ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಹಿಡಿದು ದೆಹಲಿಗೆ ಹೊರಟ ಯಡಿಯೂರಪ್ಪ
Recommended Video

ಬೆಂಗಳೂರು, ಮಾರ್ಚ್ 07: ನಾಳೆ (ಮಾರ್ಚ್ 8) ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ದೆಹಲಿಗೆ ತೆರಳಲಿದ್ದು, ಬಿಜೆಪಿ ಲೋಕಸಭಾ ಚುನಾವಣೆ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ.
ಮುಂದಿನ ಕೆಲವೇ ದಿನಗಳಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುವ ಸರ್ವ ಸಾಧ್ಯತೆ ಇರುವ ಕಾರಣ ಯಡಿಯೂರಪ್ಪ ಅವರು ನಾಳೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿಕೊಳ್ಳಲಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಅನ್ನು ಭೇಟಿ ಮಾಡಲಿರುವ ಯಡಿಯೂರಪ್ಪ ಅವರು, ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ. ಆಕಾಂಕ್ಷಿಗಳ ಪಟ್ಟಿಯನ್ನೂ ಜೊತೆಗೊಯ್ಯಲಿರುವ ಯಡಿಯೂರಪ್ಪ ಹೈಕಮಾಂಡ್ ಬಳಿ ಚರ್ಚೆ ನಡೆಸಲಿದ್ದಾರೆ.

ಬಿಜೆಪಿಯ ಆಂತರಿಕ ಸಮೀಕ್ಷೆಯ ವರದಿ ಈಗಾಗಲೇ ಹೈಕಮಾಂಡ್ ತಲುಪಿದ್ದು, ಸಮೀಕ್ಷೆ ಹಾಗೂ ಯಡಿಯೂರಪ್ಪ ಅವರ ಪಟ್ಟಿಯನ್ನು ತಾಳೆ ನೋಡಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ.
ಟಿಕೆಟ್ ಜೊತೆಗೆ, ರಾಜ್ಯವು ಲೋಕಸಭೆ ಚುನಾವಣೆ ಸಂಬಂಧ ಮಾಡಿಕೊಂಡಿರುವ ತಯಾರಿ, ಪ್ರಚಾರ ಅಭಿಯಾನ ಮುಂತಾದ ವಿಷಯಗಳ ಬಗ್ಗೆಯೂ ವಿಸ್ತೃತ ಚರ್ಚೆ ನಾಳೆ ಆಗಲಿದೆ.
ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಕ್ಷೇತ್ರಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದ್ದು, ಹೈಕಮಾಂಡ್‌ನ ಆದೇಶಕ್ಕೆ ಬದ್ಧವಾಗಿರಬೇಕೆಂದು ಆಕಾಂಕ್ಷಿಗಳಿಗೆ ಸೂಚಿಸಲಾಗಿದೆ.












Click it and Unblock the Notifications