ಶೇಷಾದ್ರಿಪುರಂನಲ್ಲಿ ಪುತ್ರನ ಜೊತೆ ದೋಸೆ ಸವಿದ ಯಡಿಯೂರಪ್ಪ
ಬೆಂಗಳೂರು, ಮಾರ್ಚ್ 15 : ಲೋಕಸಭಾ ಚುನಾವಣೆ ಸಿದ್ಧತಾ ಕಾರ್ಯಗಳಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬ್ಯುಸಿಯಾಗಿದ್ದಾರೆ. ಕೆಲಸದ ನಡುವೆಯೇ ಬಿಡುವು ಮಾಡಿಕೊಂಡು ಅವರು ಶೇಷಾದ್ರಿಪುರಂನಲ್ಲಿ ದೋಸೆ ಸವಿದರು.
ಶುಕ್ರವಾರ ಸಂಜೆ ಬಿ.ಎಸ್.ಯಡಿಯೂರಪ್ಪ ಅವರು ಶೇಷಾದ್ರಿಪುರಂನ ಸನ್ಮಾನ್ ಹೋಟೆಲ್‌ಗೆ ಭೇಟಿ ನೀಡಿದದರು. ಬಿ.ವೈ.ವಿಜಯೇಂದ್ರ ಅವರ ಜೊತೆ ಮಾತುಕತೆ ನಡೆಸುತ್ತಲೇ ದೋಸೆ ಸವಿದರು. ಕೆಲವು ಬೆಂಬಲಿಗರು ಈ ಸಮಯದಲ್ಲಿ ಜೊತೆಯಲ್ಲಿದ್ದರು.

ಇಂದು ಬೆಂಗಳೂರಿನಲ್ಲಿಯೇ ಇದ್ದ ಯಡಿಯೂರಪ್ಪ ಅವರು ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಬೆಳಗ್ಗೆಯಿಂದ ಹಲವು ಸಭೆಗಳನ್ನು ನಡೆಸಿದರು. ವಿ.ಶ್ರೀನಿವಾಸ ಪ್ರಸಾದ್, ಎ.ಮಂಜು ಸೇರಿದಂತೆ ವಿವಿಧ ನಾಯಕರ ಜೊತೆ ಸಭೆಗಳನ್ನು ಮಾಡಿದರು.
ಸಂಜೆ ಬಿಡುವು ಮಾಡಿಕೊಂಡು ಬಿ.ವೈ.ವಿಜಯೇಂದ್ರ ಅವರ ಜೊತೆ ಸನ್ಮಾನ್ ಹೋಟೆಲ್‌ಗೆ ಭೇಟಿ ಕೊಟ್ಟು ಈರುಳ್ಳಿ ದೋಸೆಯನ್ನು ಸವಿದರು. ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯು ಸಿದ್ಧಗೊಂಡಿದ್ದು, ಮಾ.18ರಂದು ಬಿಡುಗಡೆಯಾಗಲಿದೆ.

ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಯಡಿಯೂರಪ್ಪ ದೋಸೆ ತಿನ್ನುತ್ತಿರುವ ಚಿತ್ರವನ್ನು ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ.
ಬಿ.ಜೆ.ಪಿ ರಾಜ್ಯಾಧ್ಯಕ್ಷರಾದ ಶ್ರೀ @BSYBJP ರವರು ಚುನಾವಣಾ ಕೆಲಸದ ಒತ್ತಡಗಳ ನಡುವೆ ಬಿಡುವು ಮಾಡಿಕೊಂಡು, ಶೇಷಾದ್ರಿಪುರಂನ "ಸನ್ಮಾನ್ ಹೋಟಲ್" ನಲ್ಲಿ ದೋಸೆ ಸವಿದರು. pic.twitter.com/N3DHEIJIKp
— Vijayendra Yeddyurappa (@BYVijayendra) March 15, 2019












Click it and Unblock the Notifications