ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗತ್‌ಸಿಂಗ್ ಲೇಖನಕಾರ ಪಠ್ಯದಲ್ಲಿ ಸೇರ್ಪಡೆಗೆ ಅಸಮ್ಮತಿ- ಡಾ. ಜಿ ರಾಮಕೃಷ್ಣ

|
Google Oneindia Kannada News

ಬೆಂಗಳೂರು, ಮೇ 25: ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಸಾಹಿತಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ದೇವನೂರು ಮಹಾದೇವರವರು ತಮ್ಮ ಕಥನ ಸೇರ್ಪಡೆಯನ್ನು ಹಿಂಪೆಡೆದಿದ್ದೆೇನೆ ಎಂದು ಹೇಳಿದ ಬೆನ್ನಲ್ಲೇ ಮತ್ತೊಬ್ಬ ಸಾಹಿತಿ ಡಾ. ಜಿ ರಾಮಕೃಷ್ಣರವರು ಸಹ ತಮ್ಮ ಬರಹ ಸೇರ್ಪಡೆಗೆ ನನ್ನ ಸಮ್ಮತಿ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದದಲ್ಲಿ ಡಾ. ಜಿ ರಾಮಕೃಷ್ಣ ಬರೆದ ಭಗತ್ ಸಿಂಗ್ ಎಂಬ ಲೇಖನವಿತ್ತು.

ಜಿ. ರಾಮಕೃಷ್ಣರವರ ಸ್ಪಷ್ಟನೆ

"ನಮ್ಮ ರಾಜ್ಯದ ಶಾಲೆಗಳ ಪಠ್ಯಪುಸ್ತಕಗಳ ತಥಾಕಥಿತ ಪರಿಷ್ಕರಣೆಯು ತೀರಾ ಅಪಾಮಾರ್ಗದಲ್ಲಿ ಸಾಗುತ್ತಿರುವುದು ಜಗಜ್ಜಾಹೀರಾಗಿದೆ. ಅದು ಕೇವಲ ಅಬದ್ಧ ಮತ್ತು ಅವೈಚಾರಿಕ ಪ್ರಕ್ರಿಯೆಯಾಗಿ ಉಳಿದಿಲ್ಲ. ಶಿಕ್ಷಣವನ್ನು ಕೆಟ್ಟ ರಾಜಕೀಯಕ್ಕೆ ಗುರಿ ಮಾಡಲಾಗುತ್ತಿರುವುದು ಸರ್ವಥಾ ಕ್ಷಮಾರ್ಹವಲ್ಲ. ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿ ದುರಂತ," ಎಂದು ಜಿ. ರಾಮಕೃಷ್ಣ ಹೇಳಿದ್ದಾರೆ.

Writer G Ramakrishna Asked Committee to Drop a Lesson Which Is Written by Him

ಈ ಹಿನ್ನೆಲೆಯಲ್ಲಿ ನನ್ನ ಯಾವುದೇ ಬರಹವನ್ನು ಪಠ್ಯಪುಸ್ತಕದ ಪರಿಧಿಯಿಂದ ಹೊರಗಿಡುವುದು ಸೂಕ್ತವೆಂದು ಭಾವಿಸಿ ನನ್ನ ಯಾವುದಾದರು ಬರಹವನ್ನು ಆಯ್ಕೆ ಮಾಡಿಕೊಂಡಿದ್ದರು ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲವೆಂಬುದನ್ನು ಖಚಿತಪಡಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಯಾವ ಸಾಹಿತಿಯೂ ಪ್ರತಿಭಟನೆ ತೋರಿರಲಿಲ್ಲ:
ಯಾವ ಸಾಹಿತಿಯೂ, ಯಾವ ಸರ್ಕಾರದ ಅವಧಿಯಲ್ಲೂ ತಮ್ಮ ಪಠ್ಯಕ್ಕೆ ಅಸಮ್ಮತಿ ಸೂಚಿಸುವ ಮೂಲಕ ಪ್ರತಿಭಟನೆ ತೋರಿಸಿದ್ದಿಲ್ಲ. ದೇವನೂರು, ಜಿ ರಾಮಕೃಷ್ಣರಂತಹ ಹಿರಿಯರನ್ನು ಅವಮಾನಿಸಿ, ನೋಯಿಸುತ್ತಾ ಪಠ್ಯಗಳ ಮೂಲಕ ಬೌದ್ಧಿಕ ಭಯೋತ್ಪಾದನಾ ಚಟುವಟಿಕೆ'ಯನ್ನು ಮುಂದುವರೆಸಿದಲ್ಲಿ ಸರ್ಕಾರ ತೀವ್ರ ಚಳವಳಿಯನ್ನು ಎದುರಿಸಬೇಕಾಗುತ್ತದೆ, ಎಚ್ಚರವಿರಲಿ ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಕೂ ಮಾಡಿದ್ದಾರೆ.

ಇತಿಹಾಸದುದ್ದಕ್ಕೂ ತಳಸಮುದಾಯಗಳಿಗೆ ಅಕ್ಷರಗಳನ್ನು ವಂಚಿಸಿ ಗುಲಾಮಗಿರಿಗೆ ತಳ್ಳಿದ್ದ ಪಟ್ಟಭದ್ರ ಹಿತಾಸಕ್ತಿಗಳು ಈಗ ಅದೇ ಕೆಲಸಕ್ಕೆ ಅಕ್ಷರಗಳನ್ನು ಬಳಸಿಕೊಳ್ಳಲು ಹೊರಟಿವೆ. ಅದರ ಬಾಗವೇ ಈ ಪಠ್ಯ ಪುಸ್ತಕ ಪರಿಷ್ಕರಣೆ. ಈ ನೆಲದ ಸಾಕ್ಷಿಪ್ರಜ್ಞೆಗಳಾದ ದೇವನೂರು ಮಹಾದೇವ, ಜಿ. ರಾಮಕೃಷ್ಣರಂತಹ ಹಿರಿಯರ ಆತ್ಮಾಭಿಮಾನವನ್ನು ಕೆಣಕಿದೆ ಸರ್ಕಾರ ಎಂದು ಅವರು ಹೇಳಿದ್ದಾರೆ.

English summary
Karnataka Text book row : Writer Dr Ramakrishna follow Devanoor Mahadeva & asked committee to drop a lesson which is written by him. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X