. ಎಸ್. ಯಡಿಯೂರಪ್ಪ ಕುಟುಂಬದವರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮನೆಯ ಮನೆ ದುರಸ್ತಿ ಆಗಬೇಕಿರುವುದು ತಿಳಿಯಿತು.

ಉಪಹಾರ ಮುಗಿಯುತ್ತಿದ್ದಂತೆ ಯಡಿಯೂರಪ್ಪ ಮನೆಯ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸೂಚನೆ ನೀಡಿದರು. ಯಡಿಯೂರಪ್ಪ ಸೂಚನೆಗೆ ಸಿಎಂ ಸರಿ ಎಂದು ಹೇಳಿದರು.
ಮನೆಯ ಮೇಲ್ಛಾವಣಿ ದುರಸ್ತಿಯಾಗಬೇಕಿದೆ ಅದನ್ನು ದುರಸ್ತಿಗೆ ಅನುದಾನ ಕೊಡಿ, ಬೇರೆ ಮನೆ ನಿರ್ಮಾಣ ಮಾಡುವುದಾದರೂ ಅನುದಾನ ನೀಡಬೇಕು ಎಂದು ಜೊತೆಯಲ್ಲಿದ್ದ ಸಚಿವರಿಗೂ ಯಡಿಯೂರಪ್ಪ ಸೂಚಿಸಿದರು.

ಬಿಜೆಪಿಯ ಜನಸಂಕಲ್ಪ ಯಾತ್ರೆ ಅಂಗವಾಗಿ ಪಕ್ಷದ ನಾಯಕರು ದಲಿತರ ಮನೆಗಳಿಗೆ ತೆರಳಿ ಉಪಹಾರ ಸೇವಿಸುತ್ತಿದ್ದಾರೆ. ಬುಧವಾರ ವಿಜಯಪುರದ ದಲಿತ ಕುಟುಂಬದ ಮನೆಯಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮಂಡಕ್ಕಿ ಒಗ್ಗರಣೆ, ಮೆಣಸಿನಕಾಯಿ ಬಜ್ಜಿ ಸವಿದಿದ್ದರು.
ಮಂಗಳವಾರದಿಂದ ಒಟ್ಟು ಎರಡು ತಂಡದಲ್ಲಿ ಬಿಜೆಪಿ ನಾಯಕರು ಜನಸಂಕಲ್ಪ ಯಾತ್ರೆ ಹೆಸರಿನಲ್ಲಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ವಾರದಲ್ಲಿ ಮೂರು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ.












Click it and Unblock the Notifications