ಪೇಜಾವರ ಶ್ರೀಗಳ ಬಗ್ಗೆ ಯೋಗೇಶ್ ಮಾಸ್ಟರ್ ಹೀನಾಯ ವಿಡಂಬನೆ

Written By:
Subscribe to Oneindia Kannada

ಹಿಂದೂ ದೇವರು, ಪೂಜಾನುಪದ್ದತಿಗಳನ್ನು ಮನಬಂದಂತೆ ಲೇವಡಿ ಮಾಡುವ ಲೇಖಕ ಯೋಗೇಶ್ ಮಾಸ್ಟರ್, ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಉಡುಪಿ ಪೇಜಾವರ ಶ್ರೀಗಳನ್ನು ಹೀನಾಯವಾಗಿ ವಿಡಂಬನೆ ಮಾಡಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.

ಪಂಕ್ತಿಭೇದದ ವಿಚಾರದಲ್ಲಿ ಉಡುಪಿ ಕೃಷ್ಣಮಠಕ್ಕೆ ಮುತ್ತಿಗೆ ಹಾಕಿದರೆ, ಉಪವಾಸ ಕೂರುವುದಾಗಿ ಹೇಳಿರುವ ಪೇಜಾವರ ಶ್ರೀಗಳನ್ನು ಪುಟ್ಟಮಗುವಿಗೆ ಹೋಲಿಕೆ ಮಾಡಿರುವ ಯೋಗೇಶ್, ಶ್ರೀಗಳನ್ನು ' ಪೇಜೂ, ನಿಂದೊಳ್ಳೆ ಪೇಚು' ಎಂದು ಅಣಕವಾಡಿದ್ದಾರೆ.(ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಸುಮ್ನೆ ಬಿಡ್ತೀವಾ)

ಯೋಗೇಶ್ ಮಾಸ್ಟರ್ ಪೋಸ್ಟಿಗೆ ಪರವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಮ್ಮ ಹೇಳಿಕೆಯನ್ನು ವಿರೋಧಿಸಿದವರಿಗೆ ಯೋಗೇಶ್ ಮಾಸ್ಟರ್ ಪ್ರತ್ಯುತ್ತರ ನೀಡಿದ್ದಾರೆ. ಉಡುಪಿ ಚಲೋ ಕಾರ್ಯಕ್ರಮದ ಅಡ್ಡ ಪರಿಣಾಮ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗುತ್ತಿದೆ.

ನಾಡಿನ ಹಿರಿಯ ಯತಿಯೊಬ್ಬರ ಮೇಲೆ ಏಕವಚನ ಪ್ರಯೋಗಿಸಿ ಟೀಕಿಸಿರುವುದು ಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಮಠಕ್ಕೆ ಮತ್ತು ಭಕ್ತವೃಂದಕ್ಕೆ ಮಾಡಿದ ಅವಮಾನ ಇದೆಂದು ಭಕ್ತರು ಸಿಟ್ಟಾಗಿದ್ದಾರೆ.

ಯೋಗೇಶ್ ಮಾಸ್ಟರ್, ಶ್ರೀಗಳನ್ನು ವ್ಯಂಗ್ಯವಾಡಿದ್ದು ಮತ್ತು ತಮ್ಮ ಬರಹವನ್ನು ಸಮರ್ಥಿಸಿಕೊಂಡಿದ್ದು ಹೀಗೆ..ಮುಂದೆ ಓದಿ..

ಪೇಜಾವರ ಶ್ರೀಗಳನ್ನು ಪೇಜೂ ಎಂದು ಸಂಭೋದನೆ

ಪೇಜಾವರ ಶ್ರೀಗಳನ್ನು ಪೇಜೂ ಎಂದು ಸಂಭೋದನೆ

ಲೇಖಕ ಯೋಗೇಶ್ ಮಾಸ್ಟರ್ (ಯೋಗೇಶ್ ರಾಜಮಾರ್ಗ ಎನ್ನುವ ಅಕೌಂಟಿನಿಂದ) ತಮ್ಮ ಫೇಸ್ ಬುಕ್ ಟೈಂಲೈನಿನಲ್ಲಿ ಪೋಸ್ಟ್ ಮಾಡಿದ್ದನು ಇಲ್ಲಿ ಯಥಾವತ್ತಾಗಿ ಹಾಕಿದ್ದೇವೆ.

ಬರಹದ ಸಮರ್ಥನೆ

ಬರಹದ ಸಮರ್ಥನೆ

ತಮ್ಮ ಬರಹವನ್ನು ಸಮರ್ಥಿಸಿಕೊಂಡಿರುವ ಯೋಗೇಶ್, ನಮ್ಮ ಮನೆಯ ಹಿರಿಯ ಜೀವಿಗಳಿಗೆ ನೀನೂ ತಾನೂಂತಾನೇ ಮಾತಾಡೋದು. ಗುದ್ದಾಡ್ತಿರ್ತೀವಿ, ಮುದ್ದಾಡ್ತಿರ್ತೀವಿ. ಅವರು update ಆಗದ ಅಥವಾ ಆಗಲಿಚ್ಚಿಸದ ವಿಷಯಗಳಿಗೆ ಎಗರಾಡ್ತೀವಿ. ಅವ್ಯಾವುದೂ ಅವಹೇಳನ ಅಲ್ಲ ಎಂದಿದ್ದಾರೆ.

ಆಪ್ತವಾದಂತೇ ಹೆಸರು ಮೊಟಕಾಗುತ್ತದೆ

ಆಪ್ತವಾದಂತೇ ಹೆಸರು ಮೊಟಕಾಗುತ್ತದೆ

ಹೆಚ್ಚು ಹೆಚ್ಚು ಆಪ್ತವಾದಂತೆ ಕರೆಯುವ ಹೆಸರುಗಳು ಮೊಟಕಾಗುತ್ತವೆ. ಅದು ನಿಂದನೆ ಅಲ್ಲ. ಒಳಗೆ ಮನಸ್ಸಿಗೆ ಬಂದಂತೆ ಬೈದುಕೊಂಡು ಹೊರಗೆ ಮಾನ್ಯಶ್ರೀ, ಅವರು, ಇವರು, ತಾವು ತಮ್ಮ ಅಂತ ತೋರಿಕೆಯ ಮಾತಾಡುವವರು ನನ್ನ ದೃಷ್ಟಿಯಲ್ಲಿ ಹಿಪೋಕ್ರೈಟ್. ಆಷಾಡಭೂತಿಯಂತೆ ನಡೆದುಕೊಳ್ಳುವ ರೂಢಿಯೇ ನನಗಿಲ್ಲ - ಯೋಗೇಶ್ ಮಾಸ್ಟರ್.

ವರ್ಣಭೇದಕ್ಕೆ ನನ್ನ ವಿರೋಧ

ವರ್ಣಭೇದಕ್ಕೆ ನನ್ನ ವಿರೋಧ

ಇನ್ನು ಪಂಕ್ತಿಬೇಧ, ವರ್ಣಬೇಧ, ಶ್ರೇಣೀಕೃತ ಸಮಾಜವನ್ನು ರೂಪಿಸುವ ಶ್ರೇಷ್ಠತೆಯ ಗೀಳಿನ ಬ್ರಾಹ್ಮಣ್ಯದ ಮತ್ತು ಅದೇ ಬಗೆಯ ಇನ್ನಾವುದೇ ಪುರೋಹಿತಶಾಹಿಗಳು ಯಾವುದೇ ನಾಡಿನ ಸಾಮರಸ್ಯಕ್ಕೆ, ಪ್ರಗತಿಗೆ ಶಾಪ. ಅಂತಹುದ್ದೆಲ್ಲವನ್ನೂ ಖಂಡಿಸುತ್ತೇನೆ - ಯೋಗೇಶ್ ಮಾಸ್ಟರ್.

ಕೆಲವೊಂದು ಪ್ರತಿಕ್ರಿಯೆಗಳು

ಕೆಲವೊಂದು ಪ್ರತಿಕ್ರಿಯೆಗಳು

> ತನ್ನ ಬುದ್ಧಿ ಏನಿದ್ದರೂ ಮೊಣಕಾಲ ಕೆಳಗೆ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಮುಠ್ಠಾಳ ಮಾಸ್ಟರ್....
> ಪೇಜಾವರ ಶ್ರೀಗಳ ಪಾದದ ಧೂಳಿಗೂ ಸಮವಿಲ್ಲದ ನೀನು..
> ಇವರಿಗೆ ಉಡುಪಿಯ ಮುಸ್ಲಿಂ ‌ಕ್ರೈಸ್ತರೆಲ್ಲರೂ ಬುದ್ಧಿ ಕಲಿಸಿದ್ದಾರೆ ಬಿಡಿ...ಶ್ರೀಗಳ ಜೊತೆ ನಾವಿದ್ದೇವೆ ಎನ್ನುವ ಸಂದೇಶ ಸಾರಿದ್ದಾರೆ....ಕರ್ನಾಟಕದಲ್ಲಿ ಎಲ್ಲರಿಗೂ ಗೊತ್ತು ಶ್ರೀಗಳ ಸಮಾಜ ಸೇವೆ ಏನೆಂಬುದು....ಇಂತ ಹಂದಿಗಳು ಕೊಚ್ಚೆಯಿಂದ ಎದ್ದು ಬಂದು ಕಣ್ಣೊರೆಸಿ ನೋಡಿದರೆ ತಿಳಿಯುತ್ತದೆ ಅವರ ನಿಷ್ಕಲ್ಮಶ ಸೇವೆ ಏನೆಂಬುದು....ಸುಮ್ಮನೆ ಅಧಿಕಪ್ರಸಂಗಿತನ ಮಾಡಿ ಮರ್ಯಾದೆ ತೆಕ್ಕೊಳ್ತಿದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Writer Yogesh Master controversial status on Udupi Pejawar Seer in his Facebook wall.
Please Wait while comments are loading...