ಸಿದ್ದರಾಮಯ್ಯ ಹೆಸರಲ್ಲಿ 'ರಾಮ' ಬದಲು 'ರಾವಣ' ಇರಬೇಕಿತ್ತು!
ತುಮಕೂರು, ಜನವರಿ 11 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದರೆ ನನ್ನ ಹೆಸರಿನಲ್ಲಿಯೇ 'ರಾಮ' ಇದ್ದಾನೆ ಎಂದು ಹೇಳುತ್ತಾರೆ. ಅವರ ಹೆಸರಿನಲ್ಲಿ ರಾಮನ ಬದಲಾಗಿ 'ರಾವಣ' ಇರಬೇಕಿತ್ತು' ಎಂದು ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದರು.
ತುಮಕೂರಿನ ಶಿರಾದಲ್ಲಿ ಪಕ್ಷದ ಪರಿವರ್ತನಾ ಯಾತ್ರೆ ಸಮಾವೇಶ ಉದ್ದೇಶಿಸಿ ಗುರುವಾರ ಯಡಿಯೂರಪ್ಪ ಮಾತನಾಡಿದರು. 'ದೇಶದ 19 ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನಾಲ್ಕು ತಿಂಗಳು ಕಳೆದರೆ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬರಲಿದೆ' ಎಂದರು.

'ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ 6 ರಾಜ್ಯಗಳಲ್ಲಿ ಮಾತ್ರ ಪಕ್ಷ ಅಧಿಕಾರಲ್ಲಿತ್ತು. ಈಗ 19 ರಾಜ್ಯದಲ್ಲಿ ಅಧಿಕಾರಲ್ಲಿದೆ. ಮೋದಿ ಅಭಿವೃದ್ಧಿ ಕಾರ್ಯಗಳನ್ನು ದೇಶದ ಜನರ ಮೆಚ್ಚಿದ್ದಾರೆ. ಸಿದ್ದರಾಮಯ್ಯ ಮಾತ್ರ ಬಿಜೆಪಿಯನ್ನು ಉಗ್ರಗಾಮಿ ಎಂದು ಟೀಕಿಸುತ್ತಿದ್ದಾರೆ' ಎಂದರು.
'ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಡಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗುತ್ತದೆ. ರಾಜ್ಯದಲ್ಲಿ 28 ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿರುವ ಈ ಸಮುದಾಯ ಸಾಮಾಜಿಕ, ಆರ್ಥಿಕ ಉನ್ನತಿಗೆ ಸರ್ಕಾರ ಶ್ರಮಿಸಲಿದೆ' ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications