ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ 2019 : ಯಡಿಯೂರಪ್ಪ ಹೇಳಿದ್ದೇನು?

|
Google Oneindia Kannada News

Recommended Video

Karnataka Budget 2019 : ಎಚ್ ಡಿ ಕುಮಾರಸ್ವಾಮಿ ಬಜೆಟ್ ಬಗ್ಗೆ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ|Oneindia Kannada

ಬೆಂಗಳೂರು, ಫೆಬ್ರವರಿ 08 : 'ಜನರು ಈ ಬಜೆಟ್‌ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ' ಎಂದು ಪ್ರತಿ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬಿಜೆಪಿ ಶಾಸಕರು ಬಜೆಟ್ ಪ್ರತಿ ನೀಡಲಿಲ್ಲ ಎಂಬ ಕಾರಣಕ್ಕೆ ಸಭಾತ್ಯಾಗ ಮಾಡಿದರು.

ಕುಮಾರಸ್ವಾಮಿ ಬಜೆಟ್ 2019: ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳಕುಮಾರಸ್ವಾಮಿ ಬಜೆಟ್ 2019: ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಬಜೆಟ್ ಮಂಡನೆ ಬಳಿಕ ಪ್ರತಿಕ್ರಿಯೆ ನೀಡಿದ ಬಿ.ಎಸ್.ಯಡಿಯೂರಪ್ಪ ಅವರು, 'ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಹಣ ಬಳಕೆ ಆಗಿಲ್ಲ. ಕೇವಲ ರೈತರ ಸಾಲಮನ್ನಾದ ಹೆಸರನ್ನು ಹೇಳುತ್ತಾ ಬಂದಿದ್ದಾರೆ' ಎಂದು ಆರೋಪಿಸಿದರು.

Yeddyurappa reaction on Karnataka budget 2019

'ಕುಮಾರಸ್ವಾಮಿ ಅವರು 43 ಸಾವಿರ ಕೋಟಿ ಒಂದೇ ಹಂತದಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ. 6500 ಕೋಟಿ ಈಗ ತೆಗೆದಿಟ್ಟಿದ್ದಾರೆ. ಅವರೇ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲಮನ್ನಾಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಹೇಳಿದ್ದಾರೆ' ಎಂದರು.

ಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶ ಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶ

'ಬಜೆಟ್‌ನಲ್ಲಿ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಈ ಬಜೆಟ್‌ ಕೊಡುಗೆ ಏನು?. ಜನರ ನಂಬಿಕೆಗೆ ದ್ರೋಹ ಮಾಡುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ' ಎಂದು ಯಡಿಯೂರಪ್ಪ ದೂರಿದರು.

English summary
Finance and Chief Minister of Karnataka H.D.Kumaraswamy presented 2019-20 budget on February 8, 2019. Opposition leader B.S.Yeddyurappa reaction on budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X