ಕಾರ್ಮಿಕರಿಗೆ 10 ಗಂಟೆ ಕೆಲಸ; ಆದೇಶ ವಾಪಸ್ ಪಡೆದ ಸರ್ಕಾರ

ಬೆಂಗಳೂರು, ಜೂನ್ 12 : ಕಾರ್ಮಿಕರ ಕೆಲಸದ ಅವಧಿಯನ್ನು 10 ತಾಸಿಗೆ ಏರಿಕೆ ಮಾಡಿ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಸರ್ಕಾರ ವಾಪಸ್ ಪಡೆದಿದೆ. ಸರ್ಕಾರದ ಆದೇಶದ ಬಗ್ಗೆ ಭಾರಿ ಚರ್ಚೆ ಆರಂಭವಾಗಿತ್ತು.

Recommended Video

      ಇವರಿಗೇ ಪರಿಷತ್ ಸ್ಥಾನ ಕೊಡಬೇಕು ಎಂದ ಸಚಿವ ಎಸ್.ಟಿ ಸೋಮಶೇಖರ್ | ST Somashekar | Oneindia Kannada

      ಕರ್ನಾಟಕ ಸರ್ಕಾರ ಮೇ 22ರಂದು ಈ ಕುರಿತು ಆದೇಶ ಹೊರಡಿಸಿತ್ತು. ಆದೇಶದ ಪ್ರಕಾರ ಮೂರು ತಿಂಗಳ ಕಾಲ ಅಂದರೆ ಆಗಸ್ಟ್ 21, 2020ರ ತನಕ ಕಾರ್ಮಿಕರು 10 ತಾಸು ಕೆಲಸ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

      ರಾಜ್ಯದಲ್ಲಿ ಕಾರ್ಖನೆಗಳ ಕಾಯ್ದೆ 1948ರ ಅಡಿ ನೋಂದಣಿಯಾದ ಕಾರ್ಖಾನೆಗಳಲ್ಲಿ ಕಾರ್ಮಿಕರು ಪ್ರತಿದಿನ 8ರ ಬದಲು 10 ತಾಸು ಕೆಲಸ ಮಾಡಬೇಕು. ವಾರಕ್ಕೆ 60 ಗಂಟೆ ಕೆಲಸವಾಗಬೇಕು ಎಂದು ಸೂಚನೆ ನೀಡಲಾಗಿತ್ತು.

      Working Hour Extended To 10 Hours Notification Withdrawn

      ಸರ್ಕಾರ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಕಾರ್ಮಿಕ ಇಲಾಖೆ ಉಪ ಕಾರ್ಯದರ್ಶಿ ಸಂಧ್ಯಾ ಎಲ್. ನಾಯಕ್ ಹೇಳಿದ್ದಾರೆ. ಹಲವಾರು ಕಾರ್ಮಿಕ ಸಂಘಟನೆಗಳು ಸರ್ಕಾರದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದವು.

      ಕೇಂದ್ರ ಸರ್ಕಾರ ಈ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳು ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿದ್ದವು. ಈಗ ಎಲ್ಲಾ ರಾಜ್ಯಗಳು ಆದೇಶವನ್ನು ವಾಪಸ್ ಪಡೆದಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+