ಮಳೆಗಾಲದಲ್ಲಿ ದ್ವೀಪವಾಗುವ ಗ್ರಾಮದಲ್ಲಿ ಈಗ ಒಂದು ಹನಿ ನೀರಿಲ್ಲ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಯಾದಗಿರಿ, ಏಪ್ರಿಲ್ 16 : ಕೃಷ್ಣಾ ನದಿಗೆ ನೀರು ಬಂದಾಗ ಪ್ರತಿ ವರ್ಷ ಈ ಗ್ರಾಮ ದ್ವೀಪವಾಗುತ್ತದೆ. ಆದರೆ, ಈಗ ಭೀಕರ ಬರಗಾಲದಿಂದಾಗಿ ಗ್ರಾಮದಲ್ಲಿ ಕುಡಿಯಲು ಒಂದು ಹನಿ ನೀರು ಸಿಗುತ್ತಿಲ್ಲ. ಒಂದು ಬಿಂದಿಗೆ ನೀರು ತರಲು ಕಿಲೋಮೀಟರ್‌ಗಟ್ಟಲೇ ನಡೆಯುವುದು ಅನಿವಾರ್ಯವಾಗಿದೆ.

ಇದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡೆ ಎಂಬ ಗ್ರಾಮದ ಕಥೆ. ಮಳೆಬಂದಾಗ ಹೊರ ಊರಿನ ಸಂಪರ್ಕ ಕಡಿದುಕೊಂಡು ದ್ವೀಪವಾಗುವ ಗ್ರಾಮದಲ್ಲಿ ಈಗ ನೀರಿನ ಕೊರತೆ ಎದುರಾಗಿದೆ. ಗ್ರಾಮದ ಮಹಿಳೆಯರು, ಮಕ್ಕಳು, ಪುರುಷರು ಪ್ರತಿದಿನ ನೀರಿಗಾಗಿ ಹುಡುಕಾಟ ನಡೆಸಬೇಕಾಗಿದೆ. [ಭೀಕರ ಬರ, ಜನರ ಸುಲಿಗೆ ಮಾಡುತ್ತಿರುವ ಟ್ಯಾಂಕರ್ ಮಾಫಿಯಾ]

120 ಮನೆಗಳಿವೆ : ನೀಲಕಂಠರಾಯನಗಡ್ಡೆ ಗ್ರಾಮ ಸುಮಾರು 500 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು 120 ಕುಟುಂಬಗಳ ಸುಮಾರು 500 ಜನರು ಇಲ್ಲಿ ವಾಸವಾಗಿದ್ದಾರೆ. ಮಳೆ ಬಂದಾಗ ಇಲ್ಲಿನ ಜನರು ಜೋಳ, ಹೆಸರು, ತೊಗರಿ ಬೆಳೆಯುತ್ತಾರೆ. [ಉತ್ತರ ಕರ್ನಾಟಕ ಭಾಗಕ್ಕೆ ಮಹಾರಾಷ್ಟ್ರದಿಂದ 4 ಟಿಎಂಸಿ ನೀರು]

ಕಳೆದ ವರ್ಷ ಮಳೆ ಕಡಿಮೆ ಆಗಿದ್ದರಿಂದ ವರ್ಷಕ್ಕೆ ಆಗುವಷ್ಟು ಜೋಳ ಬೆಳೆಯಲು ಸಾಧ್ಯವಾಗಿಲ್ಲ. ಆದ್ದರಿಂದ, ಗ್ರಾಮದ ಹಲವು ಕುಟುಂಬಗಳು ನೀರು ಮತ್ತು ಕೆಲಸ ಅರಸಿ ಬೇರೆ ಪ್ರದೇಶಗಳಿಗೆ ಗುಳೆ ಹೋಗಿವೆ. [ನೀರು ಪೂರೈಕೆ ಲೋಪವಾದರೆ ಕಠಿಣ ಕ್ರಮ : ಸಿದ್ದು ಎಚ್ಚರಿಕೆ]

ಗ್ರಾಮದಲ್ಲಿ ಉಳಿದಿರುವ ಕೆಲವು ಕುಟುಂಬದ 10 ವರ್ಷದೊಳಗಿನ ಮಕ್ಕಳು ಸಹ ತಲೆ ಮೇಲೆ ಚಿಕ್ಕ ಪಾತ್ರೆ ಹೊತ್ತು ಹನಿ ನೀರಿಗಾಗಿ ಬತ್ತಿದ ಕೃಷ್ಣಾ ನದಿಯಲ್ಲಿ ಹುಡುಕಾಟ ನಡೆಸಬೇಕು. ಹಲವು ಬಾರಿ ಹುಡುಕಾಟ ನಡೆಸಿದರೂ ಬಿಂದಿಗೆ ತುಂಬಾ ನೀರು ಸಿಗುವುದಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ಭೀಕರ ಬರಕ್ಕೆ ಬತ್ತಿಹೋಗಿದೆ. [ಬತ್ತಿದ ಕೃಷ್ಣೆ, ಜಮಖಂಡಿಯಲ್ಲಿ ಹನಿ ನೀರಿಗೂ ತತ್ವಾರ!]

ಮಳೆಗಾಲದಲ್ಲಿ ಪ್ರವಾಹ : ಮಳೆಗಾಲದಲ್ಲಿ ನೀಲಕಂಠರಾಯನಗಡ್ಡೆ ಗ್ರಾಮ ದ್ವೀಪವಾಗುತ್ತದೆ. ಕೃಷ್ಣಾ ನದಿ ತುಂಬಿ ಹರಿಯುವಾಗ ಗ್ರಾಮದ ಜನರು ಪ್ರವಾಹ ನೋಡುತ್ತಾ ಕಾಲ ಕಳೆಯುತ್ತಾರೆ. ಮೂರರಿಂದ ನಾಲ್ಕು ತಿಂಗಳ ಕಾಲ ಗ್ರಾಮದ ಜನರು ಹೊಸ ಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
People of the Neelakantarayanagaddi village of Yadgir district Surpur taluk have always needed a ferry to reach the mainland. Living on an island in the middle of the Krishna river. Now drought has left the Krishna dry and the villagers walk for miles for the pot of drinking water.
Please Wait while comments are loading...