• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ

|

ಬೆಂಗಳೂರು, ಫೆಬ್ರವರಿ 25: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2017ನೇ ಸಾಲಿನ ಪತ್ರಕರ್ತರ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಅತ್ಯುತ್ತಮ ಲೇಖನಗಳಿಗೆ (ವರದಿ) ಹಾಗೂ ಪ್ರತಿಷ್ಠಾನದ ಪ್ರಶಸ್ತಿಗಳನ್ನು ಸಂಘವು ಇಂದು ಪ್ರಕಟಿಸಿದ್ದು, ಸುತ್ತೂರು ಮಠದಲ್ಲಿ ನಡೆಯುವ ಕಾರ್ಯನಿರತ ಪತ್ರಕರ್ತರ ಸಂಘದ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರತಿಭಟನೆ: ಹೆಲ್ಮೆಟ್ ಧರಿಸಿ ಬಿಜೆಪಿ ಕಾರ್ಯಕ್ರಮಕ್ಕೆ ಹೋದ ವರದಿಗಾರರು!

ಅತ್ಯುತ್ತಮ ಗ್ರಾಮಾಂತರ ವರದಿಗೆ ಜಿ.ನಾರಾಯಣಸ್ವಾಮಿ ಪ್ರಶಸ್ತಿ ಇಮಾಂಮ್.ಬಿ.ನದಾಫ್ ಬೇವಿನಕೊಪ್ಪ ಗ್ರಾಮ ಬೆಳಗಾವಿ ಜಿಲ್ಲೆ. ಅತ್ಯುತ್ತಮ ಮಾನವೀಯ ವರದಿಗೆ ಪಟೇಲ್ ಬೈರಹನುಮಯ್ಯ ಪ್ರಶಸ್ತಿ ಗಂಗಾಧರ.ವಿ.ರೆಡ್ಡಿಹಳ್ಳಿ, ಪ್ರಜಾವಾಣಿ ವರದಿಗಾರರು ಮಧುಗಿರಿ ಇವರಿಗೆ, ಅತ್ಯುತ್ತಮ ಅಪರಾಧ ವರದಿಗೆ ಗಿರಿಧರ ಪ್ರಶಸ್ತಿಯನ್ನು ವಿಜಯವಾಣಿಯ ಗೋವಿಂದರಾಜುಗೆ ನೀಡಲಾಗಿದೆ.

ಅತ್ಯುತ್ತಮ ಸ್ಕೂಪ್ ವರದಿಗೆ ವೆಂಕಟರಾಂ ಪ್ರಶಸ್ತಿ ವಿಜವಾಣಿಯ ಹರೀಶ್ ಬೇಲೂರು ಅವರಿಗೆ, ಅತ್ಯುತ್ತಮ ಕ್ರೀಡಾ ವರದಿಗೆ ಕೆ.ಎ.ನೆಟ್ಟಕಲ್ಲಪ್ಪ ಪ್ರಶಸ್ತಿಯನ್ನು ವಿಜಯಕರ್ನಾ ಟಕದ ಬಾಲಚಂದ್ರ ರೂಗಿ, ಸುದ್ದಿ ವಿಮರ್ಶೆಗೆ ಖದ್ರಿ ಶಾಮಣ್ಣ ಪ್ರಶಸ್ತಿಯನ್ನು ಕೆ.ಎಂ.ಶಿವರಾಜು ಅವರಿಗೆ ನೀಡಲಾಗಿದೆ.

ಪುಣೆಯಲ್ಲಿ ಕಾಶ್ಮೀರಿ ಮೂಲದ ಪತ್ರಕರ್ತನ ಮೇಲೆ ಹಲ್ಲೆ

ವಾರಪತ್ರಿಕೆಗೆ ಮೀಸಲಾದ ಮಂಗಳ ವರ್ಗೀಸ್ ಪ್ರಶಸ್ತಿಯನ್ನು ಶ್ರೀರಂಗಪಟ್ಟಣದ ಗಣಂಗೂರು ನಂಜೇಗೌಡ ಅವರಿಗೆ ನೀಡಲಾಗಿದೆ. ಅತ್ಯುತ್ತಮ ಸುದ್ದಿ ಛಾಯಾಚಿತ್ರ ಪ್ರಶಸ್ತಿ ರಾಮಣ್ಣ ಚಿನ್ನಪ್ಪ ನಗ್ಗಿ ಅವರಿಗೆ, ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ ವಿಜಯ ಕರ್ನಾಟಕದ ಕಂದೂರು ಉಮೇಶ್ ಭಟ್ ಅವರಿಗೆ ಪ್ರಶಸ್ತಿ ಕೊಡಲಾಗಿದೆ.

ಎಂಜೆ ಅಕ್ಬರ್ ಕೇಸ್ : ಪತ್ರಕರ್ತೆ ಪ್ರಿಯಾ ರಮಣಿಗೆ ಜಾಮೀನು

ವನ್ಯ ಪ್ರಾಣಿಗಳ ಕುರಿತ ಉತ್ತಮ ಲೇಖನಕ್ಕೆ ಕನ್ನಡ ಪ್ರಭದ ವಿಘ್ನೇಶ್ ಭೂತನಕಾಡು ಅವರಿಗೆ, ಆರ್ಥಿಕ ದುರ್ಬಲ ವರ್ಗದವರ ಕುರಿತು ವಿಶೇಷ ಲೇಖನಕ್ಕೆ ಅರುಣ್ ಯಾದವಾಡ, ಅತ್ಯುತ್ತಮ ಕೃಷಿ ವರದಿ ಪ್ರಜಾವಣಿಯ ಆರ್.ಮಂಜುನಾಥ, ಹಾಸ್ಯ ಲೇಖನಕ್ಕೆ ಪ್ರಜಾವಾಣಿಯ ಘನಶಾಮ ಅವರಿಗೆ ಪ್ರಶಸ್ತಿ ದೊರೆತಿದೆ.

ಬೆಂಗಳೂರು ನಿರ್ಮಾತೃ ಕೆಂಪೆಗೌಡ ಪ್ರಶಸ್ತಿಗೆ ನಾಲ್ಕು ಮಂದಿ ಆಯ್ಕೆ ಆಗಿದ್ದಾರೆ. ಹಲವು ದತ್ತಿ ಪ್ರಶಸ್ತಿಗಳಿಗೆ ಸಹ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

English summary
Working journalists organization 2017 award announced today. Many Kannada journalists were named in the award list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X